Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:32 PM Jun 13, 2019 | Sriram |

ಅನುಚಿತ ವರ್ತನೆ: ರಿಕ್ಷಾ
ಚಾಲಕನಿಗೆ 5 ವರ್ಷ ಶಿಕ್ಷೆ, ದಂಡ
ಕಾಸರಗೋಡು: ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮುಂದೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಹೊಸ ದುರ್ಗ ಬೇಳೂರು ಗ್ರಾಮದ ನಾೖಕಯಂ ಕುರುವಾಟ್‌ ಹೌಸ್‌ನ ರಿಕ್ಷಾ ಚಾಲಕ ಸುಧೀಶ್‌ ಸಿ.(23)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ) ಶಿಕ್ಷೆ ವಿಧಿಸಿದೆ.

Advertisement

ಒಂದು ಸೆಕ್ಷನ್‌ನಲ್ಲಿ 3 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ಹಾಗೂ ಇನ್ನೊಂದು ಸೆಕ್ಷನ್‌ನಲ್ಲಿ 2 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ ಸಹಿತ ಒಟ್ಟು ಐದು ವರ್ಷ ಸಜೆ ಹಾಗೂ 15,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಯನ್ನು ಒಟ್ಟಿಗೆ 3 ವರ್ಷ ಅನುಭವಿಸಬಹು ದು. ದಂಡ ಪಾವತಿ ಸದಿದ್ದಲ್ಲಿ ತಲಾ 3 ತಿಂಗಳಂತೆ ಒಟ್ಟು 6 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಹೇಳಿದೆ.

2015ರ ನ. 30ರಂದು ಹೊಸದುರ್ಗ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದ ಕಲೋತ್ಸವದಲ್ಲಿ ಭಾಗವಹಿಸಲೆಂದು ಶಾಲೆ ಬಳಿಯಲ್ಲಿ ನಡೆದು ಹೋಗುತ್ತಿದ್ದ 17ರ ಹರೆಯದ ವಿದ್ಯಾರ್ಥಿನಿ ಮುಂದೆ ಅನುಚಿತವಾಗಿ ವರ್ತಿಸಿ ಅಶ್ಲೀಲ ಭಾಷೆಯಲ್ಲಿ ಮಾತನಾಡಿ, ಆಕೆಗೆ ಮಾನಸಿಕ ಕಿರು ಕುಳ ನೀಡಿ ಹಾಗೂ ಮಾನಹಾನಿ ಉಂಟು ಮಾಡಿದ್ದ ಆರೋ ಪ ದಲ್ಲಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಬಸ್‌ನಿಂದ ಮದ್ಯ ವಶ
ಉಪ್ಪಳ: ವಾಮಂಜೂರಿನ ಅಬಕಾರಿ ಚೆಕ್‌ಪೋಸ್ಟ್‌ ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಾರೀಸುದಾರರಿಲ್ಲದ 2 ಲೀಟರ್‌ 25 ಮಿ.ಲೀ. ಮದ್ಯವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬಸ್‌ ಹಿಂಬದಿಯ ಸೀಟಿನಡಿಯಲ್ಲಿ ಮದ್ಯ ಇರಿಸಲಾಗಿತ್ತು.

ಕಾರು ತಡೆದು ದರೋಡೆ:
ಆರೋಪಿಗಳ ಕಾರು ವಶಕ್ಕೆ
ಕಾಸರಗೋಡು: ಕಾರು ತಡೆದು ನಿಲ್ಲಿಸಿ ಹಲ್ಲೆ ಮಾಡಿ 18 ಸಾವಿರ ರೂ. ದರೋಡೆ ಮಾಡಿದ ಪ್ರಕರಣದ ಆರೋಪಿಗಳು ಪ್ರಯಾಣಿಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಜೂ.11 ರಂದು ರಾಷ್ಟ್ರೀಯ ಹೆದ್ದಾರಿ ಚೌಕಿಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಮಂಜೇಶ್ವರ ವರ್ಕಾಡಿ ಕೋಳಿಚ್ಚಾಲ್‌ ವಳಪ್‌ನ ಅಬ್ದುಲ್‌ ಲತೀಫ್‌ ಸಹಿತ ನಾಲ್ವರಿಂದ 18 ಸಾವಿರ ರೂ. ದರೋಡೆ ಮಾಡಿದ್ದರು. ಅಬ್ದುಲ್‌ ಲತೀಫ್‌ ಅವರಿಗೆ ಹಲ್ಲೆ ಮಾಡಿ ಅವರ 5000 ರೂ. ಮೌಲ್ಯದ ಕನ್ನಡಕವನ್ನು ಪುಡಿಗೈದು ಚಾಕು ತೋರಿಸಿ ಹಣ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿ ಕಾರನ್ನು ವಶಪಡಿಸಿಕೊಳ್ಳ‌ಲಾಗಿದೆ. ಆರೋಪಿಗಳು ಮೇಲ್ಪರಂಬ ನಿವಾಸಿಗಳಾಗಿದ್ದಾರೆಂಬ ಸೂಚನೆ ಲಭಿಸಿದೆ.

ಕಾರು ಅಪಘಾತ: ಮೂವರಿಗೆ ಗಾಯ
ಮಧೂರು: ಇಲ್ಲಿನ ಕೊಲ್ಯ ನಿವಾಸಿಗಳು ಸಂಚರಿಸಿದ ಕಾರು ಕರ್ನಾಟಕದ ಕೊಪ್ಪಳ ಹೊಸಬೆಟ್ಟುನಲ್ಲಿ ಅಪಘಾತಕ್ಕೀಡಾಗಿ ಮೂವರು ಗಾಯಗೊಂಡಿದ್ದಾರೆ. ಕೊಲ್ಯ ನಿವಾಸಿಗಳಾದ ಅಭಿಷೇಕ್‌(34), ಧನು(26) ಹಾಗು ಹರೀಶ್‌(30) ಗಾಯಗೊಂಡಿದ್ದು, ಇವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.

ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ಮಗುಚಿ ಬಿದ್ದು ಅಪಘಾತ ಸಂಭವಿಸಿತು.

ಬೂತ್‌ ಏಜೆಂಟ್‌ಗೆ ಹಲ್ಲೆ
ಕಾಸರಗೋಡು: ಎಡರಂಗದ ಬೂತ್‌ ಏಜೆಂಟ್‌ ಆಗಿದ್ದ ಮಧೂರು ಕಲ್ಲಕಟ್ಟ ಪಯೋಟ್ಟಾ ಹೌಸ್‌ನ ಹಾಶಿಂ ಕೆ.ಕೆ.(36) ಅವರಿಗೆ ನಾಯಮ್ಮಾರಮೂಲೆಯಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿದೆ.

ಈ ಸಂಬಂಧ ಮುಸ್ಲಿಂ ಲೀಗ್‌ ಕಾರ್ಯಕರ್ತ ಕೋಪಾ ಅಬ್ದುಲ್ಲ ಯಾನೆ ಅಬ್ದುಲ್‌ ರಹಿಮಾನ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಹಲ್ಲೆ ಪ್ರಕರಣ : ಬಂಧನ
ಕಾಸರಗೋಡು: ಚೆಂಗಳ ಎರ್ಮಾಳದಲ್ಲಿ 2018 ನ.30 ರಂದು ಚೆಂಗಳ ತೈವಳಪ್ಪಿನ ಸೈನುದ್ದೀನ್‌(31) ಮತ್ತು ಅಬೂಬಕ್ಕರ್‌ ಸಿದ್ದಿಕ್‌ (23) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಚೆರ್ಕಳ ಬಾಲನಡ್ಕದ ಹ್ಯಾರಿಸ್‌ ಪಿ.ಎ. ಆನೆ ಮುಳ್ಳು ಹಾರಿಸ್‌(30)ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಬೈಕ್‌ ಢಿಕ್ಕಿ : ಕೇಸು ದಾಖಲು
ಉಪ್ಪಳ: ಮಣ್ಣಂಗುಳಿ ಜುಮಾ ಮಸೀದಿ ಪರಿಸರದಲ್ಲಿ ಬೈಕ್‌ ಢಿಕ್ಕಿ ಹೊಡೆದು ಮಣ್ಣಂಗುಳಿ ನಿವಾಸಿ ಯೂಸುಫ್‌(60) ಅವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಬೈಕ್‌ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಬಾಲಕಿಗೆ ಲೈಂಗಿಕ ಕಿರುಕುಳ:
ವಿಚಾರಣೆ ಆರಂಭ
ಕಾಸರಗೋಡು: 2018 ಸೆ.11 ರಂದು ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(ಪ್ರಥಮ)ದಲ್ಲಿ ಆರಂಭಗೊಂಡಿತು.

ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು. ಈ ಸಂಬಂಧ ರವೀಂದ್ರನ್‌ ವಿರುದ್ಧ ಪೊಲೀಸರು ಫೋಕೊÕà ಕಾನೂನು ಪ್ರಕಾರ ಕೇಸು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next