Advertisement

ಕಾಸರಗೋಡು: ಅರಿವಳಿಕೆ ತಜ್ಞರ ರಾಷ್ಟ್ರೀಯ ಕಾರ್ಯಾಗಾರ

12:03 AM Jul 03, 2019 | sudhir |

ಕಾಸರಗೋಡು: ಭಾರತೀಯ ಅರಿವಳಿಕೆ (ಐ.ಎಸ್‌.ಎ.) ಸಂಘಟನೆಯ ರಾಷ್ಟ್ರೀಯ ಸಮಿತಿಯ ಸಹಯೋಗದಲ್ಲಿ ಅರಿವಳಿಕೆಯ ಕುರಿತು ಏಕದಿನ ನಿರಂತರ ವೈದ್ಯಕಿಯ ವಿದ್ಯಾಭ್ಯಾಸ ಕಾರ್ಯಾಗಾರ ನಡೆಯಿತು.

Advertisement

ಐ.ಎಸ್‌.ಎ. ಕಾಸರಗೋಡು ಶಾಖೆಯು ಕಾಸರಗೋಡು ಸಿಟಿ ಟವರ್‌ ಹೊಟೇಲ್ನಲ್ಲಿ ಆಯೋಜಿಸಿದ ಕಾರ್ಯಾಗಾರವನ್ನು ರಾಷ್ಟ್ರೀಯ ಅಧ್ಯಕ್ಷ ಡಾ| ಎಸ್‌. ಬಾಲಭಾಸ್ಕರ್‌ ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಡಾ| ಮುರಳೀಧರ್‌ ಜೋಶಿ, ರಾಷ್ಟ್ರೀಯ ಕಾರ್ಯದರ್ಶಿ ಡಾ| ನವೀನ್‌ ಮಲೊØೕತ್ರ, ರಾಷ್ಟ್ರೀಯ ಮಾಜಿ ಅಧ್ಯಕ್ಷ ಡಾ| ಕುಚೇಲ ಬಾಬು, ಡಾ| ಚಕ್ರರಾವ್‌, ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಡಾ| ವೆಂಕಟಗಿರಿ ಕೆ.ಎಂ., ಕೇರಳ ರಾಜ್ಯ ಘಟಕದ ಅಧ್ಯಕ್ಷರಾದ ಡಾ| ಸುಗು ವರ್ಗೀಸ್‌, ರಾಜ್ಯ ಕಾರ್ಯದರ್ಶಿ ಡಾ| ಬಿನಿಲ್ ಐಸಾಕ್‌ ಮ್ಯಾಥ್ಯೂ ಮೊದಲಾದವರು ಭಾಗವಹಿಸಿದರು.

ಡಾ| ವೆಂಕಟಗಿರಿ ಕೆ.ಎಂ. ಸ್ವಾಗತಿಸಿದರು. ಡಾ| ಸಂತೋಷ ಕಾಮತ್‌ ವಂದಿಸಿದರು.

ಚೆನ್ನೈ, ತಿರುವನಂತಪುರ, ಕಲ್ಲಿಕೋಟೆ, ಮಂಗಳೂರು, ಮಣಿಪಾಲ, ಮೈಸೂರು, ಬಳ್ಳಾರಿ, ಭುವನೇಶ್ವರ, ಬೆಂಗಳೂರು, ಹರಿಯಾಣ, ಹೈದರಾಬಾದ್‌ ಮುಂತಾದೆಡೆಗಳಿಂದ ಬಂದ ವೈದ್ಯಕೀಯ ಕಾಲೇಜುಗಳ ಪ್ರಾಧ್ಯಾಪಕರು ವಿವಿಧ ವಿಷಯಗಳ ಕುರಿತು ಪ್ರಬಂಧವನ್ನು ಮಂಡಿಸಿದರು.

ಕೇರಳ ಮತ್ತು ಕರ್ನಾಟಕ ರಾಜ್ಯಗಳ‌ 75ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅರಿವಳಿಕೆ ತಜ್ಞರು ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next