Advertisement

ಕಾಸರಗೋಡು ಗಿಡ್ಡ ತಳಿ ಹಸು ವಂಶಾಭಿವೃದ್ಧಿ ಯೋಜನೆ

02:10 AM Apr 25, 2019 | sudhir |

ಕಾಸರಗೋಡು: ಕಾಸರಗೋಡು ಗಿಡ್ಡ ತಳಿಯ ಹಸುಗಳ ವಂಶವೃದ್ಧಿಯ ಗುರಿಯೊಂದಿಗೆ ಕಾಸರಗೋಡು ಡ್ವಾರ್ಫ್‌ ಕನ್ಸರ್ವೇಶನ್‌ ಸೊಸೈಟಿ ನೂತನ ಯೋಜನೆ ಆವಿಷ್ಕರಿಸಲು ಮುಂದಾಗಿದೆ.

Advertisement

ಅಂಬಲತ್ತರದಲ್ಲಿರುವ ಫಾರ್ಮ್ನಿಂದ ಹೋರಿಗಳನ್ನು ಹಾಗು ಹಸುಗಳನ್ನು ಸಾಕಲು ಹೈನುಗಾರಿಕಾ ಕೃಷಿಕರಿಗೆ ನೀಡುವುದು ನೂತನ ಯೋಜನೆಯಾಗಿದೆ.

ಜೈವಿಕ ಕೃಷಿ ಪ್ರೋತ್ಸಾಹಿಸಲು ಕಮ್ಯೂನಿಟ್‌ ಕನ್ಸರ್ವೇಶನ್‌ ಪ್ರೋಗ್ರಾಂ ಪ್ರಕಾರ ಯೋಜನೆ ಜಾರಿಗೊಳಿಸಲಾಗುವುದು. ಕೃಷಿಕರಿಗೆ ಸಾಕಲು ನೀಡುವ ಕರುಗಳನ್ನು ಎರಡು ವರ್ಷದ ಬಳಿಕ ಮರಳಿ ನೀಡಬೇಕು. ಅನ್ಯ ತಳಿಯ ಹಸುಗಳೊಂದಿಗೆ ಸಂಪರ್ಕ ಹೊಂದಿ ಹಸುವಿನ ತಳಿ ಬದಲಾಗದಿರಲು ಜತೆಗೆ ಹೋರಿಗಳನ್ನು ನೀಡಲಾಗುವುದು.

ಒಂದೂವರೆ ವರ್ಷ ಕಳೆದ ಹೋರಿಗಳನ್ನು ನೀಡಲಾಗುತ್ತಿದ್ದು, ಲಭ್ಯತೆಯನ್ನನುಸರಿಸಿ ಹಸುಗಳನ್ನು ಒದಗಿಸಲಾಗುವುದು. ನಿಬಂಧನೆಗಳ ಪ್ರಕಾರ ಹಸು ಸಾಕಣೆಗೆ ಆಸಕ್ತಿಯುಳ್ಳವರಿಗೆ ಬಂಡವಾಳವಿಲ್ಲದೆ ತಮ್ಮ ಸ್ವಂತ ಅಗತ್ಯಕ್ಕೆ ಗೊಬ್ಬರ ಉತ್ಪಾದಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next