Advertisement

ಕಾಸರಗೋಡು: ಶಾಲೆಗಳು ಆರಂಭ: 69,050 ವಿದ್ಯಾರ್ಥಿಗಳು ಹಾಜರು

01:52 AM Nov 02, 2021 | Team Udayavani |

ಕಾಸರಗೋಡು: ಕೋವಿಡ್‌ ಮಹಾಮಾರಿಯ ಹಾವಳಿಯ ಪರಿಣಾಮ 19 ತಿಂಗಳ ಅವಧಿಯ ಅನಂತರ ಜಿಲ್ಲೆಯಲ್ಲಿ ಮತ್ತೆ ಶಾಲಾ ಚಟುವಟಿಕೆಗಳು ಆರಂಭಗೊಂಡಿವೆ.

Advertisement

ಜಿಲ್ಲೆಯಲ್ಲಿ ಪ್ರಥಮ ದಿನವಾದ ಸೋಮವಾರ 69,050 ಮಂದಿ ವಿದ್ಯಾರ್ಥಿಗಳು, 7781 ಮಂದಿ ಶಿಕ್ಷಕರು ಶಾಲೆಗಳಿಗೆ ಆಗಮಿಸಿದ್ದರು. ಪ್ರತೀ ತರಗತಿಗಳ ಅರ್ಧಾಂಶ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

ರಾಜ್ಯ ಸರಕಾರದ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣಾಲಯಗಳು ಆರಂಭಗೊಂಡಿವೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ. ಪುಷ್ಪಾ ತಿಳಿಸಿದರು.

ನೀಲೇಶ್ವರದಿಂದ ಅಂಗಡಿಮೊಗರು ವರೆಗಿನ 15 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ಅವರು ತಿಳಿಸಿದರು.

ಇದನ್ನೂ ಓದಿ:ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಅಖೀಲೇಶ್‌ ಘೋಷಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next