Advertisement
ಕೇರಳದಲ್ಲಿ 121 ಮಂದಿಗೆ ಸೋಂಕುಕೇರಳ ರಾಜ್ಯದಲ್ಲಿ ಸೋಮವಾರ 121 ಮಂದಿಗೆ ಕೊರೊನಾ ದೃಢವಾಗಿದೆ. ಬಾಧಿತರಲ್ಲಿ 78 ಮಂದಿ ವಿದೇಶದಿಂದಲೂ 26 ಮಂದಿ ಇತರ ರಾಜ್ಯಗಳಿಂದಲೂ ಬಂದವರು. ಸಂಪರ್ಕದ ಮೂಲಕ ಐವರನ್ನು ಸೋಂಕು ಬಾಧಿಸಿದೆ.
ಎಂಜಲು: ಬಂಧನ ಕೋವಿಡ್‌ನಿಂದ ಗುಣಮುಖನಾಗಿ ಮನೆಗೆ ಬಂದಿದ್ದ ಯುವಕನೋರ್ವ ನೆರೆಮನೆಯ ಬಾವಿಗೆ ಎಂಜಲು ಉಗುಳಿದ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಪೊಲೀಸರು ಆತನನ್ನು ಬಂಧಿಸಿದ್ದಾರೆ. 218 ಪ್ರಕರಣ ದಾಖಲು
ಮಾಸ್ಕ್ ಧರಿಸದ ಆರೋಪದಲ್ಲಿ ಜಿಲ್ಲೆಯಲ್ಲಿ 198 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ 20 ಪ್ರಕರಣಗಳನ್ನು ದಾಖಲಿಸಿ, 39 ಮಂದಿಯನ್ನು ಬಂಧಿಸಲಾಗಿದೆ. 8 ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.