ಕಾಸರಗೋಡು: ಕೇರಳದ ಕೃಷಿ ಕ್ಷೇತ್ರದಲ್ಲಿ 2,390 ಕೋ. ರೂ.ಯ ವಿಶ್ವ ಬ್ಯಾಂಕ್ ಯೋಜನೆಗೆ ಈ ವರ್ಷ ಚಾಲನೆ ನೀಡಲಾಗುವುದು. 1,680 ಕೋಟಿರೂಪಾಯಿಯನ್ನುವಿಶ್ವ ಬ್ಯಾಂಕ್ ಸಹಾಯವಾಗಿ ಲಭಿಸಲಿದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರ ನೀಡಲಿದೆ. ಅದೇ ವೇಳೆ ವರಮಾನ ಹೆಚ್ಚಳಕ್ಕೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಕೇರಳ ಕೃಷಿ ಸಚಿವ ಪಿ. ಪ್ರಸಾದ್ ಅವರುಹೇಳಿದರು.
ಪ್ಲಾಂಟೇಶನ್ ಕಾರ್ಪೊರೇಶನ್ ಆಫ್ ಕೇರಳ ಕಾಸರಗೋಡು ಎಸ್ಟೇಟ್ ನೂತನವಾಗಿ ನಿರ್ಮಿಸಿದ ಗೇರು ಹಣ್ಣು ಸಂಸ್ಕರಣ ಕಾರ್ಖಾನೆಯನ್ನು ಮುಳಿಯಾರಿನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಕನ ವರಮಾನ ಹೆಚ್ಚಳಕ್ಕೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಪ್ರಾಮುಖ್ಯ ನೀಡಬೇಕಾಗಿದೆ. ಉತ್ತಮ ಗುಣಮಟ್ಟದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಿದರೆ ಕೃಷಿಕನ ವರಮಾನದಲ್ಲಿ ಹೆಚ್ಚಳವಾಗಲಿದೆ. ಕೃಷಿ ಇಲಾಖೆಯ ನೆರವಿನೊಂದಿಗೆ 2,000ದಷ್ಟು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲಾಗುವುದು ಎಂದು ಹೇಳಿದರು.
ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದರು. ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ವಿ. ಮಿನಿ ಸಹಿತ ಪ್ರಮುಖರು ಮಾತನಾಡಿದರು.
ಪ್ಲಾಂಟೇಶನ್ ಕಾರ್ಪೊರೇಶನ್ ಕೇರಳ ಲಿಮಿಟೆಡ್ ಚೆಯರ್‌ವೆುನ್ ಒ.ಪಿ.ಅಬ್ದುಲ್ ಸಲಾಂ ಸ್ವಾಗತಿಸಿದರು. ಮೆನೇಜಿಂಗ್ ಡೈರೆಕ್ಟರ್ ಡಾ| ಜೇಮ್ಸ್ ಜೇಕಬ್ ವಂದಿಸಿದರು.