Advertisement

Kasaragod: ಹಳಿಯಲ್ಲಿ ಪಾಶ್ಚಾತ್ಯ ಕಮೋಡ್‌, ಕೆಂಗಲ್ಲು ಪತ್ತೆ: ವಿಧ್ವಂಸಕ ಕೃತ್ಯ ಶಂಕೆ

01:11 PM Aug 18, 2023 | Team Udayavani |

ಕಾಸರಗೋಡು: ಕಳನಾಡು ರೈಲ್ವೇ ಸುರಂಗದಿಂದ 200 ಮೀ. ದೂರದಲ್ಲಿ ರೈಲು ಹಳಿಯಲ್ಲಿ ಯುರೋಪಿಯನ್‌ ಕ್ಲೋಸೆಟ್‌ (ಪಾಶ್ಚಾತ್ಯ ಕಮೋಡ್‌) ಹಾಗೂ ಕೆಂಗಲ್ಲು ಇರಿಸಿ ರೈಲು ವಿಧ್ವಂಸ ಕೃತ್ಯ ಗುರುವಾರ ಮಧ್ಯಾಹ್ನ ನಡೆದಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

Advertisement

ಮಧ್ಯಾಹ್ನ 12 ಗಂಟೆಗೆ ಮಂಗಳೂರಿನಿಂದ ಕೊಯಮತ್ತೂರಿಗೆ ಪ್ರಯಾಣಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್‌ ಹಳಿಯಲ್ಲಿ ಕ್ಲೋಸೆಟ್‌ ಹಾಗೂ ಕೆಂಗಲ್ಲು ಇರಿಸಿದ್ದನ್ನು ಕಂಡು ಕಾಸರಗೋಡು ರೈಲ್ವೇ ಸ್ಟೇಶನ್‌ ಮಾಸ್ಟರ್‌ಗೆ ಮಾಹಿತಿ ನೀಡಿದರು.

ಸ್ಟೇಷನ್‌ ಮಾಸ್ಟರ್‌ ಕೂಡಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ವೈಭವ್‌ ಸಕ್ಸೇನಾಗೆ ಮಾಹಿತಿ ರವಾನಿಸಿದರು. ಅದರಂತೆ ಬೇಕಲ್‌ ಡಿವೈಎಸ್‌ಪಿ ಸಿ.ಕೆ. ಸುನಿಲ್‌ ಕುಮಾರ್‌, ಮೇಲ್ಪರಂಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಟಿ. ಉತ್ತಂದಾಸ್‌, ಎಸ್‌ಐ ಅನೂಪ್‌, ಆರ್‌ಪಿಎಫ್‌ ಎಸ್‌ಐ ಬಿನೋಯ್‌ ಕುರಿಯನ್‌, ರೈಲ್ವೇ ಪೊಲೀಸ್‌ ಎಸ್‌ಐ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.

ಇದನ್ನೂ ಓದಿ: Bantwala: ಕ್ರಶರ್ ಯಂತ್ರದ ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಕಳವು; ಆರೋಪಿಗಳ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next