Advertisement

ಟಿಪ್ಪರ್‌ -ಕಾರು ನಡುವೆ ಭೀಕರ ಅಪಘಾತ: ಮೂವರು ಸಾವು, ಇನ್ನೋರ್ವ ಗಂಭೀರ

06:28 PM Dec 03, 2022 | Team Udayavani |

ಕಾಸರಗೋಡು: ಚಾಯೋತ್‌ನಲ್ಲಿ ಸಮಾರೋಪಗೊಂಡ ಶಾಲಾ ಕಲೋತ್ಸವವನ್ನು ವೀಕ್ಷಿಸಿ ವಾಪಸಾಗುತ್ತಿದ್ದಾಗ ಕಾರಿಗೆ ಟಿಪ್ಪರ್‌ ಮುಖಾಮುಖಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸಾವಿಗೀಡಾಗಿದ್ದು, ಇನ್ನೋರ್ವ ಯುವಕ ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಡಿ. 2ರಂದು ರಾತ್ರಿ 8.30ಕ್ಕೆ ನೀಲೇಶ್ವರ ಚೊಯಂಕೋಡು ಮಂಞಳಕಾಡ್‌ ತಿರುವಿನಲ್ಲಿ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ನೀಲೇಶ್ವರ ಕೊನ್ನಕ್ಕಾಡ್‌ ಕೋಟಂಬಳಿಯ ಅನುಷ್‌ (26), ನೀಲೇಶ್ವರ ಕರಿಂದಳ ಚೆಮ್ಮಂತೋಡಿನ ಶ್ರೀರಾಗ್‌ (18) ಮತ್ತು ಪೆರಿಂಞನಂ ಮೀರ್‌ಕಾನದ ಕೆ. ಕೆ. ಕಿಶೋರ್‌(20) ಮೃತಪಟ್ಟರು.

ಗಂಭೀರ ಗಾಯಗೊಂಡಿರುವ ಕುಂಬಳಪಳ್ಳಿಯ ಬಿನು (24) ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಲ್ವರೂ ವಿದ್ಯುನ್ಮಂಡಳಿಯ ಗುತ್ತಿಗೆ ಕಾರ್ಮಿಕರಾಗಿದ್ದಾರೆ ಎನ್ನಲಾಗಿದೆ. ಟಿಪ್ಪರ್‌ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾಡಾನೆ ಸೆರೆ ಕಾರ್ಯಾಚರಣೆಗೆ ಮತ್ತೊಂದು ಯಶಸ್ಸು: ಮೂಡಿಗೆರೆಯಲ್ಲಿ ಎರಡನೇ ಪುಂಡಾನೆ ಸೆರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next