Advertisement

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

11:37 AM Dec 29, 2024 | Team Udayavani |

ಕಾಸರಗೋಡು: ಬೋವಿಕ್ಕಾನ ಎರಿಂಞಪ್ಪುಳದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಸಂಭವಿಸಿದ ದುರಂತದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಬಾಲಕರು ಹೊಳೆಯಲ್ಲಿ ಸ್ನಾನ ಮಾಡುತ್ತಿ ದ್ದಾಗ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ಎರಿಂಞಪ್ಪುಳದಲ್ಲಿ ಕೋಳಿ ವ್ಯಾಪಾರಿಯಾಗಿರುವ ಅಶ್ರಫ್‌ ಅವರ ಪುತ್ರ ಮುಹಮ್ಮದ್‌ ಯಾಸಿನ್‌ (13), ಎರಿಂಞಪ್ಪುಳದ ಸಿದ್ಧಿಕ್‌ ಅವರ ಪುತ್ರ ರಿಯಾಸ್‌ (16) ಹಾಗೂ ಮಜೀದ್‌ ಅವರ ಪುತ್ರ ಸಮದ್‌ (14) ಮೃತ ಬಾಲಕರು.

ಪೊಲೀಸ್‌ ಎಸ್‌ಐ ಸೈಫುದ್ದೀನ್‌ ನೇತೃತ್ವದಲ್ಲಿ ಸ್ಕೂಬಾ ತಂಡ, ಕುತ್ತಿಕ್ಕೋಲ್‌ನ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ರಿಯಾಸ್‌ನನ್ನು ಮೇಲಕ್ಕೆತ್ತಿ ಕೂಡಲೇ ಚೆರ್ಕಳದ ಆಸ್ಪತ್ರೆಗೆ ಸಾಗಿಸಿದರು. ಆದರೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇನ್ನಿಬ್ಬರ ಮೃತದೇಹವನ್ನು ಆ ಬಳಿಕ ಪತ್ತೆಹಚ್ಚಿ ಮೇಲಕ್ಕೆತ್ತಲಾಯಿತು. ಅಪಾರ ಸಂಖ್ಯೆಯ ಜನರು ಸ್ಥಳದಲ್ಲಿ ನೆರೆದಿದ್ದರು.

ಸಚಿವ ಕಡನ್ನಪಳ್ಳಿ ಭೇಟಿ ಸಚಿವ ರಾಮಚಂದ್ರನ್‌ ಕಡನ್ನಪಳ್ಳಿ ಅವರು ವಿಷಯ ತಿಳಿದು ದುರಂತ ಸಂಭವಿಸಿದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಶಾಸಕ ಸಿ.ಎಚ್‌.ಕುಂಞಂಬು ಸಹಿತ ಹಲವು ಗಣ್ಯರು ಸ್ಥಳಕ್ಕೆ ಭೇಟಿ ನೀಡಿದರು. ಸಚಿವರು, ಶಾಸಕರು ಹಾಗು ಜನಪ್ರತಿನಿಧಿಗಳು ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next