Advertisement
ಕಲ್ಲುತೂರಾಟದ ಸದ್ದಿಲ್ಲಕಾಶ್ಮೀರ ಎಂದಾಕ್ಷಣ ಕಣ್ಣಿಗೆ ರಾಚುತ್ತಿದ್ದ ಕಲ್ಲು ತೂರಾಟದ ದೃಶ್ಯಗಳು ಈಗ ಜನರ ಮನಸ್ಸಿಂದ ಮರೆಯಾಗಿದೆ. ಏಕೆಂದರೆ ನಾಲ್ಕು ವರ್ಷಗಳಲ್ಲಿ ಕಣಿವೆಯಲ್ಲಿ ಒಂದೇ ಒಂದು ಕಲ್ಲುತೂರಾಟದ ಪ್ರಕರಣಗಳು ನಡೆದಿಲ್ಲ. ಅದಕ್ಕೂ ಹಿಂದೆ ಅಂದರೆ 2016ರಿಂದ 2019ರ ಅವಧಿಯಲ್ಲಿ ಪ್ರತಿಭಟನೆ, ಕಲ್ಲುತೂರಾಟದ ವೇಳೆ ನಡೆದ ಘರ್ಷಣೆಯಲ್ಲಿ 124 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಣಿವೆಯಲ್ಲಿ ಕಲ್ಲುಗಳು “ನಿರ್ನಾಮ’ದ ಬದಲಾಗಿ “ನಿರ್ಮಾ ಣ’ಕ್ಕೆ ಬಳಕೆಯಾಗುತ್ತಿವೆ. ಕ್ರೀಡಾಂಗಣಗಳು, ಕೌಶಲಾಭಿವೃದ್ಧಿ ಕೇಂದ್ರಗಳು, ಸ್ವಸಹಾಯ ಸಂಘಗಳು, ಶಾಲೆ-ಕಾಲೇಜುಗಳು ತಲೆಎತ್ತಿವೆ.
ವಿಶೇಷ ಸ್ಥಾನಮಾನ ರದ್ದು ನಿರ್ಧಾರವು ಕಣಿವೆ ಯಲ್ಲಿ ರಾರಾಜಿಸುತ್ತಿದ್ದ ಭಯೋತ್ಪಾದಕರಿಗೆ ಮರ್ಮಾಘಾತ ನೀಡಿದ್ದನ್ನು ಅಂಕಿಅಂಶಗಳೇ ದೃಢಪಡಿಸುತ್ತವೆ. ಸ್ಥಳೀಯ ಯುವಕರ ತಲೆ ಯಲ್ಲಿ ವಿಷ ತುಂಬಿ ಭಯೋತ್ಪಾದನೆಗೆ ನೇಮಕ ಮಾಡುತ್ತಿದ್ದ ಪಾಕ್ ಪ್ರೇರಿತ ಉಗ್ರಗಾಮಿ ಸಂಘ ಟನೆಗಳಿಗೆ 370ನೇ ವಿಧಿ ರದ್ದು ದೊಡ್ಡ ಪೆಟ್ಟು ನೀಡಿತು. ಪರಿಣಾಮ, 4 ವರ್ಷಗಳಲ್ಲಿ ಉಗ್ರ ಸಂಘಟನೆಗಳಿಗೆ ಯುವಕರ ನೇಮಕ ಗಣನೀ ಯವಾಗಿ ತಗ್ಗಿದ್ದು, ಭದ್ರತಾಪಡೆಗಳ ಗುಂಡಿಗೆ ಬಲಿಯಾಗುವ ಯುವಕರ ಸಂಖ್ಯೆಯೂ ಇಳಿಮುಖವಾಯಿತು. ಪ್ರಸಕ್ತ ವರ್ಷದ ಜ.1 ರಿಂದ ಆ.5ರವರೆಗೆ ಭದ್ರತಾಪಡೆಗಳು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ ಸುಮಾರು 35 ಉಗ್ರರು ಹತರಾಗಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಸಂಖ್ಯೆ 12 ಆಗಿತ್ತು. 2022ರಲ್ಲಿ 56 ವಿದೇಶಿ ಉಗ್ರರು ಸೇರಿದಂತೆ 186 ಭಯೋ ತ್ಪಾದಕರ ಸಂಹಾರ ನಡೆದಿತ್ತು. ಭದ್ರತಾ ಪರಿಸ್ಥಿತಿ ಸುಧಾರಣೆ
ಉಗ್ರರ ಸ್ವರ್ಗವಾಗಿದ್ದ ಕಣಿವೆಯಲ್ಲಿ ಹಿಂದೆಲ್ಲ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿ ಸಲು ಸಂಘ-ಸಂಸ್ಥೆಗಳು ಹಿಂದೇಟು ಹಾಕುತ್ತಿ ದ್ದವು. ಆದರೆ 2019ರ ಬಳಿಕ ಅಲ್ಲಿನ ಭದ್ರತಾ ಪರಿಸ್ಥಿತಿಯಲ್ಲಿ ಅಚ್ಚರಿಯ ಸುಧಾರಣೆಗಳಾಗಿವೆ. ಭಾರತ ವಿರೋಧಿ ಚಟುವಟಿಕೆಗಳ ಹಬ್ ಎಂದೇ ಕುಖ್ಯಾತಿ ಪಡೆದಿದ್ದ ಶೋಪಿಯಾನ್ ಜಿಲ್ಲೆಯಲ್ಲಿ ಇದೇ ವರ್ಷದ ಆ.3ರಂದು ನಡೆದ ದೊಡ್ಡ ಮಟ್ಟದ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿ. ಸಮಾವೇಶದಲ್ಲಿ ದೇಶದ ಮೂಲೆಮೂಲೆ ಗಳಿಂದಲೂ ನೂರಾರು ವಿದ್ಯಾರ್ಥಿಗಳು, ನಾಗರಿಕರು ನಿರ್ಭೀತಿಯಿಂದ ಪಾಲ್ಗೊಂಡು, ದೇಶ ನಿರ್ಮಾಣದ ಕುರಿತು ಸಂವಾದ ನಡೆಸಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ20 ರಾಷ್ಟ್ರಗಳ ಪ್ರವಾಸೋದ್ಯಮ ಸಭೆ ಕೂಡ ಸಾಂಗವಾಗಿ ನೆರವೇರಿತು.
Related Articles
370ನೇ ವಿಧಿಯ ರದ್ದತಿಯಿಂದ ಸೃಷ್ಟಿಯಾದ ಜಮ್ಮು-ಕಾಶ್ಮೀರ ಇನ್ನು ಸೇಫ್ ಎಂಬ ಭಾವ ನೆಯು ಕಣಿವೆಯತ್ತ ಭಾರೀ ಪ್ರಮಾಣದ ಬಂಡ ವಾಳ ಹರಿದುಬರುವಂತೆ ಮಾಡಿತು. ಈಗಾಗಲೇ ಕೇಂದ್ರಾಡಳಿತ ಪ್ರದೇಶದಲ್ಲಿ 25,000 ಕೋಟಿ ರೂ.ಗಳ ಯೋಜನೆಗಳು ಅನುಷ್ಠಾನಗೊಂ ಡಿದ್ದು, 80 ಸಾವಿರ ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವಗಳು ಒಪ್ಪಿಗೆಗೆ ಕಾಯುತ್ತಿವೆ. ಸ್ವಾತಂತ್ರಾé ನಂತರ 2019ರವರೆಗೆ ಕೇವಲ 14 ಸಾವಿರ ಕೋಟಿ ರೂ. ಮೊತ್ತದ ಖಾಸಗಿ ಹೂಡಿಕೆಗಳಷ್ಟೇ ಹರಿದುಬರಲು ಸಾಧ್ಯವಾಗಿತ್ತು. ಆದರೆ ಈಗ ಕೇವಲ 2 ವರ್ಷಗಳಲ್ಲೇ 81,122 ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವಗಳನ್ನು ಕೇಂದ್ರಾಡಳಿತ ಪ್ರದೇಶವು ಸ್ವೀಕರಿಸಿದೆ.
Advertisement
ಪ್ರವಾಸೋದ್ಯಮಕ್ಕೆ ಬೂಸ್ಟ್ಭಯೋತ್ಪಾದಕರ ಅಟ್ಟಹಾಸದಿಂದ ನಲುಗಿ ಹೋಗಿದ್ದ ಜಮ್ಮು-ಕಾಶ್ಮೀರವು ಈಗ ಭೂಲೋ ಕದ ಸ್ವರ್ಗ ಎಂಬ ಕಿರೀಟವನ್ನು ಮತ್ತೆ ಮುಡಿಗೇ ರಿಸಿಕೊಂಡಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಕಣಿವೆಯ ಅದಮ್ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೋಗುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ವಾಗಿ ಹೆಚ್ಚಳವಾಗಿದೆ. ಈಗ ಕೇಂದ್ರಾಡಳಿತ ಪ್ರದೇ ಶವು ಭಾರತದ ಟಾಪ್ ಪ್ರವಾಸಿತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಮರಳಿ ಪಡೆದಿದೆ. ಕಳೆದ ವರ್ಷ ಜಮ್ಮು-ಕಾಶ್ಮೀರಕ್ಕೆ 1.88 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ ಇದು 2 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಭೂಮಿ ಖರೀದಿ
370ನೇ ವಿಧಿ ರದ್ದತಿಯ ಬಳಿಕ ದೇಶದ ಬೇರೆಡೆಯ ಜನರೂ ಇಲ್ಲಿ ಭೂಮಿ(ಕೃಷಿ ಭೂಮಿ ಹೊರತುಪಡಿಸಿ) ಖರೀದಿ ಸಲು ಸಾಧ್ಯ ವಾಯಿತು. ಕಣಿವೆಯಲ್ಲಿ ಭೂಮಿ ಖರೀದಿಸಲು ಬಂದರೆ ಸುಮ್ಮನಿರಲ್ಲ ಎಂಬ ಉಗ್ರ ಸಂಘಟನೆಗಳ ಬೆದರಿಕೆಯ ಹೊರತಾಗಿಯೂ ಸುಮಾರು 185 ಮಂದಿ ಕೇಂದ್ರಾಡಳಿತ ಪ್ರದೇಶದಲ್ಲಿ ಜಮೀನು ಖರೀದಿಸಿದ್ದಾರೆ. 2020ರಲ್ಲಿ ಕೇವಲ ಒಬ್ಬ ವ್ಯಕ್ತಿ ಇಲ್ಲಿ ಭೂಮಿ ಖರೀದಿಗೆ ಧೈರ್ಯ ಮಾಡಿದ್ದರು. 2021ರಲ್ಲಿ 57 ಮಂದಿ, 2022ರಲ್ಲಿ 127 ಮಂದಿ ಜಮೀನು ಖರೀದಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾದತ್ತ
ಬರೋಬ್ಬರಿ 33 ವರ್ಷಗಳ ಬಳಿಕ ಕಣಿವೆಯಲ್ಲಿ ಸಿನೆಮಾ ಥಿಯೇಟರ್‌ಗಳು ಬಾಗಿಲು ತೆರೆದವು. ಸಂಗೀತ, ಸಾಹಿತ್ಯೋತ್ಸವಗಳು ಸಹೃದಯರನ್ನು ಸೆಳೆದವು. ಕಾಶ್ಮೀರವನ್ನು ಮೂಲಭೂತವಾದದ ಕರಿ ನೆರಳಿನಲ್ಲಿ ಬಂಧಿಸಿಡಲು ಯತ್ನಿಸಿದವರಿಗೆ ಇದು ಸ್ಪಷ್ಟ ಸಂದೇಶ ರವಾನಿಸಿತು. ಕಣಿವೆಯ ಹೆಣ್ಣು ಮಕ್ಕಳು ಕೂಡ ಮುಖ್ಯವಾಹಿನಿಗೆ ಬಂದರು. ಶಾಂತಿಯ ಪರ್ವ
ಹಲವು ವರ್ಷಗಳ ಕಾಲ ಪ್ರಕ್ಷುಬ್ಧತೆಯನ್ನೇ ಉಸಿರಾಡುತ್ತಿದ್ದ ಅಲ್ಲೀಗ ಶಾಂತಿ ನೆಲೆಸಿದೆ. ಪ್ರತೀ ದಿನವೂ ಪ್ರತಿಭಟನೆ, ಹಿಂಸಾಚಾರ, ರಕ್ತಪಾತ ದಿಂದಾಗಿ ಜನರು ಹತಾಶರಾಗಿದ್ದರು. ಆದರೆ ಈಗ ಪ್ರತ್ಯೇಕತಾವಾದಿಗಳು ನೀಡುವ ಮುಷ್ಕರದ ಕರೆಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಏಕೆಂದರೆ ಹಿಂಸಾಚಾರದಿಂದ ಬಳಲಿ ಬೆಂಡಾಗಿದ್ದ ಜನರಿಗೆ “ಶಾಂತಿ’ಯ ಮಾರ್ಗವೇ ಸಹ್ಯ ಎನಿಸಿದೆ. ಹಲೀಮತ್ ಸಅದಿಯಾ