Advertisement

ಕಾಸರಗೋಡು: ಜನಸೇವಾ ಕೇಂದ್ರದಲ್ಲಿ ನೌಕರರಿಲ್ಲ

06:05 AM May 28, 2018 | |

ಕುಂಬಳೆ: ಕಾಸರಗೋಡು ಹೊಸ ಬಸ್‌ನಿಲ್ದಾಣದ ನಗರಸಭೆಯ ಕಟ್ಟಡದ ಪ್ರಥಮ ಮಹಡಿಯಲ್ಲಿ ಫ್ರೆಂಡ್ಸ್‌ ಜನಸೇವಾ ಕೇಂದ್ರ ಕಾರ್ಯಾಚರಿಸುತ್ತಿದೆ.ಈ ಕೇಂದ್ರದಲ್ಲಿ ವಿದ್ಯುತ್‌ ಬಿಲ್‌,ದೂರವಾಣಿ,ನೀರಿನ ಕರ ಇತ್ಯಾದಿಗಳನ್ನು ಪಾವತಿಸಬಹುದಾಗಿದೆ.ಸಾರ್ವಜನಿಕರಿಗೆ ಬಿಲ್‌ ಪಾವತಿಸಲು ಕಚೇರಿಯೊಳಗೆ ಸಾಲಾಗಿ ಒಂಭತ್ತು ಕೌಂಟರ್‌ಗಳಿವೆ. ಆದರೆ ಇದರಲ್ಲಿ ಕೇವಲ ಎರಡು ಸೀಟಿನಲ್ಲಿ ಮಾತ್ರ ನಿತ್ಯ ನೌಕರರನ್ನು ಕಾಣಬಹುದು.ಅದರಲ್ಲೂ ಓರ್ವರು ತಡವಾಗಿ ಆಗಮಿಸುವುದು ಸಾಮಾನ್ಯವಾಗಿದೆ.

Advertisement

ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಜನಸೇವಾ ಕೇಂದ್ರದೊಳಗೆ ಸಾಕಷ್ಟು ಜನರು ಸಮಯಕ್ಕೆ ಮುಂಚಿತವಾಗಿ ಹಣ ಪಾವತಿಸಲು ಆಗಮಿಸುವರು.ಬಂದವರಿಗೆ ಸೆಕ್ಯೂರಿಟಿಯೋರ್ವರು ಟೋಕನ್‌ ನೀಡಿ ಆಸನದಲ್ಲಿ ಕುಳ್ಳಿರಿಸುವರು.ನೌಕರರು ಆಗಮಿಸಿದ ಬಳಿಕ ಟೋಕನ್‌ ನಂಬ್ರ ಕರೆದು ಹಣ ಸಂಗ್ರಹಿಸಲಾಗುವುದು.ಈ ಮಧ್ಯೆ ಕಂಪ್ಯೂಟರ್‌ ಕೈಕೊಡುವುದೂ ಇದೆ.ಆ ತನಕ ತಾಳ್ಮೆಯಿಂದ ಕಾಯಬೇಕಾಗುವುದು.

ವಿವಿಧ ಸರಕಾರಿ ಇಲಾಖೆಯ ಕಚೇರಿಗಳಿಗೆ ತೆರಳಿ ಗಂಟೆ ಗಟ್ಟಲೆ ಕಾಯುವುದನ್ನು ತಪ್ಪಿಸುವ ಸದುದ್ದೇಶದಿಂದ ಈ ಜನಸೇವಾ ಕೇಂದ್ರವನ್ನು ತೆರೆಯಲಾಗಿದೆ.ಈ ಕಚೇರಿಗೆ ಆಯಾ ಇಲಾಖೆಯ ವತಿಯಿಂದ ನೌಕರರನ್ನು ಡೆಪ್ಯೂಟೇಶನ್‌ ಆಧಾರದಲ್ಲಿ ಜಿಲ್ಲಾಧಿಕಾರಿಗಳು ನೌಕರರನ್ನು ನೇಮಕಗೊಳಿಸುವರು.ಆದರೆ  ಈ ನೌಕರರು ಕೆಲ ದಿನಗಳ ಬಳಿಕ ಉನ್ನತ ರಾಜಕೀಯ ನಾಯಕರ ಒತ್ತಡದ ಮೂಲಕ ಮೇಲಾಧಿಕಾರಿಗಳ ಮನ ಒಲಿಸಿ ತಮ್ಮ ಊರಿಗೆ ವರ್ಗವಾಗಿ ತೆರಳುವುದರಿಂದ ಈ ಕೇಂದ್ರದಲ್ಲಿ ನೌಕಕರ ಕೊರತೆ ಉಂಟಾಗುವುದು.

ಕಾಸರಗೋಡು ಜಿಲ್ಲೆಯ ದೂರದೂರಿನಿಂದ ಹಣ ಪಾವತಿಸಲು ಆಗಮಿಸುವ ಜನರ ಈ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಯವರು ಪರಿಹರಿಸಬೇಕಾಗಿದೆ.ಮಿತ್ರ ಜನಸೇವಾ ಕೇಂದ್ರದ ಒಂಭತ್ತು ಕೌಂಟರಿನಲ್ಲಿ ಕನಿಷ್ಟ ಐದು ಮಂದಿಯನ್ನಾದರೂ ನೇಮಕ ಮಾಡಿ ಜನರ ಸಂಕಷ್ಟ ವನ್ನು ಪರಿಹರಿಸಬೇಕಾಗಿದೆ.

ಬಹಿರ್ದೆಸೆಗೆ ನಿರ್ಬಂಧ
ಸುಸಜ್ಜಿತ ಹವಾನಿಯಂತ್ರಿತ ಕಚೇರಿ ಯೊಳಗಿರುವ ಇಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಬಹಿರ್ದೆಸೆಗೆ ನಿರ್ಬಂಧ ವಿರುವುದರಿಂದ ಸಂಕಷ್ಟ ಅನುಭವಿಸ ಬೇಕಾಗಿದೆ. ಕಚೇರಿ ನೌಕರರಲ್ಲಿ ವಿಚಾರಿಸಿ ದರೆ ಇಲ್ಲಿ  ಸಾರ್ವಜನಿಕ ಶೌಚಾ ಲಯವಿಲ್ಲ ಕೆಳಗೆ ಬಸ್‌ ನಿಲ್ದಾಣ ಕಟ್ಟಡದ ಲ್ಲಿದೆ .ಅಲ್ಲಿಗೆ ತೆರಳಿ ಎಂಬ ಹಾರಿಕೆಯ ಉತ್ತರ ನೀಡುತ್ತಾರೆ.

Advertisement

– ಅಚ್ಯುತ ಚೇವಾರ್‌

Advertisement

Udayavani is now on Telegram. Click here to join our channel and stay updated with the latest news.

Next