Advertisement

Kasaragod: ಎಡನೀರು ದೇವಸ್ಥಾನದಿಂದ ಕಳವು

09:05 PM Nov 04, 2024 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಡಿ.ಐ.ಜಿ. ನಿರ್ದೇಶದಂತೆ ತಪಾಸಣೆ ‘ಕೋಂಬಿಂಗ್‌’ ಆಪರೇಶನ್‌ ನಡೆಸುತ್ತಿರುವಂತೆ ಎಡನೀರು ವಿಷ್ಣುಮಂಗಲ ಮಹಾವಿಷ್ಣು ದೇವಸ್ಥಾನದಿಂದ ಸುಮಾರು 10 ಸಾವಿರ ರೂ.ಕಳವಾಗಿದೆ ಎಂದು ಅಂದಾಜಿಸಲಾಗಿದೆ.

Advertisement

ಹತ್ತಿರದ ಎಡನೀರು ದೇವಸ್ಥಾನದ ಗಸ್ಟ್‌ ಹೌಸ್‌ನಿಂದಲೂ ಕಳವು ಮಾಡಲು ಕಳ್ಳ ತಲುಪಿದ್ದರೂ, ಕಾವಲುಗಾರರು ಶಬ್ದ ಕೇಳಿ ಎಚ್ಚೆತ್ತುದರಿಂದ ಕಳ್ಳರು ಪರಾರಿಯಾಗಿದ್ದಾರೆ. ಎಡನೀರು ಸ್ವಾಮೀಜಿಗಳ ಸ್ವಾಧೀನದಲ್ಲಿರುವ ದೇವಸ್ಥಾನವಾಗಿದ್ದು, ಇಲ್ಲಿನ ಗರ್ಭಗುಡಿಯಲ್ಲಿ ವಿಗ್ರಹವನ್ನು ಸ್ಥಳದಿಂದ ದೂರಕ್ಕೆ ಸರಿಯಲಾಗಿದೆ. ಡಿವೈಎಸ್‌ಪಿ ಸಿ.ಕೆ.ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸಲಾಗುವುದೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next