Advertisement

ಕಾಸರಗೋಡು: 9 ಮಂದಿಗೆ ಸೋಂಕು

09:06 AM Jun 23, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್‌ ಪಾಸಿಟಿವ್‌ ದೃಢವಾಗಿದೆ. ಅವರಲ್ಲಿ 8 ಮಂದಿ ವಿದೇಶಗಳಿಂದ ಆಗಮಿಸಿದವರು. ಒಬ್ಟಾತ ಮಹಾರಾಷ್ಟ್ರದಿಂದ ಬಂದವರು. ಉಕ್ಕಿನಡ್ಕದ ಮೆಡಿಕಲ್‌ ಕಾಲೇಜಿನಲ್ಲಿ ದಾಖಲಾಗಿದ್ದ 6 ಮಂದಿಗೆ, ಪಡನ್ನಕ್ಕಾಡ್‌ ಕೋವಿಡ್‌ ಚಿಕಿತ್ಸಾ ಸೆಂಟರ್‌ನಲ್ಲಿ ದಾಖಲಾಗಿದ್ದ ಒಬ್ಬರಿಗೆ ಕೋವಿಡ್‌ ನೆಗೆಟಿವ್‌ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದರು.

Advertisement

ಕುವೈಟ್‌ನಿಂದ ಬಂದಿದ್ದ ತ್ರಿಕರಿಪುರ, ಕಾಂಞಂಗಾಡ್‌, ಕುಂಬಳೆಯ ತಲಾ ಒಬ್ಬರು, ವಲಿಯಪರಂಬದ ಇಬ್ಬರು, ಕತಾರ್‌ನಿಂದ ಆಗಮಿಸಿದ್ದ ಮೊಗ್ರಾಲ್‌ ಪುತ್ತೂರಿನ ವ್ಯಕ್ತಿ, ಒಮಾನ್‌ನಿಂದ ಬಂದಿದ್ದ ವಲಿಯಪರಂಬದ ವ್ಯಕ್ತಿ, ದುಬಾೖಯಿಂದ ಆಗಮಿಸಿದ್ದ ಮಡಿಕೈ ನಿವಾಸಿ ಮತ್ತು ಮಹಾರಾಷ್ಟ್ರದಿಂದ ಬಂದಿದ್ದ ತ್ರಿಕರಿಪುರದ ವ್ಯಕ್ತಿಗೆ ಸೋಂಕು ಖಚಿತವಾಗಿದೆ.

ಕೇರಳದಲ್ಲಿ 138 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ಸೋಮವಾರ 138 ಮಂದಿಗೆ ಕೊರೊನಾ ದೃಢೀಕರಿಸಲಾಗಿದೆ. ಬಾಧಿತರಲ್ಲಿ 87 ಮಂದಿ ವಿದೇಶದಿಂದ ಹಾಗೂ 47 ಮಂದಿ ಇತರ ರಾಜ್ಯಗಳಿಂದ ಬಂದವರು. ನಾಲ್ವರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಸೋಮವಾರ 88 ಮಂದಿ ಗುಣಮುಖರಾಗದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next