Advertisement
ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಗಣೇಶ ಮಂದಿರದ ವಠಾರದಲ್ಲಿ ರವಿವಾರ ನಡೆದ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇ ಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗಡಿನಾಡಿನಲ್ಲಿ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳನ್ನು ಉಳಿಸುವ ಪ್ರಯತ್ನ ಇಂದು ಪ್ರಮುಖವಾದುದು. ಸಾಹಿತ್ಯವು ರೂಪಕಾತ್ಮಕ ವಾದುದಾಗಿದೆ. ಇಂದು ಕನ್ನಡ ಭಾಷೆ ಸಾಹಿತ್ಯ ಸವಾಲುಗಳ ಸುಳಿಯಲ್ಲಿರುವುದು ಸುಳ್ಳಲ್ಲ. ಯಾವ ಕಾಲಘಟ್ಟ, ಯಾವ ಭೂ ಪ್ರದೇಶವಾದರೂ ಭಾಷೆ ಅಗತ್ಯವಾಗಿದ್ದು, ಸಂಸ್ಕೃತಿ ಮತ್ತು ಭಾಷೆ ಪರಸ್ಪರ ಸಂಬಂಧ ಹೊಂದಿವೆ. ಭಾಷೆ- ಭಾಷೆಗಳ ಮಧ್ಯೆ ಸಂಬಂಧಗಳು ಮೂಡಿಬರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ವಲಯಗಳ ಸಾಧಕರಾದ ಕೆ. ನಾರಾಯಣ ಗಟ್ಟಿ, ಕೀರಿಕ್ಕಾಡು ವನಮಾಲ ಕೇಶವ ಭಟ್, ಮಹಾಬಲ ಶೆಟ್ಟಿ ಕೂಡ್ಲು, ಡಾ| ಗಣಪತಿ ಭಟ್ ಕುಳಮರ್ವ, ಮಹಮ್ಮದ್ ಆಲಿ ಪೆರ್ಲ, ಕೆ. ಜಲಜಾಕ್ಷಿ ಟೀಚರ್ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿ ಗೌರವಿಸಿದರು.
Related Articles
ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಕಾಸರಗೋಡು, ಸಂಘಟನ ಸಮಿತಿಯ ಕಾರ್ಯಾಧ್ಯಕ್ಷ ಕೆ. ರಂಗನಾಥ ಶೆಣೈ ಮುಳ್ಳೇರಿಯ ಉಪಸ್ಥಿತರಿದ್ದರು. ಪ್ರಚಾರ ಮತ್ತು ಮೆರವಣಿಗೆ ಸಮಿತಿ ಅಧ್ಯಕ್ಷ ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ಪ್ರಚಾರ ಮತ್ತು ಮೆರವಣಿಗೆ ಸಮಿತಿಯ ಸಂಚಾಲಕ ಪ್ರಕಾಶ್ ಕುಂಟಾರು ವಂದಿಸಿದರು. ಕಾರ್ಯಕ್ರಮ ಸಂಯೋಜನ ಸಮಿತಿಯ ಸಂಚಾಲಕ ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
Advertisement