Advertisement

Kasaragod; ಡಾ| ರತ್ನಾಕರ ಮಲ್ಲಮೂಲೆ ಕಣ್ಣೂರು ವಿ.ವಿ. ಸೆನೆಟ್‌ ಸದಸ್ಯ

01:11 AM Apr 07, 2024 | Team Udayavani |

ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಸೆನೆಟ್‌ ಸಮಿತಿಗೆ ಕನ್ನಡಿಗರನ್ನು ಸದಸ್ಯರನ್ನಾಗಿ ಪರಿಗಣಿಸಿದೆ.

Advertisement

ಈ ಸಂಬಂಧ ವಿ.ವಿ. ಕುಲಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮಹಮ್ಮದ್‌ ಖಾನ್‌ ಅವರು ಭಾಷಾ ಅಲ್ಪಸಂಖ್ಯಾಕ ಕ್ಷೇತ್ರದ ಪ್ರತಿನಿಧಿಯಾಗಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ ಅವರನ್ನು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ| ರತ್ನಾಕರ ಸೇರಿದಂತೆ ಒಟ್ಟು 19 ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿದೆ.

ಕಣ್ಣೂರು ವಿ.ವಿ. ರಚನೆಯಾದ ಬಳಿಕ ಸೆನೆಟ್‌ನಲ್ಲಿ ಕನ್ನಡಿರಿಗೆ ಮೊದಲ ಬಾರಿ ಸ್ಥಾನ ಸಿಕ್ಕಿದೆ. ಈ ಹಿಂದೆ ಕಲ್ಲಿಕೋಟೆ ವಿ.ವಿ.ಯ ಸೆನೆಟ್‌ನಲ್ಲಿ ಕನ್ನಡಿಗರಿಗೆ ಸ್ಥಾನವಿತ್ತು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 3 ಬಾರಿ ಸಂಸದರಾಗಿದ್ದ ಕನ್ನಡಿಗರಾಮಣ್ಣ ರೈ ಕಲ್ಲಿಕೋಟೆ ವಿ.ವಿ.ಯ ಸೆನೆಟ್‌ ಸದಸ್ಯರಾಗಿ ಭಾಷಾ ಅಲ್ಪಸಂಖ್ಯಾ ಕರ ಪ್ರತಿನಿಧಿಯಾಗಿದ್ದರು.

ಕಾಸರಗೋಡು, ಕಣ್ಣೂರು ಹಾಗೂ ವಯನಾಡು ಜಿಲ್ಲೆಯ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಒತ್ತು ಕೊಡುವ ಉದ್ದೇಶದೊಂದಿಗೆ 1996ರಲ್ಲಿ ಕಣ್ಣೂರು ವಿ.ವಿ. ಅಸ್ತಿತ್ವಕ್ಕೆ ಬಂದಿತ್ತು. ಆದರೆ ಅಂದಿನಿಂದಲೂ ಭಾಷಾ ಅಲ್ಪಸಂಖ್ಯಾಕ ಸೆನೆಟ್‌ ಸ್ಥಾನವನ್ನು ಭರ್ತಿಗೊಳಿಸದೇ ಕೈಬಿಡಲಾಗುತ್ತಿತ್ತು. ಇದರ ಬಗ್ಗೆ ಮಾಜಿ ಶಾಸಕರೂ ಕನ್ನಡ ಹೋರಾಟಗಾರರಾದ ಯು.ಪಿ. ಕುಣಿಕುಳ್ಳಾಯ, ಕನ್ನಡ ಸಂತ ಪುರುಷೋತ್ತಮ ಮಾಸ್ತರ್‌ ಅವರು ಕನ್ನಡಿಗರನ್ನು ನೇಮಿಸಲು ನಿರಂತರ ಪ್ರಯತ್ನಿಸುತ್ತಿ ದ್ದರು. ಹಾಗಾಗಿ ಸುದೀರ್ಘ‌ 28 ವರ್ಷಗಳ ಬಳಿಕ ಮೊದಲ ಬಾರಿಗೆ ಕಣ್ಣೂರು ವಿ.ವಿ. ಕನ್ನಡಿಗರೊಬ್ಬನನ್ನು ಸೆನೆಟ್‌ಗೆ ಆಯ್ಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next