ಕಾಸರಗೋಡು: ಬೈಬಲ್‌ಗೆ ಬೆಂಕಿ ಹಚ್ಚಿ ಅದರ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರಗೈದ ಪ್ರಕರಣದ ಆರೋಪಿ ಕಾನತ್ತೂರು ಎರಿಂಞಿಪುಳ ನಿವಾಸಿ ಮೊಹಮ್ಮದ್ ಮುಸ್ತಫ(38)ನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ.
ಜ.29 ರಂದು ರಾತ್ರಿ ಬೈಬಲ್‌ಗೆ ಬೆಂಕಿ ಹಚ್ಚಿದ್ದು, ಆ ದೃಶ್ಯಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ ಸಹಿತ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಮಾಡಿದ ಸಂಬಂಧ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಇತ್ತೀಚೆಗೆ ಕ್ರಿಸ್ಮಸ್ ಹಬ್ಬದ ಅಂಗವಾಗಿ ಬೋವಿಕ್ಕಾನದ ಸಾಮೂಹಿಕ ಆರೋಗ್ಯ ಕೇಂದ್ರದ ಪರಿಸರದಲ್ಲಿ ನಿರ್ಮಿಸಿದ್ದ ಗೋದಲಿಯಿಂದ ಮೂರ್ತಿಗಳನ್ನು ಕಳವುಗೈದ ಪ್ರಕರಣದಲ್ಲೂ ಈತ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
**
45 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ : ಬಂಧನ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 45,43,913 ರೂ. ಮೌಲ್ಯದ 799 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡ ಕಸ್ಟಂಸ್ ದಳ ಈ ಸಂಬಂಧ ಕಾಸರಗೋಡು ನಿವಾಸಿ ಮೊಹಮ್ಮದ್ ನಸೀದಿಲ್‌ನನ್ನು ಬಂಧಿಸಿದೆ. ಮೆಟಲ್ ಬಕೆಟ್‌ನ ರೂಪದಲ್ಲಿ ಹಾಗು ಎಮರ್ಜೆನ್ಸಿ ಲೈಟರ್‌ನ ಒಳಗೆ ಚಿನ್ನವನ್ನು ಬಚ್ಚಿಟ್ಟು ಚಿನ್ನ ಸಾಗಿಸಲು ಯತ್ನಿಸಲಾಗಿತ್ತು. ದುಬಾೖಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಈತ ಬಂದಿಳಿದಿದ್ದನು.
Related Articles
**
31.26 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 31,26,750 ರೂ. ಮೌಲ್ಯದ 550 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡು, ಈ ಸಂಬಂಧ ಕಾಸರಗೋಡು ನಿವಾಸಿ ಸುಹೈಬ್ ರಹ್ಮಾನ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅಬುದಾಬಿಯಿಂದ ಗೋ ಫಾಸ್ಟ್ ವಿಮಾನದಲ್ಲಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈತನ ಬ್ಯಾಗನ್ನು ತಪಾಸಣೆ ಮಾಡಿದಾಗ ಬಚ್ಚಿಡಲಾಗಿದ್ದ ಚಿನ್ನ ಪತ್ತೆಯಾಯಿತು.
ಇದನ್ನೂ ಓದಿ: ಗಂಗೊಳ್ಳಿ: ಸ್ಕೀಮ್ ಹೆಸರಿನಲ್ಲಿ ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆ