Advertisement

ಕಾಸರಗೋಡು: ಸುಗಮ ವಾಹನ ಸಂಚಾರಕ್ಕೆ ಮತ್ತೆ ಅಡಚಣೆ

12:33 AM Jun 17, 2019 | sudhir |

ಕಾಸರಗೋಡು: ಹಲವು ಸಮಸ್ಯೆಗಳ ಆಗರವಾಗಿರುವ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ವಾಹನ ದಟ್ಟಣೆ ಹೆಚ್ಚುತ್ತಿರುವಂತೆ ವಾಹನ ಅಪಘಾತವೂ ಮಿತಿ ಮೀರುತ್ತಿದೆ. ವಾಹನ ದಟ್ಟಣೆಯನ್ನು ಮತ್ತು ಅಪಘಾತಗಳನ್ನು ನಿಯಂತ್ರಿಸಲು ಕಾಸರಗೋಡು ನಗರದ ಅಲ್ಲಲ್ಲಿ ಅಳವಡಿಸಿದ ಟ್ರಾಫಿಕ್‌ ಸಿಗ್ನಲ್ ಬಲ್ಬ್ಗಳು ಬೆಳಗದೆ ಕೆಲವು ದಿನಗಳೇ ಕಳೆಯಿತು. ಇದರಿಂದ ಮತ್ತೆ ಸಮಸ್ಯೆಗೆ ಕಾರಣವಾಗಿದೆ.

Advertisement

ಟ್ರಾಫಿಕ್‌ ಸಿಗ್ನಲ್ ಕೈಕೊಟ್ಟ ಹಿನ್ನೆಲೆಯಲ್ಲಿ ಇದೀಗ ಮತ್ತೆ ವಾಹನ ಅಪಘಾತ ಸಾಮಾನ್ಯವಾಗಿದೆ. ಈ ಜಂಕ್ಷನ್‌ನಲ್ಲಿ ವಾಹನ ನಿಯಂತ್ರಣಕ್ಕೆ ಪೊಲೀಸರನ್ನು ನೇಮಿಸಲಾಗಿದೆ. ಆದರೆ ಪೊಲೀಸರಿಗೆ ಅಗತ್ಯದ ಸೌಲಭ್ಯಗಳನ್ನು ಕಲ್ಪಿಸಿಲ್ಲ.

ಇಲ್ಲಿ ಸಮರ್ಪಕವಾಗಿ ವಾಹನ ನಿಯಂತ್ರಣ ಸಾಧ್ಯವಾಗದೆ ಅಪಘಾñಗಳು ನಿತ್ಯ ಸಂಭವಿಸುತ್ತಿವೆ. ಹಲವಾರು ಮಂದಿ ಈಗಾಗಲೇ ವಾಹನ ಅಪಘಾತಕ್ಕೆ ತುತ್ತಾಗಿ ಗಾಯ ಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲುಗೊಂಡ ಪ್ರಸಂಗಗಳೂ ಇವೆ. ಈ ರಸ್ತೆಗೆ ಕಾಂಕ್ರೀಟ್ಕಾಮಗಾರಿ ಮಾಡಿರುವುದರಿಂದ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಇದರಿಂದಾಗಿ ರಸ್ತೆ ದಾಟುವವರಿಗೂ ಸಮಸ್ಯೆಯಾಗುತ್ತಿದೆ.

ರಸ್ತೆಯಲ್ಲಿ ಉದ್ದಕ್ಕೆ ವಾಹನಗಳ ಸರದಿ ಇರುವುದರಿಂದ ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದು ಹೋಗುವವರು ಸಾಗಲು ಸಾಧ್ಯವಾಗದೆ ಗೊಂದಲಕ್ಕೀಡಾಗುತ್ತಿದ್ದಾರೆ.

ಇದರಿಂದಾಗಿ ಕಕ್ಕಾಬಿಕ್ಕಿಯಾಗಿ ಅತ್ತಿತ್ತ ಓಡಾಡುವುದರಿಂದ ವಾಹನ ಚಾಲಕರಿಗೆ ಇವರ ಚಲನವಲನಗಳು ಅರಿವಿಗೆ ಬಾರದೆ ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ. ಇನ್ನಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧ‌ಪಟ್ಟವರು ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯ.0ಈ ಜಂಕ್ಷನ್‌ನಲ್ಲಿ ಪೊಲೀಸರನ್ನು ನೇಮಿಸಲಾಗಿದ್ದು, ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯ ವರೆಗೆ ಇಲ್ಲಿ ಕರ್ತವ್ಯ ನಿರ್ವಹಿಸಬೇಕು. ಇಲ್ಲಿ ಒಬ್ಬರೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹೆಚ್ಚಿನ ಒತ್ತಡ ಅವರ ಮೇಲೆ ಬೀಳುತ್ತಿದೆ.

Advertisement

ಇದರಿಂದ ಮತ್ತಷ್ಟು ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಪೊಲೀಸರಿಗೆ ರೈಲು ಕೋಟ್ ಕೂಡಾ ನೀಡಿಲ್ಲ. ಇದರಿಂದಾಗಿ ಪೊಲೀಸರು ಅನುಭವಿಸುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ.

ಹತ್ತು ದಿನಗಳಿಂದ ಕಾರ್ಯಾಚರಣೆ ಮೊಟಕು

ಕಾಸರಗೋಡು ನಗರದ ಫ್ರೆಸ್‌ಕ್ಲಬ್‌ ಜಂಕ್ಷನ್‌ ಪರಿಸರದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಅಳವಡಿಸಿದ ಟ್ರಾಫಿಕ್‌ ಸಿಗ್ನಲ್ ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆ ಮೊಟಕುಗೊಂಡಿದೆ. ಸಿಗ್ನಲ್ ಬಲ್ಬ್ಗಳು ಬೆಳಗದೆ, ವಾಹನ ಚಾಲಕರು ಗೊಂದಲಕ್ಕೆ ತುತ್ತಾಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಯಾಗಿರುವ ಮಹಾತ್ಮಾಗಾಂಧಿ ರಸ್ತೆ(ಎಂ.ಜಿ.ರಸ್ತೆ), ಕಾಸರಗೋಡು-ಕಾಂಞಂಗಾಡ್‌ ರಾಜ್ಯ ಹೆದ್ದಾರಿ ರಸ್ತೆ, ಹಳೆ ಬಸ್‌ ನಿಲ್ದಾಣ ರಸ್ತೆ, ನಾಯಕ್ಸ್‌ ರಸ್ತೆ ಹೀಗೆ ವಿವಿಧ ರಸ್ತೆಗಳು ಒಂದು ಗೂಡುವ ಪ್ರಸ್‌ ಕ್ಲಬ್‌ ಜಂಕ್ಷನ್‌ನಲ್ಲಿ ವರ್ಷಗಳ ಹಿಂದೆ ಟ್ರಾಫಿಕ್‌ ಸಿಗ್ನಲ್ ಅಳವಡಿಸಲಾಗಿತ್ತು. ಟ್ರಾಫಿಕ್‌ ಸಿಗ್ನಲ್ ಅಳವಡಿಸಿದ ಕೆಲವೇ ತಿಂಗಳಲ್ಲಿ ಟ್ರಾಫಿಕ್‌ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು. ದುರಸ್ತಿಯ ಬಳಿಕ ಪದೇ ಪದೇ ಟ್ರಾಫಿಕ್‌ ಸಿಗ್ನಲ್ ಕೈಕೊಡುತ್ತಿದ್ದು, ಇದೀಗ ಟ್ರಾಫಿಕ್‌ ಸಿಗ್ನಲ್ನ ಬಲ್ಬ್ ಬೆಳಗದೆ ಕೆಲವು ದಿನಗಳೇ ಕಳೆಯಿತು. ಆದರೂ ದುರಸ್ತಿಗೊಳಿಸಲು ಸಂಬಂಧಪಟ್ಟವರು ಈ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಗರದ ವಿವಿಧೆಡೆ ಟ್ರಾಫಿಕ್‌ ಸಿಗ್ನಲ್ ಅಳವಡಿಸಿದ್ದರೂ ಇಲ್ಲಿಯೂ ಇದೇ ಪರಿಸ್ಥಿತಿ ಇದೆ. ಕೆಲವು ಕಡೆ ಟ್ರಾಫಿಕ್‌ ಸಿಗ್ನಲ್ ಅಳವಡಿಸಿದ್ದರೂ ಕಾರ್ಯಾರಂಭಗೊಂಡಿಲ್ಲ. ಪ್ರಸ್‌ ಕ್ಲಬ್‌ ಜಂಕ್ಷನ್‌ನಲ್ಲಿ ಪದೇ ಪದೇ ವಾಹನ ಅಪಘಾತ ಸಂಭವಿಸುತ್ತಿದ್ದುದರಿಂದ ಅಪಘಾತವನ್ನು ನಿಯಂತ್ರಿಸಲು ಟ್ರಾಫಿಕ್‌ ಸಿಗ್ನಲ್ ಅಳವಡಿಸಲಾಗಿತ್ತು. ಆದರೆ ಪದೇ ಪದೇ ಟ್ರಾಫಿಕ್‌ ಸಿಗ್ನಲ್ ಕೈಕೊಡುತ್ತಿರುವುದರಿಂದ ಸಮಸ್ಯೆಗೆ ಪರಿಹಾರ ವಾಗಿಲ್ಲ.
– ಪ್ರದೀಪ್ ಬೇಕಲ್
Advertisement

Udayavani is now on Telegram. Click here to join our channel and stay updated with the latest news.

Next