ಹೋಗಿದ್ದ ಯುವಕ ನಾಪತ್ತೆ
ಕಾಸರಗೋಡು: ಒಂದೂವರೆ ವರ್ಷ ಹಿಂದೆ ಕೆಲಸಕ್ಕಾಗಿ ಮುಂಬಯಿಗೆ ಹೋಗಿದ್ದ ಕೋಟೆಕಣಿ ನಿವಾಸಿ ದಾಮೋದರ ಅವರ ಪುತ್ರ ದೀಪಕ್(25) ನಾಪತ್ತೆಯಾಗಿದ್ದಾನೆಂದು ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.
Advertisement
2018 ಫೆಬ್ರವರಿ 5 ರಂದು ದೀಪಕ್ ಮುಂಬಯಿಯ ಜೆಟ್ ಏರ್‌ವೆàಸ್‌ನಲ್ಲಿ ಕೆಲಸ ದೊರಕಿರುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದನು. ಆರು ತಿಂಗಳು ತರಬೇತಿ ಇರುವುದಾಗಿಯೂ ಫೋನ್ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಾರೆನೆಂದು ತಿಳಿಸಿದ ಹಿನ್ನೆಲೆಯಲ್ಲಿ ಮನೆಯವರು ಸಂಪರ್ಕಿಸಿರಲಿಲ್ಲ. ಅನಂತರ ಸಂಪರ್ಕಿಸಲು ಪ್ರಯತ್ನಿಸಿದಾಗ ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದೂ, ಪುತ್ರನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ತಂದೆ ದಾಮೋದರನ್ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉಪ್ಪಳ: ಬೈಕ್ ತಡೆದು ಸವಾರ ಬಾಯಾರು ಸೊಸೈಟಿ ಬಳಿ ನಿವಾಸಿ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಂಜುನಾಥ ಭಟ್ ಯು.ಎಸ್. (33) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೈಕಂಬದ ಆಟೋ ಚಾಲಕ ದೀಪು (35) ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಆ.2 ರಂದು ರಾತ್ರಿ 8 ಗಂಟೆಗೆ ಸೋಂಕಾಲು ಪರಿಸರದಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಗಾಯಾಳು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 25 ಸಾವಿರ ರೂ. ಅಪಹರಣ : ಕೇಸು ದಾಖಲು
ಬದಿಯಡ್ಕ: ಬ್ಲಾ ಕ್ ಮೈಲ್‌ಗೊಳಿಸಿ 25 ಸಾವಿರ ರೂಪಾಯಿ ಅಪಹರಿಸಿ, ಅನಂತರ ಇನ್ನಷ್ಟು ಹಣಕ್ಕೆ ಬೇಡಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಗ್ರಾಮಾಧಿಕಾರಿ ನೀಡಿದ ದೂರಿನಂತೆ ಯುವಕನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
Related Articles
Advertisement
ಘಟನೆಯ ಕುರಿತು ಪೊಲೀಸರು ನೀಡಿದ ಮಾಹಿತಿ : ಸ್ವಂತವಾಗಿ ಸ್ಥಳವಿಲ್ಲದ ಸತೀಶನ್ ಬೇಳ ವಿಲೇಜ್ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಸ್ಥಳವಿಲ್ಲದವರಿಗೆ ಮನೆ ನಿರ್ಮಿಸಲು ಸರಕಾರ ಸ್ಥಳ ನೀಡುವ ಯೋಜನೆ ಪ್ರಕಾರ ಅರ್ಜಿ ಸಲ್ಲಿಸಲಾಗಿತ್ತು. ಸತೀಶನ್‌ನ ಬೆನ್ನಲ್ಲೇ ಅರ್ಜಿ ಸಲ್ಲಿಸಿದವರಿಗೆ ಸ್ಥಳ ಲಭಿಸಿದರೂ ಸತೀಶನ್‌ನ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಈ ಬಗ್ಗೆ ಗ್ರಾಮ ಕಚೇರಿಗೆ ನೇರವಾಗಿ ಬಂದು ವಿಚಾರಿಸಿದರೂ ಸೂಕ್ತ ಪ್ರತಿಕ್ರಿಯೆ ಲಭಿಸಿಲ್ಲ.
ತನಗೆ ಸ್ಥಳ ಲಭಿಸದ ಬಗ್ಗೆ ಸತೀಶನ್ ಸಂಬಂಧಿಯಾದ ಮಹಿಳೆಯಲ್ಲಿ ತಿಳಿಸಿದ್ದನು. ಪ್ರಸ್ತುತ ಮಹಿಳೆ ವಿಲೇಜ್ ಆಫೀಸರ್‌ಗೆ ಫೋನ್ ಕರೆ ಮಾಡಿ ಸ್ಥಳ ನೀಡದುದರ ಕಾರಣ ಕೇಳಿದ್ದಾರೆ. ಈ ವೇಳೆ ಸತೀಶನ್ ಬಗ್ಗೆ ಕೆಟ್ಟ ರೀತಿಯಲ್ಲಿ ವಿಲೇಜ್ ಆಫೀಸರ್ ಪ್ರತಿಕ್ರಿಯಿಸಿದ್ದಾರೆ. ಫೋನ್ ಕರೆ ಮಾಡಿದ ಮಹಿಳೆ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಅದನ್ನು ಸತೀಶನ್‌ಗೆ ತಿಳಿಸಿದ್ದಾರೆ. ಅನಂತರ ವಿಲೇಜ್ ಆಫೀಸ್‌ಗೆ ಬಂದು ಸತೀಶನ್ ತನ್ನ ಕುರಿತು ಕೆಟ್ಟ ರೀತಿಯಲ್ಲಿ ಮಾತನಾಡಿರುವುದನ್ನು ರೆಕಾರ್ಡ್ ಮಾಡಲಾಗಿದೆಯೆಂದೂ, ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದು ಬಿಡುವುದು ಬೇಡವೆಂದಾದರೆ ಒಂದು ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದಾನೆ.
ಇದರಂತೆ 25 ಸಾವಿರ ರೂ. ಆ.1 ರಂದು ಹಸ್ತಾಂತರಿಸಲಾಯಿತು. ಎರಡರಂದು ಮತ್ತೆ ವಿಲೇಜ್ ಆಫೀಸ್‌ಗೆ ಬಂದು ಸತೀಶನ್ ಬಾಕಿ ಮೊತ್ತ ಕೇಳಿದ್ದಾನೆ. ಆದರೆ ಹಣ ನೀಡದುದರಿಂದ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ್ದಾನೆ. ಈ ದೂರಿನಂತೆ ಕೇಸು ದಾಖಲಿಸಿರುವುದಾಗಿಯೂ, ಇದರ ಸತ್ಯಾಂಶವನ್ನು ಸಮಗ್ರ ತನಿಖೆ ನಡೆಸುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಮಿನಿಟ್ಸ್ ಹರಿದು ನಾಶಜಾಮೀನು ರಹಿತ ಕೇಸು
ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್ ಕೊಡಿಯಮ್ಮೆ ವಾರ್ಡ್ ಗ್ರಾಮ ಸಭೆಯಲ್ಲಿ ಕ್ಷುಪಿತರಾದ ಸ್ಥಳೀಯರು ಸಭೆಯ ಮಿನಿಟ್ಸ್ ಹರಿದು ನಾಶಗೊಳಿಸಿದ ಘಟನೆಗೆ ಸಂಬಂಧಿಸಿ 9 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅವರು ನೀಡಿದ ದೂರಿನಂತೆ ಪಳ್ಳತ್ತಮಾರ್‌ನ ಜಲೀಲ್, ಚತ್ರಂಪಳ್ಳದ ಜಾಫರ್, ಕೊಡಿಯಮ್ಮೆಯ ಅನ್ಸಾರ್, ಊಜಾರಿನ ಫೈಜಲ್ ಸಹಿತ ಕಂಡರೆ ಪತ್ತೆ ಹಚ್ಚಬಹುದಾದ 9 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ವಾಹನಗಳಿಗೆ, ಸಾರ್ವಜನಿಕರಿಗೆ
ಸಂಚಾರಕ್ಕೆ ತಡೆ : 7 ಮಂದಿಗೆ ದಂಡ
ಕಾಸರಗೋಡು: 2018ರ ಸೆ. 29ರಂದು ಚೆಂಬರಿಕ ಖಾಝಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದಾಗ ರಸ್ತೆಯಲ್ಲಿ ವಾಹನಗಳ ಮತ್ತು ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆ ಮಾಡಿದ ಆರೋಪದಂತೆ 7 ಮಂದಿಯ ವಿರುದ್ಧ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ(1) ತಲಾ 5,000 ರೂ. ನಂತೆ ದಂಡ ವಿಧಿಸಿ ತೀರ್ಪು ನೀಡಿದೆ. ಗಾಂಜಾ ಪ್ರಕರಣ :
ಇಬ್ಬರಿಗೆ 10 ಸಾವಿರ ರೂ. ದಂಡ
ಕಾಸರಗೋಡು: ಹೊಸಂಗಡಿ ಆನೆಕಲ್ಲು ರಸ್ತೆ ಬಳಿಯಿಂದ 2018 ಸೆ.12 ರಂದು ಕುಂಬಳೆ ರೇಂಜ್‌ನ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 36 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಮೂಡಂಬೈಲ್ ಕಳವಯಲಿನ ಬಿಸ್ಮಿಲ್ಲಾ ಮಂಜಿಲ್‌ನ ಮೊಹಮ್ಮದ್ ಮುಸ್ತಫಾ (21)ನಿಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(ಪ್ರಥಮ) ಹತ್ತು ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಅದೇ ರೀತಿ 2019 ಫೆ.20 ರಂದು ಕುಂಬಳೆ ಪೇಟೆಯಲ್ಲಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ವೆಳ್ಳರಿಕುಂಡ್ ಪರಪ್ಪ ಕನಕಪಳ್ಳಿಯ ಅಬ್ಟಾಸ್ ಎಂ(45)ಗೆ ಇದೇ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.