Advertisement

ಕಾಸರಗೋಡು ಯುವಕ ದಿಲ್ಲಿ  ಪೊಲೀಸರ ಬಲೆಗೆ

04:30 AM Jan 14, 2019 | |

ಕಾಸರಗೋಡು: ಸಂಘ ಪರಿವಾರದ ಮುಖಂಡರ ಹತ್ಯೆಗೆ ಸಂಚು ಪ್ರಕರಣದಲ್ಲಿ ಕಾಸರಗೋಡು ಚೆಮ್ನಾಡ್‌ ಸಮೀಪದ ಚೆಂಬರಿಕ ನಿವಾಸಿ ಸಿ.ಎಂ. ಮುಹತಸಿಂ ಅಲಿಯಾಸ್‌ ತಾಸಿಂ(41)ನನ್ನು ಹೊಸದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ಹಾಜರು ಪಡಿಸಿ ದಿಲ್ಲಿಗೆ ಕರೆದೊಯ್ದಿದ್ದಾರೆ.

Advertisement

ಜ. 11ರಂದು ಬಂಧನ ದಿಲ್ಲಿ ಪೊಲೀಸರ ಸೂಚನೆಯಂತೆ ಮುಹತಸಿಂನನ್ನು ಜ. 11ರಂದೇ
ಚಟ್ಟಂಚಾಲ್‌ನಿಂದ ವಿದ್ಯಾನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದರು. ಮರುದಿನ ದಿಲ್ಲಿ ಪೊಲೀಸರು ಕಾಸರಗೋಡಿಗೆ ಆಗಮಿಸಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳೂ ಬಂದಿದ್ದು, ವಿಚಾರಣೆ ನಡೆಸಿದ್ದರು.

ಹಲವು ಪ್ರಕರಣ ಮುಹತಸಿಂ ವಿರುದ್ಧ ಬೇಕಲ ಪೊಲೀಸ್‌ ಠಾಣೆಯಲ್ಲಿ 2 ನಕಲಿ ಪಾಸ್‌ಪೋರ್ಟ್‌ ಪ್ರಕರಣ, ಮನೆಗೆ ನುಗ್ಗಿ ಹಲ್ಲೆ ಮತ್ತು ಬೇಕಲದಲ್ಲಿ ಎಸ್‌ಐ ಯಾಗಿದ್ದ ವಿಪಿನ್‌ ಅವರಿಗೆ ಬೆದರಿಕೆ ಕೇಸು ಕೂಡ ದಾಖಲಾಗಿದೆ.
ಕಾಶ್ಮೀರದ ಉಗ್ರಗಾಮಿ ಸಂಘಟನೆಗಳಿಗೆ ಯುವಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿ ಇಂಟರ್‌ಪೋಲ್‌ ಮತ್ತು ಕೇಂದ್ರ ಗುಪ್ತಚರ ವಿಭಾಗ ಕೂಡ ಈತನನ್ನು ಈ ಹಿಂದೆ ಹಲವು ಬಾರಿ ವಿಚಾರಣೆ ನಡೆಸಿತ್ತು. ಊರಲ್ಲಿ ಈತ “ಡಾನ್‌’ ಎಂದೇ ಗುರಿಸಿಕೊಂಡಿದ್ದಾನೆ.

ನಕಲಿ ಗುರುತುಚೀಟಿ
ಭಾರತ ಸರಕಾರದ ಮೊಹರು ಲಗತ್ತಿಸಿ ತಾನೇ ತಯಾರಿಸಿದ ಗುರುತು ಕಾರ್ಡನ್ನು ಈತ ಹೊಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ನಕಲಿ ಕಾರ್ಡ್‌ನಲ್ಲಿ ಮುಹತಸಿಂ ಸಿ.ಎಂ., ತಸ್ಲಿàಮ್‌ ಡಾನ್‌ (ಆರ್‌.ಎ.ಡಬುÉ), ಕುಲಭೆ, ನಿಯರ್‌ ಗಣಪತಿ ಟೆಂಪಲ್‌, ಬೆಂಡೀಸ್‌ ಹೌಸ್‌, ಮುಂಬಯಿ – 40001 ಎಂಬ ವಿಳಾಸ ಇದೆ. ಕೇಂದ್ರ ಮಿಲಿಟರಿ ಗುಪ್ತಚರ ವಿಭಾಗವಾದ ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌(ರಾ) ಅಧಿಕಾರಿಗಳಿಗೆ ನೀಡಲಾಗುವ ಗುರುತು ಪತ್ರ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next