Advertisement

ಲೀಥಿಯಂಗೆ ದಾಳಿ ಭೀತಿ: ಕಾಶ್ಮೀರದಲ್ಲಿನ ನಿಕ್ಷೇಪದ ಮೇಲೆ ಉಗ್ರರಿಂದ ದಾಳಿ ಬೆದರಿಕೆ

11:34 PM Feb 13, 2023 | Team Udayavani |

ಹೊಸದಿಲ್ಲಿ: ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪತ್ತೆಯಾದ ಲೀಥಿಯಂ ನಿಕ್ಷೇಪದ ಮೇಲೂ ಉಗ್ರರ ಕಣ್ಣು ಬಿದ್ದಿದೆ. ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಬೆಂಬಲಿತ ಪೀಪಲ್ಸ್‌ ಆ್ಯಂಟಿ ಫ್ಯಾಸಿಸ್ಟ್‌ ಫ್ರಂಟ್‌(ಪಿಎಎಫ್ಎಫ್) ಈ ನಿಕ್ಷೇಪದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದೆ.

Advertisement

3 ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಇಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪವಿರುವುದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ಪತ್ರವೊಂದನ್ನು ಬಿಡುಗಡೆ ಮಾಡಿರುವ ಪಿಎಎಫ್ಎಫ್, ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ವಿರುದ್ಧ ತಿರುಗಿಬೀಳುವಂತೆ ಸ್ಥಳೀಯರನ್ನು ಪ್ರಚೋದಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ‌ರಾಬಾದ್‌ನಿಂದ ಈ ಪತ್ರವನ್ನು ಪೋಸ್ಟ್‌ ಮಾಡಲಾಗಿದೆ.

“ಜಮ್ಮು-ಕಾಶ್ಮೀರದ ಸಂಪ ನ್ಮೂಲಗಳನ್ನು ಭಾರತದ ಯಾವುದೋ ಒಂದು ಕಂಪೆನಿ ಬಂದು ಲೂಟಿ ಮಾಡಲು ನಾವು ಬಿಡುವುದಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಅದರ ಮೇಲೆ ಡ್ರೋನ್‌ವೊಂದರ ಚಿತ್ರವನ್ನೂ ಹಾಕಲಾಗಿದೆ. ಈ ಮೂಲಕ, ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳ ವಣಿಗೆಗಳ ಮೇಲೂ ನಾವು ಕಣ್ಣಿಟ್ಟಿದ್ದೇವೆ ಎಂಬ ಸಂದೇಶ ರವಾನಿಸಲಾಗಿದೆ.

ತಜ್ಞರು ಏನನ್ನುತ್ತಾರೆ?: ಈವರೆಗೆ ಕಣಿವೆಯು ಸೇಬು ಮತ್ತು ಪ್ರವಾ ಸೋದ್ಯಮಕ್ಕೆ ಮಾತ್ರ ಹೆಸರಾಗಿತ್ತು. ಮುಂದೆ ಇದು ದೇಶದ ಲೀಥಿಯಂ ಪೂರೈಕೆದಾರನೆಂಬ ಹಿರಿಮೆ ಗಳಿಸಲಿದೆ. ಗಣಿ ಕೈಗಾರಿಕೆ ಮತ್ತು ಇವಿ ಉತ್ಪಾದನ ಕಂಪೆನಿಗಳು ಸ್ಥಳೀಯ ಯುವಕರಿಗೆ ಭಾರೀ ಉದ್ಯೋಗಾವಕಾಶಗಳನ್ನು ಕಲ್ಪಿಸಲಿವೆ. ಇದು ಪಾಕ್‌ ಐಎಸ್‌ಐಗೆ ತೀವ್ರ ಹಿನ್ನಡೆ ಉಂಟು ಮಾಡಲಿದೆ ಎಂದು ಸೈಬರ್‌ ಗುಪ್ತಚರ ವಿಶ್ಲೇಷಕ ನೀಲೇಶ್‌ ಪುರೋಹಿತ್‌ ಹೇಳಿದ್ದಾರೆ. ಅಲ್ಲದೇ ಯುವಕರಿಗೆ ಉದ್ಯೋಗ ದೊರೆತಷ್ಟೂ, ಅವರು ಜಿಹಾದಿ ಮತ್ತು ಒಳನುಸುಳುವಿಕೆ ಜಾಲದಿಂದ ದೂರ  ವುಳಿಯುತ್ತಾರೆ. ಇದನ್ನು ಅರಗಿಸಿಕೊಳ್ಳಲು ಉಗ್ರ ಸಂಘ ಟನೆ ಗಳಿಗೆ ಸಾಧ್ಯವಾಗುತ್ತಿಲ್ಲ. ಅದರ ಪರಿಣಾಮವೇ ಈ ಬೆದರಿಕೆ ಪತ್ರ ಎಂದು ಇನ್ನೂ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂನಲ್ಲಿ ಅರ್ಜಿ ವಜಾ
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳ ಪುನರ್‌ವಿಂಗಡಣೆಗಾಗಿ ಆಯೋಗ ರಚಿಸಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ. ಕಾಶ್ಮೀರದ ಇಬ್ಬರು ನಿವಾಸಿಗಳು ಈ ಅರ್ಜಿ ಸಲ್ಲಿಸಿದ್ದರು.

Advertisement

ಪತ್ರದಲ್ಲಿ ಏನಿದೆ?
ಜಮ್ಮು ಮತ್ತು ಕಾಶ್ಮೀರದ ನೈಸರ್ಗಿಕ ಸಂಪನ್ಮೂಲಗಳನ್ನು ಯಾರೋ ಕದ್ದೊಯ್ಯುವುದನ್ನು ನಾವು ಸಹಿಸುವುದಿಲ್ಲ. ಅವರು ಇಲ್ಲಿಗೆ ಬಂದು ನಮ್ಮ ಭೂಮಿಯನ್ನು ವಶಕ್ಕೆ ಪಡೆ ಯುತ್ತಾರೆ, ಮನೆಗಳನ್ನ ಧ್ವಂಸ ಮಾಡುತ್ತಾರೆ, ಸಂಪನ್ಮೂಲಗಳನ್ನು ಕದ್ದೊಯ್ಯುತ್ತಾರೆ. ಕೊನೆಗೆ ನರ ಮೇಧ ಮಾಡುತ್ತಾರೆ. ಈ ಸಂಪ ನ್ಮೂಲ ಇಲ್ಲಿನ ಜನರಿಗೆ ಸೇರಿದ್ದು. ಅದನ್ನು ಇಲ್ಲಿನ ಜನರ ಕ್ಷೇಮಾ ಭಿವೃದ್ಧಿಗಾಗಿಯೇ ಬಳಸಬೇಕು. ಇಲ್ಲಿಗೆ ಕಾಲಿಡುವ ಭಾರತೀಯ ಕಂಪೆನಿಗಳ ಮೇಲೆ ನಾವು ದಾಳಿ ಮಾಡಲಿದ್ದೇವೆ. ನಾವು ಯಾರು ಎಂದು ತಿಳಿದವರಿಗೆ ನಮ್ಮ ಉದ್ದೇಶ ಈಡೇರಿಸಿಕೊಳ್ಳುವ ನಾವು ಯಾವ ಹಂತಕ್ಕೆ ಹೋಗುತ್ತೇವೆ ಎಂಬುದೂ ಗೊತ್ತಿದೆ. ಆದರೆ ಅಂತಾರಾಷ್ಟ್ರೀಯ ಕಂಪೆನಿಗಳು ಜಮ್ಮು-ಕಾಶ್ಮೀರಕ್ಕೆ ಬಂದು ಸಂಪ ನ್ಮೂಲಗಳನ್ನು ಅಭಿವೃದ್ಧಿಪಡಿಸಲು ನಾವು ಸಮ್ಮತಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next