Advertisement

ಕಾರನ್ನು ಅಡ್ಡಗಟ್ಟಿ 1.30 ಕೋಟಿ ರೂ. ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

08:01 PM Sep 13, 2022 | Team Udayavani |

ಕಾಸರಗೋಡು: ಮೊಗ್ರಾಲ್‌ ಪುತ್ತೂರು ರಾ. ಹೆದ್ದಾರಿಯಲ್ಲಿ ಕಾರು ತಡೆದು ನಿಲ್ಲಿಸಿ ಚಿನ್ನದ ವ್ಯಾಪಾರಿಯ 1.30 ಕೋಟಿ ರೂ. ದರೋಡೆಗೈದ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿ ಕೂತುಪರಂಬ ತಾನೂರು ಮಾಲೋರ್‌ ನಿವಾಸಿ ಶಿನಿಲ್‌(42)ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ತಲಶ್ಶೇರಿಯಲ್ಲಿ ವಾಸಿಸುತ್ತಿರುವ ಮೂಲತಃ ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ರಾಹುಲ್‌ ಮಹಾದೇವ್‌ ಅವರ ಕಾರನ್ನು 2021 ಸೆ. 22ರಂದು ಅಪರಾಹ್ನ ಕಾರಿನಲ್ಲಿ ಬಂದ ದರೋಡೆ ತಂಡವೊಂದು ತಡೆದು ನಿಲ್ಲಿಸಿ 1.30 ಕೋಟಿ ರೂ. ದರೋಡೆಗೈದಿತ್ತು. ಈ ಬಗ್ಗೆ ರಾಹುಲ್‌ ನೀಡಿದ ದೂರಿನಂತೆ 11 ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ 10 ಮಂದಿಯನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಶಿನಿಲ್‌ ತಲೆಮರೆಸಿ ಕೊಂಡಿದ್ದ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು 7 ವಾಹನಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ 30 ಲಕ್ಷ ರೂ. ನಗದು ಮತ್ತು 72 ಗ್ರಾಂ ಚಿನ್ನವನ್ನೂ ವಶಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next