Advertisement

ಕಾಸರಗೋಡು: 86 ಮಂದಿ ಮೇಲೆ ನಿಗಾ

12:21 AM Feb 04, 2020 | Team Udayavani |

ಕಾಸರಗೋಡು: ಕೊರೋನಾ ವೈರಸ್‌ ಬಾಧಿತನಾಗಿ ಚೀನದಿಂದ ಮರಳಿರುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಯ ಸಹಿತ 86 ಮಂದಿಯ ಮೇಲೆ ತೀವ್ರ ನಿಗಾ ಇಡಲಾಗಿದೆ. ಕಾಸರಗೋಡು ಜನರಲ್‌ ಆಸ್ಪತ್ರೆ ಮತ್ತು ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸೋಲೇಶನ್‌ ವಾರ್ಡ್‌ ಗಳನ್ನು ರಚಿಸಲಾಗಿದ್ದು, ಕೊರೊನಾ ವೈರಸ್‌ ಸೋಂಕು ತಡೆಯಲು ಜಿಲ್ಲೆ ಪೂರ್ಣ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರು ತಿಳಿಸಿದ್ದಾರೆ. ಜಿಲ್ಲೆಯ ವಿದ್ಯಾರ್ಥಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆದ ಅವರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆದೇಶಿಸಿದರು.

Advertisement

ಉಪಸಮಿತಿ ರಚನೆ
ಮುನ್ನೆಚ್ಚರಿಕೆಯಾಗಿ ಜಿಲ್ಲೆಯಲ್ಲಿ 15 ಉಪ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ದಿನಗಳಲ್ಲೂ ಸಂಜೆ 4.30ರಿಂದ 7 ಗಂಟೆಯ ವರೆಗೆ ಆರೋಗ್ಯ ಸ್ಥಿತಿಗತಿ ಗಳ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಆದೇಶಿಸಲಾಗಿದೆ. ತುರ್ತು ಸಂದರ್ಭ ಎದುರಿಸಲು ಜಿಲ್ಲಾ ಆಸ್ಪತ್ರೆ ಮತ್ತು ಜನರಲ್‌ ಆಸ್ಪತ್ರೆಗಳಲ್ಲಿ 108 ಆ್ಯಂಬುಲೆನ್ಸ್‌ ಸೇವೆಯನ್ನು ಸಜ್ಜು ಗೊಳಿಸಲಾಗಿದೆ.

ಕಂಟ್ರೋಲ್‌ ರೂಂ ಆರಂಭ
ಕೊರೊನಾ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಜಿಲ್ಲಾ ನಿಗಾ ಕಚೇರಿಯಲ್ಲಿ ಕಂಟ್ರೋಲ್‌ ರೂಂ ಆರಂಭಿಸಲಾಗಿದೆ. ಚೀನದಿಂದ ಬಂದವರು ಇಲ್ಲಿ ವರದಿ ಮಾಡಬೇಕೆಂದು ಆದೇಶಿಸಲಾಗಿದೆ.
ಕಂಟ್ರೋಲ್‌ ರೂಂ ದೂರವಾಣಿ: 9946000493, 2217777
ದಿಶಾ ಟೋಲ್‌ ಫ್ರೀ ನಂಬರ್‌: 0471 2552056.

Advertisement

Udayavani is now on Telegram. Click here to join our channel and stay updated with the latest news.

Next