ಹೊಸದುರ್ಗ: ಕೊವ್ವಲ್‌ಪಳ್ಳಿಯಲ್ಲಿ ಜೂ.2 ರಂದು ರಾತ್ರಿ 8.30ಕ್ಕೆ ಲಾರಿ-ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ, ವೆಳ್ಳಿಕೋತ್ ಪಣಿಕ್ಕರ್ ವೀಟಿಲ್ ನಿವಾಸಿ ಪಿ. ಶಶಿ (50) ಸಾವಿಗೀಡಾದರು. ಮೃತರು ಅಜಾನೂರು ಇಕ್ಬಾಲ್ ಜಂಕ್ಷನ್‌ನಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು.
Advertisement
ಮನೆಯಿಂದ ಕಳವುಹೊಸದುರ್ಗ: ಅಂಬಲತ್ತರ ಮೂರನೇ ಮೈಲಿನಲ್ಲಿ ವಿನೋದ್ ಕುಮಾರ್ ಅವರ ಮನೆಯಿಂದ 25 ಸಾವಿರ ರೂ. ಕಳವು ಮಾಡಲಾಗಿದೆ ಎಂದು ಅಂಬತ್ತರ ಪೊಲೀಸರಿಗೆ ದೂರು ನೀಡಲಾಗಿದೆ. ಮನೆಯವರು ಕಾಂಞಂಗಾಡ್ ಪೇಟೆಗೆ ಹೋಗಿದ್ದಾಗ ಮನೆಯಿಂದ ಕಳವಾಗಿದೆ. ಈ ಬಗ್ಗೆ ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ನಗರದ ವಿವಿಧ ಪ್ರದೇಶಗಳಿಂದ ಮುಂಜಾಗ್ರತಾ ಕ್ರಮವಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಬಿಗ್‌ಬಜಾರ್ ಪರಿಸರದಿಂದ ಪೆರುಂಬಳದ ಸಂತೋಷ್ ಕುಮಾರ್ (42), ಭಗವತಿನಗರದಿಂದ ಮೊಗ್ರಾಲ್‌ಪುತ್ತೂರಿನ ಶೋಭಿತ್(28) ಮತ್ತು ಅಜಯ್ (30)ನನ್ನು ಬಂಧಿಸಿದ್ದಾರೆ. ನಕಲಿ ದಾಖಲೆಪತ್ರ ತಯಾರಿಸಿ ಸ್ಥಳ
ಮಾರಾಟ : ಆರು ಮಂದಿ ವಿರುದ್ಧ ಕೇಸು ದಾಖಲು
ಮುಳ್ಳೇರಿಯ: ಸ್ಥಳದ ಮಾಲಕನಿಗೆ ತಿಳಿಯದೆ ನಕಲಿ ದಾಖಲೆಪತ್ರಗಳನ್ನು ತಯಾರಿಸಿ ಸ್ಥಳವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದೂರು ಪೊಲೀಸರು ಆರು ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.
Related Articles
Advertisement
ಗಾಂಜಾ ಸಹಿತ ಬಂಧನಮುಳ್ಳೇರಿಯ: ಐವತ್ತು ಗ್ರಾಂ ಗಾಂಜಾ ಸಹಿತ ಮುಳ್ಳೇರಿಯ ಬಳಿಯ ಪಾರ್ಥಕೊಚ್ಚಿ ನಿವಾಸಿ ಸಚಿನ್(24)ನನ್ನು ಮುಳ್ಳೇರಿಯ ಅಬಕಾರಿ ದಳ ಬಂಧಿಸಿದೆ. ಮುಳ್ಳೇರಿಯದಲ್ಲಿ ಬೈಕ್‌ನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಗಾಂಜಾ ಪತ್ತೆಯಾಗಿತ್ತು. ಹಣ ಕಸಿದು ಪರಾರಿ
ಹೊಸದುರ್ಗ: ಕಾಂಞಂಗಾಡ್ ಆರಂಗಾಡಿ ತೋಯಮ್ಮಲ್‌ನ ಮೊಹಮ್ಮದ್ ಕುಂಞಿ ಮುಸ್ಲಿಯಾರ್(75) ಅವರನ್ನು ಬೈಕ್‌ನಲ್ಲಿ ಕರೆದೊಯ್ದು 18 ಸಾವಿರ ರೂ. ಕಸಿದು ಪರಾರಿಯಾದ ಘಟನೆ ನಡೆದಿದೆ. ಈ ಬಗ್ಗೆ ಹೊಸದುರ್ಗ ಪೊಲೀಸರಿಗೆ ದೂರು ನೀಡಲಾಗಿದೆ. ಯುವಕನ ಕೊಲೆ : ವಿಚಾರಣೆ ಆರಂಭ
ಕಾಸರಗೋಡು: ಅಡೂರು ಗ್ರಾಮದ ಜಾಮಕೊಚ್ಚಿ ಮಲ್ಲಂಪಾರದ ಶಿವಪ್ಪ ಎಂ(25) ಅವರನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ತೃತೀಯ)ದಲ್ಲಿ ಆರಂಭಗೊಂಡಿತು.ಅಡೂರು ಚಾಮಕೊಚ್ಚಿ ಮಲ್ಲಂಪಾರದ ನಿವಾಸಿಗಳಾದ ಸೋಮಶೇಖರ (26), ಜನಾರ್ದನ ಎಂ. (28), ವೆಂಕಪ್ಪ ಯಾನೆ ಅಪ್ಪಿ(32), ಸೀತಾರಾಮ ಎಂ. (32) ಮತ್ತು ಸುಬ್ರಾಯ ಎಂ. (38) ಪ್ರಕರಣದ ಆರೋಪಿಗಳಾಗಿದ್ದಾರೆ. 2013ರ ಫೆ.23 ರಂದು ಕುತ್ತಿಗೆಗೆ ಬೈರಾಸಿನಿಂದ ಬಿಗಿದು ಉಸಿರುಗಟ್ಟಿಸಿ ಪ್ರಜ್ಞಾಹೀನಗೊಳಿಸಿ ಪಕ್ಕದ ಕೆರೆಗೆ ಒಯ್ದು ನೀರಿನಲ್ಲಿ ಮುಳಗಿಸಿ ಕೊಲೆ ಮಾಡಿದ್ದಾಗಿ ಎಂ. ಹರೀಶ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.