Advertisement

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

07:41 PM Nov 05, 2024 | Team Udayavani |

ಕಾಸರಗೋಡು: ನೀಲೇಶ್ವರ ಅಂಞಾಟಂಬಲ ವೀರರ್‌ಕಾವು ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವದ ಸಂದರ್ಭ ಸಂಭವಿಸಿದ ಪಟಾಕಿ ದುರಂತದ ಮೂವರು ಆರೋಪಿಗಳ ಜಾಮೀನು ರದ್ದುಗೊಳಿಸಬೇಕೆಂದು ತನಿಖಾ ತಂಡ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.

Advertisement

ಅರ್ಜಿಯನ್ನು ನ. 6ರಂದು ನ್ಯಾಯಾಲಯ ಪರಿಗಣಿಸಲಿದೆ. ಒಂದನೇ ಆರೋಪಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರನ್‌ ಮತ್ತು ಎರಡನೇ ಆರೋಪಿ ಕೆ.ಟಿ. ಭರತನ್‌ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ. ಏಳನೇ ಆರೋಪಿಗೆ ಜಾಮೀನು ಲಭಿಸಿದ್ದರೂ ಜೈಲಿನಲ್ಲಿದ್ದಾನೆ. ಪ್ರಕರಣದಲ್ಲಿ ಒಟ್ಟು 9 ಮಂದಿ ಆರೋಪಿಗಳಿದ್ದು, ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ದುರಂತದಲ್ಲಿ ನಾಲ್ವರು ಸಾವಿಗೀಡಾಗಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಇನ್ನೂ ಗಂಭೀರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next