Advertisement

ಕಾಸರಗೋಡು: 6 ಮಂದಿಗೆ ಸೋಂಕು

07:23 AM Jun 22, 2020 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 6 ಮಂದಿಗೆ ಕೋವಿಡ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ ಇಬ್ಬರು ಗುಣಮುಖರಾಗಿದ್ದಾರೆ. ಬಾಧಿತರಲ್ಲಿ ಮೂವರು ವಿದೇಶದಿಂದ, ಮೂವರು ಮಹಾರಾಷ್ಟ್ರದಿಂದ ಬಂದವರೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ. ಬಾಧಿತರಲ್ಲಿ ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿಯ ಮೂವರು, ವಿದೇಶದಿಂದ ಬಂದ ಪಳ್ಳಿಕೆರೆ, ಚೆಂಗಳ ಮತ್ತು ಮಂಗಲ್ಪಾಡಿಯ ತಲಾ ಒಬ್ಬರು ಇದ್ದಾರೆ. ಉದಯಗಿರಿ ಸಿಎಫ್‌ಎಲ್‌ಟಿಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಚೆಮ್ನಾಡ್‌ ನಿವಾಸಿ, ಪುತ್ತಿಗೆ ನಿವಾಸಿ ಗುಣಮುಖರಾಗಿದ್ದಾರೆ.  ಅವರಿಬ್ಬರೂ ಮಹಾರಾಷ್ಟ್ರದಿಂದ ಬಂದಿದ್ದರು.

Advertisement

ಕೇರಳದಲ್ಲಿ 133 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ರವಿವಾರ 133 ಮಂದಿಗೆ ಸೋಂಕು ದೃಢವಾಗಿದೆ. ತೃಶ್ಶೂರು-16, ಪಾಲ್ಗಟ್‌-15, ಕೊಲ್ಲಂ-13, ಇಡುಕ್ಕಿ-11, ಆಲಪ್ಪುಳ-10, ಕೋಟ್ಟಯಂ-10,ಮಲಪ್ಪುರಂ - 10, ಕಲ್ಲಿಕೋಟೆ-10, ಕಣ್ಣೂರು-10, ತಿರುವನಂತ ಪುರ-9, ಪತ್ತನಂ ತಿಟ್ಟ-8, ಕಾಸರಗೋಡು-6, ಎರ್ನಾಕುಳಂ-5 ಮಂದಿಯನ್ನು ಬಾಧಿಸಿದೆ. ಬಾಧಿತರಲ್ಲಿ 80 ಮಂದಿ ವಿದೇಶದಿಂದ ಬಂದವರು. 43 ಮಂದಿ ಇತರ ರಾಜ್ಯಗಳಿಂದ ಬಂದವರು. 9 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಇಡುಕ್ಕಿ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರನ್ನು ಸೋಂಕು ಬಾಧಿಸಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 93 ಮಂದಿ ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next