Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

11:04 PM Jun 22, 2019 | Team Udayavani |

ಜೈಲುಗಳಿಗೆ ದಾಳಿ: ಮಾರಕಾಯುಧ, ಮೊಬೈಲ್‌, ಗಾಂಜಾ ಪತ್ತೆ
ಕಾಸರಗೋಡು: ರಾಜ್ಯದ ಜೈಲುಗಳನ್ನು ಕೇಂದ್ರೀಕರಿಸಿ ವ್ಯಾಪಕ ಕಾನೂನು ಬಾಹಿರ ಚಟುವಟಿಕೆಗಳು, ಮಾದಕ ವಸ್ತು ಬಳಕೆ ಮತ್ತಿತರ ಅವ್ಯವಹಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಂಧೀಖಾನೆ ಇಲಾಖೆಯ ಮುಖ್ಯಸ್ಥರು ನೀಡಿದ ನಿರ್ದೇಶ ಪ್ರಕಾರ ವಿಶೇಷ ಪೊಲೀಸರ ತಂಡ ಶನಿವಾರ ಬೆಳಗ್ಗೆ ಕಣ್ಣೂರು ಮತ್ತು ವಿಯೂರು ಸೆಂಟ್ರಲ್‌ ಜೈಲುಗಳಿಗೆ ಏಕಕಾಲದಲ್ಲಿ ದಾಳಿ ಮತ್ತು ತಪಾಸಣೆ ನಡೆಸಿದೆ.

Advertisement

ಕಣ್ಣೂರಿನಲ್ಲಿ ಋಷಿರಾಜ್‌ ಸಿಂಗ್‌ರ ನೇತೃತ್ವದಲ್ಲಿ, ವಿಯೂರಿನಲ್ಲಿ ಎಸ್‌.ಪಿ. ಯತೀಶ್ಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು ಪರೋಲ್‌ನಲ್ಲಿ ಬಿಡುಗಡೆಗೊಂಡು ಮತ್ತೆ ಕೊಲೆ ಇತ್ಯಾದಿ ದುಷ್ಕೃತ್ಯ ನಡೆಸುವ ಸಂಚು ಹೂಡುತ್ತಿದ್ದಾರೆ. ಪರೋಲ್‌ನಲ್ಲಿ ಜೈಲಿನಿಂದ ಹೊರ ಬಂದ ಕೊಲೆ ಪ್ರಕರಣಗಳ ಕೆಲವು ಆರೋಪಿಗಳು ತಮ್ಮ ಎದುರಾಳಿಗಳನ್ನು ಕೊಲೆಗೈಯ್ಯಲು ಸುಫಾರಿ ತಂಡದವರಿಗೆ ನೀಡುತ್ತಿದ್ದಾರೆ ಎಂಬ ಗಂಭೀರ ದೂರುಗಳು ಋಷಿರಾಜ್‌ಸಿಂಗ್‌ಗೆ ಲಭಿಸಿತ್ತು. ಇದರ ಆಧಾರದಲ್ಲಿ ಜೈಲುಗಳಲ್ಲಿ ದಾಳಿ ನಡೆಸಲಾಗಿದೆ.

ಕಣ್ಣೂರು ಸೆಂಟ್ರಲ್‌ ಜೈಲಿನಲ್ಲಿ ನಡೆದ ದಾಳಿಯಲ್ಲಿ ಕೆಲವು ಖೈದಿಗಳನ್ನು ಕೂಡಿ ಹಾಕಲಾಗಿದ್ದ ಕೊಠಡಿಗಳಿಂದ ಮೂರು ಮೊಬೈಲ್‌ ಫೋನ್‌ಗಳು, ಹಲವು ಸಿಮ್‌ ಕಾರ್ಡ್‌ಗಳು, ಗಾಂಜಾ ಮತ್ತು ಚಾಕು ಇತ್ಯಾದಿ ಮಾರಕಾಯುಧಗಳನ್ನು ಪತ್ತೆಹಚ್ಚಲಾಗಿದೆ. ವಿಯೂರ್‌ ಸೆಂಟ್ರಲ್‌ ಜೈಲಿನಿಂದ ಖೈದಿಗಳ ಕೊಠಡಿಗಳಿಂದ ನಾಲ್ಕು ಮೊಬೈಲ್‌ ಫೋನ್‌ಗಳು ಮತ್ತು ಸಿಮ್‌ ಕಾರ್ಡ್‌ಗಳನ್ನು ವಶಪಡಿಸಲಾಗಿದೆ.

ಹಗ್ಗ ಕುತ್ತಿಗೆಗೆ ಬಿಗಿದು ಬಾಲಕನ ಸಾವು
ಕಾಸರಗೋಡು: ಹಗ್ಗ ಕುತ್ತಿಗೆಗೆ ಬಿಗಿಯಲ್ಪಟ್ಟು ಐದು ವರ್ಷದ ಬಾಲಕ ಸಾವಿಗೀಡಾದ ಘಟನೆ ನಡೆದಿದೆ.ಹೊಸದುರ್ಗ ಬಾವಾನಗರದ ಇಸ್ಮಾಯಿಲ್‌ ಅವರ ಪುತ್ರ ಫಾಹಿಂ(5) ಸಾವಿಗೀಡಾದ ಬಾಲಕ. ಹೊಸದುರ್ಗ ಕಡಪ್ಪುರ ಪಾಣಕ್ಕಾಡ್‌ ಪೂಕೋಯ ತಂಞಳ್‌ ಸ್ಮಾರಕ ಎಲ್‌.ಪಿ. ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಯಾಗಿರುವ ಪಾಹಿಂ ಶಾಲೆಯಿಂದ ಮನೆಗೆ ಬಂದು ಬಟ್ಟೆ ಬದಲಾಯಿಸಲೆಂದು ಮನೆಯೊಳಗಿದ್ದ ಹಗ್ಗದಿಂದ ಉಡುಪು ಎಳೆಯುವ ವೇಳೆ ಹಗ್ಗ ಕುತ್ತಿಗೆಗೆ ಸಿಲುಕಿಕೊಂಡಿದೆ. ಕೊಠಡಿಯೊಳಗೆ ಹೋದ ಫಾಹಿಂ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಬಂದು ನೋಡಿದಾಗ ಆತನ ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಕೋಯಿಕ್ಕೋಡ್‌: ಸಮುದ್ರದಲ್ಲಿ ಕಾಣೆಯಾದ ಮೀನುಗಾರಿಕಾ ಬಲೆ ಪೆರುವಾಡ್‌ ಕಡಪ್ಪುರದಲ್ಲಿ ಪತ್ತೆ
ಕುಂಬಳೆ: ಕೋಯಿಕ್ಕೋಡ್‌ನ‌ಲ್ಲಿ ಮೀನುಗಾರಿಕಾ ದೋಣಿ ದುರಂತದಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಪೆರುವಾಡ್‌ ಕಡಪ್ಪುರ ಹಾಗು ಶಿರಿಯ ಸಮುದ್ರದಲ್ಲಿ ಪತ್ತೆಯಾಗಿದೆ.

Advertisement

ಮೂರು ದಿನಗಳ ಹಿಂದೆ ತೀವ್ರಗೊಂಡ ಕಡಲಬ್ಬರಕ್ಕೆ ಸಿಲುಕಿ ಕಕೋಯಿಕ್ಕೋಡ್‌ಬೇಪೂರು ಪುದಿಯ ಕಣಕ್ಕದಲ್ಲಿ ಸಮುದ್ರದಲ್ಲಿ ಮೀನುಗಾರಿಕಾ ಬೋಟು ಅಪಘಾತಕ್ಕೀಡಾಗಿತ್ತು. ಬೋಟಿನಲ್ಲಿದ್ದ ಐವರನ್ನು ಕರಾವಳಿ ಪೊಲೀಸರು ರಕ್ಷಿಸಿದ್ದರು. ಆದರೆ ಬೋಟ್‌ನಲ್ಲಿದ್ದ ಹತ್ತು ಲಕ್ಷ ರೂ. ಮೌಲ್ಯದ ಬಲೆಗಳು ಸಮುದ್ರ ಪಾಲಾಗಿತ್ತು.

ವಿದ್ಯುತ್‌ ಶಾಕ್‌ : ಯುವಕನ ಸಾವು
ಕಾಸರಗೋಡು: ವಯರಿಂಗ್‌ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ವಿದ್ಯುತ್‌ ಶಾಕ್‌ ತಗಲಿ ಚಂದೇರ ಪಿಲಿಕ್ಕೋಡು ತೋಟಂಗೇಟ್‌ ಎಕ್ಕಚ್ಚಿ ನಿವಾಸಿ ಭಾಸ್ಕರ ಅವರ ಪುತ್ರ ಶೈಜು ಎಂ.ಕೆ.(30) ಸಾವಿಗೀಡಾದರು. ಪಿಲಿಕೋಡು ರೇಯರಮಂಗಲದ ಮನೆಯೊಂದರಲ್ಲಿ ವಯರಿಂಗ್‌ ಮಾಡುತ್ತಿದ್ದಾಗ ದುರಂತ ಸಂಭವಿಸಿತು.

ಮದ್ಯ ಸಹಿತ ಇಬ್ಬರ ಬಂಧನ
ಕುಂಬಳೆ: ಬಂದ್ಯೋಡ್‌ ಎಸ್‌.ಸಿ. ಕಾಲನಿಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 180 ಮಿಲ್ಲಿಯ 30 ಬಾಟಿÉ ಮದ್ಯವನ್ನು ವಶಪಡಿಸಲಾಗಿದೆ. ಈ ಸಂಬಂಧ ಇದೇ ಕಾಲನಿಯ ನಿವಾಸಿ ಕೃಷ್ಣ ಎ(23)ನನ್ನು ಬಂಧಿಸಲಾಗಿದೆ. ಶಿರಿಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 180 ಮಿಲ್ಲಿಯ 48 ಬಾಟಿÉ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಬಂದ್ಯೋvಎಸ್‌.ಸಿ. ಕಾಲನಿಯ ಪಿ.ಜಿ.ರಾಗೇಶ್‌(22)ನನ್ನು ಬಂಧಿಸಲಾಗಿದೆ.

ಟೆಂಪೋ ಢಿಕ್ಕಿ : ಬಾಲಕನಿಗೆ ಗಾಯ
ಮುಳ್ಳೇರಿಯ: ಕಲ್ಲು ಸಾಗಿಸುವ ಟೆಂಪೋ ಢಿಕ್ಕಿ ಹೊಡೆದು ವಿದ್ಯಾರ್ಥಿ ಗಾಯಗೊಂಡ ಘಟನೆ ಕಾರಡ್ಕದಲ್ಲಿ ನಡೆದಿದೆ.ಕಾರಡ್ಕ ಸರಕಾರಿ ವೊಕೇಶನಲ್‌ ಹೈಯರ್‌ ಸೆಕೆಂಡರಿ ಶಾಲೆಯ 4 ನೇ ತರಗತಿ ವಿದ್ಯಾರ್ಥಿ, ಅಡ್ಕಂ ನಿವಾಸಿ ರಾಜ ಅವರ ಪುತ್ರ ಆದಿತ್ಯ ರಾಜ್‌ ಗಾಯಗೊಂಡಿದ್ದಾರೆ. ಬಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಹಲ್ಲೆ
ಕುಂಬಳೆ: ಮೊಗ್ರಾಲ್‌ ಜಿವಿಎಚ್‌ಎಸ್‌ಎಸ್‌ನ ಪ್ಲಸ್‌ ಟು ವಿದ್ಯಾರ್ಥಿಗಳಾದ ಮೊಹಮ್ಮದ್‌ ಶಾನವಾಸ್‌(19) ಮತ್ತು ಮೊಹಮ್ಮದ್‌ ರಮೀಸ್‌(19) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ. ಇವರನ್ನು ಕುಂಬಳೆಯ ಆಸ್ಪತ್ರೆಗೆ ಸೇರಿಸಲಾಗಿದೆ. ಹಲ್ಲೆ ಸಂಬಂಧ ಬಾದ್‌ಶಾ, ಫಾರೂಕ್‌, ಇಸ್ಮಾಯಿಲ್‌, ಹುಸೈನ್‌, ಸಹಿದ್‌ ಮತ್ತು ಇನ್ನಿಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬಸ್‌ ಢಿಕ್ಕಿ : ಯುವಕನಿಗೆ ಗಾಯ
ಕಾಸರಗೋಡು: ನಗರದ ಹಳೆ ಬಸ್‌ ನಿಲ್ದಾಣ ಪರಿಸರದಲ್ಲಿ ಬಸ್‌ ಢಿಕ್ಕಿ ಹೊಡೆದು ಚೌಕಿಯ ಅಮೀನ್‌(20) ಅವರು ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಕಾಡಾನೆ ದಾಳಿ : ವ್ಯಾಪಕ ಕೃಷಿ ನಾಶ
ಅಡೂರು: ಅಡೂರು ಪರಿಸರದಲ್ಲಿ ಕಾಡಾನೆಗಳು ಸೌರಬೇಲಿ ನಾಶಗೊಳಿಸಿ ನಾಡಿಗಿಳಿದು ವ್ಯಾಪಕ ಕೃಷಿ ನಾಶಗೊಳಿಸಿದೆ. ಬಯತ್ತಡ್ಕ ನಿವಾಸಿಗಳಾದ ಗೋಪಾಲಕೃಷ್ಣ ಭಟ್‌, ಸುಧಾಕರ ನಾಯ್ಕ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಕಂಗು, ಬಾಳೆ ಕೃಷಿಯನ್ನು ವ್ಯಾಪಕವಾಗಿ ನಾಶಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next