Advertisement

Kasaragod; ಅಕ್ರಮ ಮೀನುಗಾರಿಕೆ: ಮೂರು ಬೋಟ್‌ಗಳು ವಶಕ್ಕೆ

11:30 PM Feb 18, 2024 | Team Udayavani |

ಕಾಸರಗೋಡು: ಅಕ್ರಮ ಮೀನುಗಾರಿಕೆ ವಿರುದ್ಧ ಕ್ರಮ ಮುಂದುವರಿಯುತ್ತಿರುವಂತೆ ಮತ್ತೆ ಫಿಶರೀಸ್‌ ಇಲಾಖೆ, ತೃಕ್ಕರಿಪುರ, ಶಿರಿಯ, ಬೇಕಲ ಕರಾವಳಿ ಪೊಲೀಸ್‌ ಸಂಯುಕ್ತವಾಗಿ ರಾತ್ರಿ ಟ್ರಾಲಿಂಗ್‌ ನಡೆಸಿದ ಮೂರು ಬೋಟ್‌ಗಳನ್ನು ವಶಪಡಿಸಿಕೊಂಡಿದ್ದು, 7.5 ಲಕ್ಷ ರೂ. ದಂಡ ವಿಧಿಸಿದೆ.

Advertisement

ಕಾನೂನು ಪರ ಯಾವುದೇ ದಾಖಲೆಗಳಿಲ್ಲದೆ ರಾತ್ರಿ ಕಾಲದಲ್ಲಿ ಸಮುದ್ರದಲ್ಲಿ ಟ್ರಾಲಿಂಗ್‌ ನಡೆಸಿದ ಕರ್ನಾಟಕದ ಗಣೇಶ ಪ್ರಸನ್ನ, ಏಶ್ಯನ್‌ ಬ್ಲೂ, ಶ್ರೀರಂಗ ಎಂಬ ಮೂರು ಬೋಟ್‌ಗಳನ್ನು ವಶಪಡಿಸಿಕೊಂಡಿದೆ.

ಕುಂಬಳೆ ಕಡಲ ಕಿನಾರೆಯಿಂದ 12 ನಾಟಿಕಲ್‌ ಮೈಲ್‌ ವ್ಯಾಪ್ತಿಯೊಳಗೆ ಮೀನುಗಾರಿಕೆ ನಡೆಸಿದ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಮೀನುಗಾರಿಕಾ ಡೆಪ್ಯೂಟಿ ಡೈರೆಕ್ಟರ್‌ ಕೆ.ಎ.ಲಬೀಬ್‌ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next