Advertisement

ಕಾಸರಗೋಡು: ಮತಗಣನೆಯ ಕೇಂದ್ರವಾದ ಕಾಲೇಜು

10:51 AM May 24, 2019 | Team Udayavani |

ಕಾಸರಗೋಡು: ಮತಎಣಿಕೆ ಕೇಂದ್ರವಾಗಿ ಗಮನ ಸೆಳೆದ ಯುವಜನತೆಯ ಕಲರವ ತಾಣವಾಗಿದ್ದ ಕಲಾಲಯ ಯುವಜನತೆಯ ಆವೇಶ ಮತ್ತು ಕಲರವ, ಆಟೋಟಗಳಿಗೆ ವೇದಿಕೆಯಾಗಿರುವ ಕಾಲೇಜು ನಾಡಿನ ಭವಿತವ್ಯ ನಿರ್ಣಯಿಸುವ ಮತಗಣನೆಯ ಕೇಂದ್ರವಾಗಿ ಮಾರ್ಪಾಡಿಗಿ ಗುರುವಾರ ಜನನಿಭಿಡ ಕೇಂದ್ರವಾಗಿ ಗಮನ ಸೆಳೆದಿತ್ತು.

Advertisement

ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆ ಕೇಂದ್ರವಾಗಿದ್ದ ಪಡನ್ನಕ್ಕಾಡ್ ನೆಹರೂ ಆರ್ಟ್ಸ್ ಆಂಡ್ಸ ಯನ್ಸ್ ಕಾಲೇಜು ಇಲ್ಲಿನ ಮತಗಣನೆಯ ಏಕೈಕ ಕೇಂದ್ರವಾಗಿ ಜನತೆಯ ಇಡೀ ದಿನದ ಕೇಂದ್ರ ಬಿಂದುವಾಗಿತ್ತು.

ಸಾಧಾರಣ ಗತಿಗಿಂತ ಭಿನ್ನವಾಗಿ ಈ ಬಾರಿ ಇದೊಂದೇ ಕಡೆ ಮತಗಣನೆ ನಡೆದಿದೆ. ಈ ನಿಟ್ಟಿನಕರ್ತವ್ಯಕ್ಕಾಗಿ 900 ಮಂದಿ ಸಿಬ್ಬಂದಿ ಅಹೋರಾತ್ರಿ ಇಲ್ಲಿ ದುಡಿಮೆ ನಡೆಸಿದ್ದಾರೆ. ಸುರಕ್ಷೆಗಾಗಿ ಪೊಲೀಸರು ಮತ್ತು ಕೇಂದ್ರ ಸೇನಾಪಡೆ ಭದ್ರತೆ ಏರ್ಪಡಿಸಿತ್ತು. ಕೌಂಟಿಂಗ್ ಏಜೆಟರು, ಪತ್ರಕರ್ತರು ಸಹಿತ ಸಾವಿರಾರು ಮಂದಿ ಇಲ್ಲಿ ಒಂದೇ ಛಾವಣಿಯಡಿ ಇಡೀ ದಿನ
ದುಡಿದಿದ್ದಾರೆ.

ಕಾಲೇಜಿನ ಪ್ರಧಾನ ಗೇಟಿನ ಮುಂಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗಿನಿಂದಲೇ ವಾಹನದ ದೊಡ್ಡಸಾಲಿನ ನಿಲುಗಡೆ ಕಂಡುಬಂದಿತ್ತು. ಕರ್ತವ್ಯದಲ್ಲಿರುವ ಸಿಬ್ಬಂದಿ ಸಹಿತ ಮಂದಿಗೆ ಹೊತ್ತಿನ ಆಹಾರ ಇತ್ಯಾದಿಗಳ ಸಿದ್ಧತೆಗಾಗಿ ಕುಟುಂಬಶ್ರೀಯ ಅಡುಗೆಶಾಲೆ ಕಾಲೇಜು ಗೇಟಿನ ಬಳಿಯೇ ಸ್ಥಾಪಿತವಾಗಿತ್ತು.

ನಸುಕಿನಲ್ಲೇ ಬಹುತೇಕಮಂದಿ ಇಲ್ಲಿಗೆ ಹಾಜರಾಗಿದ್ದರು. ಸೂಕ್ಷ್ಮ ತಪಾಸಣೆಯ ನಂತರ, ಅಂಗೀಕಾರವಿರುವ ಪಾಸ್ ಹೊಂದಿರುವವರನ್ನು ಮಾತ್ರ ಮತಗಣನೆ ಕೇಂದ್ರವಿರುವ ಕಾಲೇಜಿನ ಆವರಣದೊಳಕ್ಕೆ ಪ್ರವೇಶಾತಿ ನೀಡಲಾಗಿತ್ತು. ಬೆಳಗ್ಗೆ 7ರಿಂದ 7.45 ವರೆಗೆ ಅಂಗೀಕೃತ ಪಾಸ್ ಹೊಂದಿರುವವರಿಗೆ ಮತಗಣನೆ ನಡೆಯುವ ಸೂಕ್ಷ್ಮ ಕೊಠಡಿಗಳಿಗೆ ಸಂದರ್ಶನನೀಡಲು ಅವಕಾಶ ನೀಡಲಾಗಿತ್ತು. ಮತಗಣನೆಯ ಯಥಾಸ್ಥಿತಿ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಚುರುಕಿನ ದುಡಿಮೆ ನಡೆಸಿದ್ದರು.

Advertisement

ಇವರ ಕಾಯಕಕ್ಕೆ ಪೂರಕವಾಗಿ ಜಿಲ್ಲಾ ಮಾಹಿತಿ ಕೇಂದ್ರ ವತಿಯಿಂದ ಮಾಧ್ಯಮಕೇಂದ್ರವನ್ನೂ ಕಾಲೇಜು ಆಸುಪಾಸಿನ ಪ್ರದೇಶದಲ್ಲಿ
ಸ್ಥಾಪಿಸಲಾಗಿತ್ತು. 60 ಮಂದಿ ಏಕಕಾಲಕ್ಕೆ ಕುಳಿತುಕೊಂಡು ಅಧಿಕೃತ ಮಾಹಿತಿ ಪಡೆದುಕೊಳ್ಳಬುದಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಮತದಾನ ನಡೆದು 30 ದಿನಗಳ ಕಾಲದ ನಂತರ ಜನತೆ ತುದಿಕಾಲಿನಲ್ಲಿ ನಿಂತು ಕಾಯುತ್ತಿದ್ದ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಿದ್ದರೆ, ಅವರೆಲ್ಲರ ಗಮನದ ಕೇಂದ್ರ ಪಡನ್ನಕ್ಕಾಡ್ ನೆಹರೂ ಕಾಲೇಜು ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next