Advertisement

ಕಾಸರಗೋಡು: ಕಡಪ್ಪುರದಲ್ಲಿ ಯುವಕರ ಮಧ್ಯೆ ಘರ್ಷಣೆ : ಲಾಠಿ ಪ್ರಹಾರ

09:42 PM Aug 30, 2023 | Team Udayavani |

ಕಾಸರಗೋಡು: ಕಾಸರಗೋಡು ಸಮುದ್ರ ಕಿನಾರೆಯಲ್ಲಿ ಯುವಕರ ಮಧ್ಯೆ ಪರಸ್ಪರ ಗುಂಪು ಘರ್ಷಣೆ ನಡೆದಿದ್ದು, ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲೈಟ್‌ ಹೌಸ್‌ ಪರಿಸರದಲ್ಲಿ ಕೆಲವರು ಹಾಡು ಹಾಕಿ ನೃತ್ಯ ಮಾಡುತ್ತಿದ್ದರು.

Advertisement

ಇದೇ ಸಂದರ್ಭದಲ್ಲಿ ಯುವಕನೋರ್ವ ತನ್ನ ಮೊಬೈಲ್‌ನಲ್ಲಿ ಯುವತಿಯೋರ್ವಳ ಫೋಟೋ ಕ್ಲಿಕ್ಕಿಸಿದ್ದನು. ಅದನ್ನು ಕಂಡು ಕೆಲವರು ಯುವಕನನ್ನು ಪ್ರಶ್ನಿಸಿದಾಗ ಘರ್ಷಣೆಗೆ ಕಾರಣವಾಯಿತು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾಠಿ ಪ್ರಹಾರಗೈದು ಯುವಕರನ್ನು ಚದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next