Advertisement

ಕಾಸರಗೋಡು: ಡೆಂಗ್ಯೂ ತಡೆ ಚಟುವಟಿಕೆ ಸಕ್ರಿಯ

09:44 PM Apr 23, 2020 | Sriram |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಲೆನಾಡ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಿಯಂತ್ರಣ ಚಟುವಟಿಕೆ ಚುರುಕುಗೊಳಿಸಿದೆ.

Advertisement

ಮಲೆನಾಡ ಪ್ರದೇಶಗಳಾದ ವೆಸ್ಟ್‌ ಎಳೇರಿ, ಕುತ್ತಿಕೋಲ್‌, ಪಾಣತ್ತೂರು, ನರ್ಕಿಲಕ್ಕಾಡ್‌, ಬೇಡಡ್ಕ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ವರದಿಯಾಗಿದೆ. ಜಿಲ್ಲೆಯ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಫೀಲ್ಡ್‌ ಸಿಬಂದಿ, ಜಿಲ್ಲಾ ವೆಕ್ಟರ್‌ ಕಂಟ್ರೋಲ್‌ ಯೂನಿಟ್‌ ಜಂಟಿಯಾಗಿ ಸೊಳ್ಳೆ ಸಹಿತ ಕೀಟನಾಶಕ ಚಟುವಟಿಕೆ, ಜನಜಾಗೃತಿ ನಡೆಸುತ್ತಿದ್ದಾರೆ. ನರ್ಕಿಲಕ್ಕಾಡ್‌, ಕುತ್ತಿಕೋಲ್‌, ಪನತ್ತಡಿ, ಚಿತ್ತಾರಿಕಲ್‌ ಪ್ರದೇಶಗಳಲ್ಲಿ ಫಾಗಿಂಗ್‌ ಕ್ರಮ ನಡೆಯುತ್ತಿದೆ. ಜನ ಜಾಗೃತಿ ಅಂಗವಾಗಿ ಮನೆಮನೆ ಸಂದರ್ಶನ ನಡೆಯುತ್ತಿದೆ.

ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗೃತಿ ಕ್ರಮ ಕೈಗೊಳ್ಳಬೇಕು. ಗೆರಟೆ, ಅಡಿಕೆ ಹಾಳೆ, ಟಯರ್‌, ಪ್ಲಾಸ್ಟಿಕ್‌ ಪಾತ್ರೆಗಳು, ಮೊಟ್ಟೆಯ ಅವಶೇಷ, ಟರ್ಪಾಲ್‌ ಶೀಟ್‌ ಇತ್ಯಾದಿಗಳನ್ನು ಮನೆಯ ಆವರಣದಿಂದ ತೆರವು ಗೊಳಿಸಬೇಕು. ಜಲಕ್ಷಾಮ ತಲೆ ದೋರುತ್ತಿರುವ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ನೀರು ತುಂಬಿಸಿದ ಪಾತ್ರೆಗಳನ್ನು ಶುಚೀಕರಿಸಬೇಕು ಸಹಿತ ಆರೋಗ್ಯ ಇಲಾಖೆ ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.ಡೆಂಗ್ಯೂ ಜ್ವರ, ಮಲೇರಿಯ ಸೊಳ್ಳೆಗಳ ಮೂಲಕ ಹರಡುವ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಡೆಂಗ್ಯೂ ಡೌನ್‌ ಚಾಲೆಂಜ್‌ ಸಹಿತ ರಂಗದಲ್ಲಿದೆ. ಇದರ ಅಂಗವಾಗಿ ಮನೆಯ ಆವರಣದಲ್ಲಿ ಸೊಳ್ಳೆಯ ಸಂತಾ ನೋತ್ಪತ್ತಿಯ ಕೇಂದ್ರಗಳನ್ನು ಪತ್ತೆಮಾಡಿ ಫೋಟೋ ಕ್ಲಿಕ್ಕಿಸಿ ವಾಟ್ಸಾಪ್‌ ನಂಬ್ರ : 6282154544ಕ್ಕೆ ಕಳುಹಿಸಬೇಕು. ಜತೆಗೆ ಫೂಟೋ ಕಳುಹಿಸುವವರ ಹೆಸರು, ವಿಳಾಸ, ದೂರವಾಣಿ ನಂಬ್ರ, ವಾರ್ಡ್‌ ನಂಬ್ರ, ಸ್ಥಳೀಯಾಡಳಿತ ಸಂಸ್ಥೆಯ ಹೆಸರು ಇತ್ಯಾದಿ ಕಳುಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next