Advertisement

ಕಾಸರಗೋಡು ಜಿಲ್ಲೆ: ಅಪ್ರಾಪ್ತ ವಯಸ್ಕರ ವಿವಾಹ ಇನ್ನೂ ಜೀವಂತ

02:20 AM Sep 19, 2019 | mahesh |

ಕಾಸರಗೋಡು: ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಪಿಡುಗು ಇಂದಿಗೂ ಕಾಸರಗೋಡು ಜಿಲ್ಲೆಯಲ್ಲಿ ಜೀವಂತವಾಗಿರುವುದು ಶೈಕ್ಷಣಿಕ, ಸಾಮಾಜಿಕ ದುರಂತವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ಡಾ| ಶಾಹಿದಾ ಕಮಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಯೋಗದ ಅದಾಲತ್‌ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹೆಣ್ಣುಮಕ್ಕಳು ಬೆಳೆಯುತ್ತಿರುವಂತೆಯೇ ಅವರು ಹೆತ್ತವರಿಗೆ ಭಾರವಾಗುತ್ತಾರೆ ಎಂಬ ಭ್ರಮೆ ಇದಕ್ಕೆ ಪ್ರಧಾನ ಕಾರಣ. ಕಾಸರಗೋಡು ಜಿಲ್ಲೆಯ ಕೆಲವು ಹೆತ್ತವರಲ್ಲಿ ಇಂದಿಗೂ ಈ ಮನೋಧರ್ಮ ಮನೆಮಾಡಿದೆ. ಇದರಿಂದ ಹೆಣ್ಣುಮಕ್ಕಳು ಶಿಕ್ಷಣ ಸಹಿತ ಪ್ರಧಾನ ವಾಹಿನಿಯ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಂಬಂಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಸಹಕಾರದೊಂದಿಗೆ ಕಾರ್ಯಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಈ ಬಾರಿಯ ಮಹಿಳಾ ಆಯೋಗ ರಚನೆಗೊಂಡ ಅನಂತರ ಈ ಸಂಬಂಧ ಹೆತ್ತವರಲ್ಲಿ ಜಾಗೃತಿ ಮೂಡಿಸಿ ಹೆಣ್ಣುಮಕ್ಕಳನ್ನು ಇಂಥಾ ಪಿಡುಗಿನಿಂದ ಬಿಡುಗಡೆಗೊಳಿಸಿ, ಶಿಕ್ಷಣ ವಲಯದತ್ತ ಮರಳುವಂತೆ ಮಾಡಲು ಸಾಧ್ಯವಾಗಿದೆ ಎಂದರು.

ಇದೇ ವೇಳೆ ಮದುವೆಯಾಗಿ ಮಗು
ಜನಿಸಿದ ಅನಂತರ ಪತಿ ನಾಪತ್ತೆಯಾ ಗುವ ಪ್ರಕರಣಗಳೂ ರಾಜ್ಯದಲ್ಲಿ ಹೆಚ್ಚುತ್ತಿ ರುವುದು ಆತಂಕ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಕ್ರಮ ಬಿಗಿಗೊಳಿ ಸುವುದಾಗಿ ಹೇಳಿದರು. ಆಯೋಗದ ಅದಾಲತ್‌ನ ಅನಂತರವೂ ಈ ಸಂಬಂಧ ಕ್ರಮಗಳನ್ನು ಮುಂದುವರಿಸುವಲ್ಲಿ ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್‌ ಬಾಬು ಮತ್ತು ಜಿಲ್ಲಾಡಳಿತೆ ನೀಡುತ್ತಿರುವ ಬೆಂಬಲ ಶ್ಲಾಘನೀಯ ಎಂದರು. ಆಯೋಗದ ಸದಸ್ಯರಾದ ಸಿ.ಎಂ.ರಾಧಾ, ಎ.ಪಿ.ಉಷಾ, ಬೀನಾ ಕೆ.ಜಿ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

11 ಪ್ರಕರಣ ಇತ್ಯರ್ಥ
ರಾಜ್ಯ ಮಹಿಳಾ ಆಯೋಗದ ಅದಾಲತ್‌ನಲ್ಲಿ ಒಟ್ಟು 54 ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಅವುಗಳಲ್ಲಿ 11 ಪ್ರಕರಣಗಳಿಗೆ ತೀರ್ಪು ನೀಡಲಾಗಿದೆ. 6 ಪ್ರಕರಣಗಳಲ್ಲಿ ಬೇರೆ ಬೇರೆ ಇಲಾಖೆಗಳು ವರದಿ ನೀಡುವಂತೆ ತಿಳಿಸಲಾಗಿದೆ. 37 ದೂರುಗಳನ್ನು ಮುಂದಿನ ಅದಾಲತ್‌ನಲ್ಲಿ ಪರಿಶೀಲಿಸುವುದಾಗಿ ತಿಳಿಸಲಾಗಿದೆ ಎಂದು ಡಾ| ಷಾಹಿದಾ ಕಮಾಲ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next