Advertisement

ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ ಇತಿಹಾಸ ಪ್ರಸಿದ್ಧ ಕಾಸರಗೋಡು ಜಿಲ್ಲೆಯ ಪುತ್ರಕಳ ಬೂಡು

07:30 PM Apr 04, 2019 | sudhir |

ಬದಿಯಡ್ಕ : ಕುಂಬಳೆ ಸೀಮೆಯ ಕುಂಬಾxಜೆ ಗ್ರಾಮಕ್ಕೊಳಪಟ್ಟ ಸುಮಾರು 1800 ವರ್ಷಗಳ ಇತಿಹಾಸವನ್ನು ಹೊಂದಿರುವ ಅತಿ ಪುರಾತನ ಕಾರಣಿಕ ಸಾನಿಧ್ಯವಾದ ಪುತ್ರಕಳ ಬೂಡು ತುಳುನಾಡಿನ ಅತ್ಯಾಕರ್ಷಕ ಶೆ„ಲಿಯ ಪ್ರಾಚೀನತೆಯನ್ನು ಹೊಂದಿದ್ದು ಇದೀಗ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಿದೆ. ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ಪುತ್ರಕಳ ಬೂಡು ಅತಿ ಪುರಾತನದಲ್ಲಿ ಜೈನ ಬಲ್ಲಾಳರ ಆ ಬಳಿಕ ಸಾಮಂತರಾಜ ಬಲ್ಲಾಳರ ಆಳ್ವಿಕೆಯಲ್ಲಿತ್ತು. ಈಗ ಇಲ್ಲಿರುವ ಸುಮಾರು 600 ವರ್ಷ ಹಳೆಯದಾದ ಪುತ್ರಕಳ ಬೂಡು ಹಿಂದಿನ ಅದೇ ಪರಂಪರಾಗತ ಶೆ„ಲಿಯನ್ನು ಉಳಿಸಿಕೊಂಡು ಬಂದಿದ್ದು ಹೊಸ ಜನಾಂಗದೆಡೆಯಲ್ಲಿ ಆಚ್ಚರಿ ಮೂಡಿಸುವ ಕಾರಣೀಕ ಸಾನಿಧ್ಯವಾಗಿದೆ. ಮುಳಿ ಹಾಸಿದ ಮನೆಯೊಳಗೆ ಇದೀಗ ತರವಾಡು ಹಾಗೂ ಇಲ್ಲಿ ಅತಿ ಪುರಾತನ ಕಾಲದಿಂದಲೇ ನೆಲೆಯಾಗಿರುವ ಕಾರಣಿಕ ಶಕ್ತಿಗಳಾದ ಮುಡಿಪುಣ್ಣಾಯ- ಉರ್ಮಿತ್ತಾಯ ಎಂಬ ಇರುವೆರ್‌ ದೆ„ವಗಳು, ಪಿಲಿಚಾಮುಂಡಿ, ಕುಂಡಂಗರ, ಮೂವೆರ್‌ ಧೂಮಾವತಿ, ರಕ್ತೇಶ್ವರಿ, ಕಳರಿ ಧೂಮಾವತಿ, ಕೊರತಿ, ಗುಳಿಗ ದೆ„ವಗಳು ಸೇರಿ ಒಂದು ಕುಂದು ನಲುವತ್ತು ದೆ„ವಗಳ ಸಾನಿಧ್ಯವು ಈಗ ಜೀರ್ಣಾವಸ್ಥೆಯಲ್ಲಿದೆ.

Advertisement

ಪುರಾತನವಾದ ಈ ಸ್ಥಳ ಸಾನಿಧ್ಯದಲ್ಲಿ ಈ ಹಿಂದೆ ರಾಜಾಡಳಿತದ ಕಾಲದಲ್ಲಿ ಯುದ್ಧವಿದ್ಯೆಗಳನ್ನು ಕಲಿಸುತ್ತಿದ್ದ ಸ್ಥಳವಾಗಿತ್ತು ಎಂಬ ಪ್ರತೀತಿ ಇದ್ದು ಇದಕ್ಕೆ ಸಂಬಂಧಪಟ್ಟ ಆರಾಧನೆಗಳು ಪ್ರಚಲಿತದಲ್ಲಿದೆ. ತುಳುನಾಡ ಕಳರಿ ವಿದ್ಯೆಯ ಅಧಿ ದೆ„ವವಾಗಿ ಕಳರಿ ಧೂಮಾವತೀ ದೆ„ವದ ಆರಾಧನೆ ಇಲ್ಲಿ ವಿಶೇಷವಾಗಿದೆ.

ಇಂತಹ ಕಾರಣಿಕ ಕ್ಷೇತ್ರವು ಪೂರ್ಣ ಜೀರ್ಣಾವಸ್ಥೆಯಲ್ಲಿದ್ದು ಸುಮಾರು ಮೂರು ದಶಕಗಳಿಂದ ನೇಮ ಪರ್ವಗಳು ಸ್ಥಗಿತಗೊಂಡಿತ್ತು. ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದು ಶಿಲ್ಪಿಗಳ ನಿರ್ದೇಶನದಂತೆ ಬೂಡು, ದೆ„ವಸ್ಥಾನ, ತುಳುನಾಡ ಕಳರಿ ಮೊದಲಾದ ದೆ„ವ ಸಾನಿಧ್ಯಗಳು ಪುನರ್‌ನಿರ್ಮಾಣ ಆಗಬೇಕಿದೆ. ಈ ಕಾರ್ಯವನ್ನು ಯಶಸ್ವಿಗೊಳಿಸಲು ಊರ ಪರವೂರ ಭಕ್ತಾದಿಗಳನ್ನು ಸೇರಿಸಿಕೊಂಡು ಜೀರ್ಣೋದ್ಧಾರ ಸಮಿತಿಯನ್ನು ರಚಿಸಲು ತೀರ್ಮಾನಿಸಿದ್ದು ಎಪ್ರಿಲ್‌ 6 ರಂದು ಮದ್ಯಾಹ್ನ 2.30 ಕ್ಕೆ ಪುತ್ರಕಳ ಬೂಡಿನ ಪರಿಸರದಲ್ಲಿ ಜೀರ್ಣೋದ್ಧಾರ ಸಮಿತಿ ರಚನಾ ಸಭೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪುತ್ರಕಳ ಬೂಡು ಸೇವಾ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next