Advertisement

ಆಶೆಂ ಜಾಲೆಂ ಕಶೆಂ? ಇಂಚ ಆಂಡ ಎಂಚ? 

08:31 AM Jan 27, 2017 | Team Udayavani |

ಕೊಂಕಣಿ-ತುಳು ಚಿತ್ರದ ಆಡಿಯೋ ಬಿಡುಗಡೆ

Advertisement

ಮಂಗಳೂರು: ಕೊಂಕಣಿ ಮತ್ತು ತುಳು ಭಾಷಾ ಚಲನಚಿತ್ರ “ಆಶೆಂ ಜಾಲೆಂ ಕಶೆಂ? ಇಂಚ ಆಂಡ ಎಂಚ?’ದ ಆಡಿಯೋ ಬಿಡುಗಡೆ ಗುರುವಾರ  ಕುಲಶೇಖರ ಚರ್ಚ್‌ ಆವರಣದಲ್ಲಿರುವ ಸೈಂಟ್‌ ಜೋಸೆಫ್‌ ಶಾಲಾ ಸಭಾಂಗಣದಲ್ಲಿ ಜರಗಿತು.
ತುಳು ಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ ದೇವದಾಸ್‌ ಕಾಪಿಕಾಡ್‌ ಅವರು ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ಮಾಡಿದರು. ಕುಲಶೇಖರ ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ಫಾ| ವಿಕ್ಟರ್‌ ಮಚಾದೊ ಆಶೀರ್ವಚನ ನೀಡಿದರು.

ಶಾಸಕ ಜೆ.ಆರ್‌. ಲೋಬೊ, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೋಯ್‌ ಕ್ಯಾಸ್ಟಲಿನೊ, ದಾಯಿj ವರ್ಲ್x ಸಂಸ್ಥೆಯ ಸ್ಥಾಪಕ ವಾಲ್ಟರ್‌ ನಂದಳಿಕೆ, ಕೆಥೋಲಿಕ್‌ ಸಭಾ ಕೇಂದ್ರ ಸಮಿತಿಯ ಅಧ್ಯಕ್ಷ ಅನಿಲ್‌ ಲೋಬೊ, ಸಿಸಿಆರ್‌ಬಿ ಎಸಿಪಿ ವೆಲೆಂಟೈನ್‌ ಡಿ’ಸೋಜಾ, ಐಸಿವೈಎಂ ನಿರ್ದೇಶಕ ಫಾ| ರೋನಲ್‌ ಡಿ’ಸೋಜಾ ಅವರು ಅತಿಥಿಗಳಾಗಿದ್ದರು. 

ಗ್ಲೋರಿಯಸ್‌ ಆಂಜೆಲೋರ್‌ ಪ್ರೊಡಕ್ಷನ್ಸ್‌ ಸಂಸ್ಥೆಯ ಬ್ಯಾನರ್‌ನಲ್ಲಿ ಮ್ಯಾಕ್ಸಿಂ ಪಿರೇರಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿತ್ರದ ಪಾತ್ರಧಾರಿಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

ಸಾಹಸದ ಕೆಲಸ: ಕೊಂಕಣಿ ಮತ್ತು ತುಳು ಭಾಷೆಗಳನ್ನು ಸೇರಿಸಿಕೊಂಡು ಚಿತ್ರ ನಿರ್ಮಾಣ ಮಾಡುವುದು ಸಾಹಸದ ಕೆಲಸ. ಮ್ಯಾಕ್ಸಿಂ ಪಿರೇರಾ ಅವರು ಇಂತಹ ಸಾಹಸಕ್ಕೆ ಕೈ ಹಾಕಿರುವುದು ಸ್ವಾಗತಾರ್ಹ; ಅವರಿಗೆ ಶುಭ ಹಾರೈಸುತ್ತೇನೆ ಎಂದು ದೇವದಾಸ್‌ ಕಾಪಿಕಾಡ್‌ ಹೇಳಿದರು.

Advertisement

ತುಳು ಚಿತ್ರಗಳಿಗೆ ಜನರಿಂದ ಉತ್ತಮ ಬೆಂಬಲ ಸಿಗುತ್ತಿದ್ದು, ತುಳು ಚಿತ್ರ ರಂಗ ಇತರ ಎಲ್ಲ ಭಾಷೆಗಳ ಚಿತ್ರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಸರ್ವ ಮತ, ಧರ್ಮಗಳ ಕಲಾವಿದರು ತುಳುವಿನಲ್ಲಿದ್ದಾರೆ. ಚಿತ್ರ ವೀಕ್ಷಿಸಿ ಜನರು ಪ್ರೋತ್ಸಾಹಿಸ ಬೇಕು ಎಂದರು.

ನಿರ್ಮಾಪಕ ಮ್ಯಾಕ್ಸಿಂ ಪಿರೇರಾ ಸ್ವಾಗತಿಸಿದರು. ಲೆಸ್ಲಿ ರೇಗೊ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next