ಪೆರ್ಲ: ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.ಪೆರ್ಲ ಇಡಿಯಡ್ಕದಲ್ಲಿ ನಾಲ್ಕು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದ ಕರ್ನಾಟಕ ನಿವಾಸಿ ಸಯ್ಯಿದ್ ಆಬಿದ್ ತಂಙಳ್ (55) ವಿರುದ್ಧ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರ ಆದೇಶದಂತೆ ಕೇಸು ದಾಖಲಿಸಲಾಗಿದೆ.
Advertisement
ಮರಳು ಸಾಗಾಟ : ಪೊಲೀಸರಿಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ತಂಡದಿಂದ ದಂಪತಿಗೆ ಹಲ್ಲೆಕುಂಬಳೆ: ನಿರಂತರವಾಗಿ ಮರಳು ಸಾಗಾಟ ಬಗ್ಗೆ ಪೊಲೀಸರಿಗೆ ನೀಡಿದ ದೂರು ಸೋರಿಕೆಯಾಗಿದೆ. ಇದರಿಂದ ದೂರು ನೀಡಿದ ಮನೆಯವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಜೇಶ್ವರ ಹೊಸಬೆಟ್ಟು ಕಡಪ್ಪುರ ನಿವಾಸಿ ಅಬ್ದುಲ್ ಹಕೀಂ (37) ಮತ್ತು ಪತ್ನಿ ನಸೀಮಾ (30) ಅವರಿಗೆ ತಂಡವೊಂದು ಮನೆಗೆ ನುಗ್ಗಿ ಹಲ್ಲೆ ಮಾಡಿದೆ. ಮೇ 9ರಂದು ರಾತ್ರಿ 9.30 ಕ್ಕೆ ಮನೆಗೆ ನುಗ್ಗಿದ ಮೂರು ಮಂದಿಯ ತಂಡ ಮೂವರು ಮಕ್ಕಳ ಮುಂದೆಯೇ ಕಬ್ಬಿಣದ ಸರಳಿನಿಂದ ಹೊಡೆದು ಹಲ್ಲೆ ಮಾಡಿದೆ.
Related Articles
ಕಾಸರಗೋಡು: ಬೇಕಲ ಸೇತುವೆ ಬಳಿ ಕಾರು ಢಿಕ್ಕಿ ಹೊಡೆದು ಮೀನು ಕಾರ್ಮಿಕ ಬೇಕಲ ತಂಬುರಾನ್‌ವಳಪ್ ವೇಲಿಪುರಂ ಹೌಸ್‌ನ ಕಣ್ಣನ್ ಅವರ ಪುತ್ರ ಬಾಬು ಕೆ. (58) ಸಾವಿಗೀಡಾದರು.
Advertisement
ನೀರು ವಿತರಿಸುತ್ತಿದ್ದ ಟ್ಯಾಂಕರ್ ಪಲ್ಟಿ : ಇಬ್ಬರಿಗೆ ಗಾಯ
ಉಪ್ಪಳ: ನೀರು ವಿತರಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಹಿಂಬದಿಯ ಆ್ಯಕ್ಸಿಲ್ ತುಂಡಾಗಿ ಪಲ್ಟಿಯಾದ ಘಟನೆ ಬಂದ್ಯೋಡು ಪಂಜದಲ್ಲಿ ಮೇ 10ರಂದು ಬೆಳಗ್ಗೆ ನಡೆದಿದೆ.ಟ್ಯಾಂಕರ್‌ನಲ್ಲಿದ್ದ ಚಾಲಕ ಪಚ್ಲಂಪಾರೆ ನಿವಾಸಿ ನಿಶಾಂತ್(25) ಮತ್ತು ಸಹಾಯಕ ಅಜೇಶ್ ಗಾಯಗೊಂಡಿದ್ದಾರೆ. ಅವರನ್ನು ಬಂದ್ಯೋಡ್‌ನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾರಾಯಿ ಸಹಿತ ಬಂಧನ
ಅಡೂರು: 10 ಲೀಟರ್ ಸಾರಾಯಿ ಸಹಿತ ಬಳ್ಳಕಾನ ನಿವಾಸಿ ಕೃಷ್ಣೇಶ್ (37) ನನ್ನು ಅಬಕಾರಿ ಅಧಿಕಾರಿಗಳು ಬಳ್ಳಕಾನದಿಂದ ಬಂಧಿಸಿದ್ದಾರೆ. ಸ್ಕೂಟರ್ ಢಿಕ್ಕಿ : ಗಾಯ
ಉಪ್ಪಳ: ಅಂಗಡಿಪದವಿನಲ್ಲಿ ಬೈಕ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಅಂಗಡಿಪದವು ಶಾಂತಿನಗರ ನಿವಾಸಿ ಅಂದುಂಞಿ ಅವರ ಪುತ್ರ ಅಬ್ದುಲ್ ರಹಿಮಾನ್ (47) ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊದೆಗೆ ಬೆಂಕಿ
ಉಪ್ಪಳ: ದೈಗೋಳಿಯಲ್ಲಿ ಡಾ| ಶಾರದಾ ಅವರ ಹಿತ್ತಿಲಿನಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು. ಸೋಂಕಾಲು ಗುಳಿಗ ಬನದ ಪರಿಸರದಲ್ಲಿ ಪೊದೆಗೆ ಬೆಂಕಿ ಹತ್ತಿಕೊಂಡಿದ್ದು ಉಪ್ಪಳದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು. ಮುಳ್ಳು ಹಂದಿ ಬೇಟೆ : ಇಬ್ಬರು ಶರಣು
ಕಾಸರಗೋಡು: 2018 ಜ.26 ರಂದು ವಿದ್ಯಾನಗರ ಪಡುವಡ್ಕದ ಖಾಸಗಿ ಹಿತ್ತಿಲೊಂದರಿಂದ ಮುಳ್ಳುಹಂದಿಯನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುತ್ತಿಕ್ಕೋಲ್ ನುರುವೀಟಿಲ್ ಅಂಬುಜಾಕ್ಷನ್ (45) ಮತ್ತು ಮುನ್ನಾಡಿನ ರಾಮಚಂದ್ರನ್ ಯಾನೆ ಪೊಕ್ಕನ್ (60) ಕಾಸರಗೋಡು ರೇಂಜ್‌ನ ಅರಣ್ಯ ಪಾಲಕರ ಮುಂದೆ ಶರಣಾಗಿದ್ದಾರೆ. ಬಸ್‌ನಿಂದ ಮದ್ಯ ವಶಕ್ಕೆ
ಉಪ್ಪಳ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಾರೀಸುದಾರರಿಲ್ಲದ 3 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.