Advertisement

ಕಾಸರಗೋಡು: ಸೋಮವಾರ 207 ಮಂದಿಗೆ ಕೋವಿಡ್ ಸೋಂಕು ದೃಢ

11:01 PM Oct 05, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 207 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ 165 ಮಂದಿ ಗುಣಮುಖರಾಗಿದ್ದಾರೆ. 189 ಮಂದಿಗೆ ಸಂಪರ್ಕದ ಮೂಲಕ ತಗಲಿದೆ. ಬಾಧಿತರಲ್ಲಿ ಐವರು ವಿದೇಶದಿಂದಲೂ ಹಾಗೂ 13 ಮಂದಿ ಇತರ ರಾಜ್ಯಗಳಿಂದ ಬಂದವರು.

Advertisement

ಐವರ ಸಾವು
ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 101ಕ್ಕೇರಿದೆ. 62 ವರ್ಷದ ಕಾಸರಗೋಡು ಸೂರ್ಲು ಆರ್‌.ಡಿ. ನಗರದ ಆಲಂಗೋಡು ರೆಸಿಡೆನ್ಸ್‌ ಕಾಲನಿ ನಿವಾಸಿ, 52 ವರ್ಷ ನೀರ್ಚಾಲು ಚಿಮಿನಿಯಡ್ಕ ನಿವಾಸಿ, 61 ವರ್ಷದ ಚಟ್ಟಂಚಾಲು ಬೆಂಡಿಚ್ಚಾಲ್‌ ಬಾಲನಡ್ಕದ ನಿವಾಸಿ, 52ರ ಹರೆಯದ ಚೆರ್ವತ್ತೂರು ತುರುತ್ತಿ ಮುಳಕ್ಕೀಲ್‌ ನಿವಾಸಿ ಮತ್ತು 59ರ ಹರೆಯದ ಪಡನ್ನಕ್ಕಾಡ್‌ ಕುರುಂದೂರು ನಿವಾಸಿ ಮೃತಪಟ್ಟವರು.

ಕೇರಳದಲ್ಲಿ 5,042 ಪ್ರಕರಣ
ಕೇರಳದಲ್ಲಿ ಸೋಮವಾರ 5,042 ಮಂದಿಗೆ ಸೋಂಕು ದೃಢಪಟ್ಟಿದೆ. 23 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 859ಕ್ಕೇರಿದೆ.

67 ಪೊಲೀಸರಿಗೆ ಚಿಕಿತ್ಸೆ
ಕಾಸರಗೋಡು: ಕಾಸರಗೋಡು ನಗರ ಠಾಣೆಯ 67 ಮಂದಿ ಪೊಲೀಸರನ್ನು ಕೊರೊನಾ ಬಾಧಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನಗರ ಠಾಣೆಯ ಪೊಲೀಸರು ಕ್ವಾರಂಟೈನ್‌ನಲ್ಲಿರುವುದರಿಂದ ಈ ಠಾಣೆಯ ಹೊಣೆಯನ್ನು ಆದೂರು ಠಾಣೆಯ ಇನ್‌ಸ್ಪೆಕ್ಟರ್‌ ವಿಶ್ವಂಭರನ್‌ ಮತ್ತು ವಿದ್ಯಾನಗರ ಠಾಣೆಯ ಎಸ್‌ಐ ವಿಜಯನ್‌ ಅವರಿಗೆ ವಹಿಸಲಾಗಿದೆ. ಇತರ ಠಾಣೆಗಳ ಪೊಲೀಸ್‌ ಸಿಬಂದಿಯನ್ನು ನಗರ ಠಾಣೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ.

Advertisement

ಅಗ್ನಿ ಶಾಮಕ ದಳದ ನಾಲ್ವರಿಗೆ ಕೋವಿಡ್‌
ಕಾಸರಗೋಡು ಅಗ್ನಿಶಾಮಕ ದಳದ ನಾಲ್ವರಿಗೆ ಕೋವಿಡ್‌ ದೃಢಗೊಂಡಿದೆ. ಅಲ್ಲದೆ ಒಬ್ಬರ ಕುಟುಂಬದ ಮೂವರಿಗೆ ಸೋಂಕು ಬಾಧಿಸಿದೆ. ಈ ಕೇಂದ್ರದಲ್ಲಿ ಒಟ್ಟು 28 ಮಂದಿ ಇದ್ದು, 15 ಮಂದಿ ನಿಗಾದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next