Advertisement

Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್‌ ಮೂಲಕ ನಕ್ಸಲ್‌ ಸೋಮನ್‌ ವಿಚಾರಣೆ

07:21 PM Nov 27, 2024 | Team Udayavani |

ಕಾಸರಗೋಡು: ಕಾಂಞಂಗಾಡ್‌ ನಗರಸಭಾ ಅಧ್ಯಕ್ಷರಾಗಿದ್ದ ಎನ್‌.ಎ. ಖಾಲೀದ್‌ ಅವರನ್ನು 2007ರಲ್ಲಿ ಕಾಂಞಂಗಾಡ್‌ ನಗರಸಭೆ ಕಚೇರಿಯಲ್ಲಿ ಕೊಲೆಗೈಯಲು ಯತ್ನಿಸಿದ ಪ್ರಕರಣದ ಆರೋಪಿ ಮಾವೋವಾದಿ ಕಬಿನಿ ದಳಂ ಕಮಾಂಡರ್‌, ವಯನಾಡು ಕಲ್ಪಟ್ಟ ನಿವಾಸಿ ಸೋಮನ್‌ ವಿಚಾರಣೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಲಿದೆ.

Advertisement

ಎನ್‌.ಎ. ಖಾಲೀದ್‌ ಅವರನ್ನು ಹತ್ಯೆಗೈಯಲು ಯತ್ನಿಸಿದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ದ್ವಿತೀಯ) ದಲ್ಲಿ ನ. 26ರಂದು ಆರಂಭಗೊಂಡಿತು. ಬಿಗು ಪೊಲೀಸ್‌ ಬಂದೋಬಸ್ತಿನಲ್ಲಿ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಈ ಸಂದರ್ಭ ನ್ಯಾಯಾಲಯದ ಮುಂದೆ ಪಶ್ಚಿಮ ಘಟ್ಟ ಸಂರಕ್ಷಿಸಿರಿ, ಕಾರ್ಪೊರೇಟ್‌ ಶಕ್ತಿಗಳಿಗೆ ಕಡಿವಾಣ ಹಾಕಿರಿ, ಸಾಮ್ರಾಜ್ಯಶಾಹಿ ಶಕ್ತಿಗಳೇ ತೊಲಗಿರಿ, ಇಂಕ್ಯುಲಾಬ್‌ ಜಿಂದಾಬಾದ್‌ ಮೊದಲಾದ ಘೋಷಣೆ ಮೊಳಗಿಸಿದ್ದ. ಕೂಡಲೇ ಸಕ್ರಿಯರಾದ ಪೊಲೀಸರು ಘೋಷಣೆ ಕೂಗದಂತೆ ತಡೆದರು.

ಕೆಲವು ದಿನಗಳ ಹಿಂದೆಯಷ್ಟೇ ಉಡುಪಿ ಸಮೀಪ ಕರ್ನಾಟಕ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಮಾವೋವಾದಿ ನಾಯಕ ವಿಕ್ರಂ ಗೌಡನ ಜತೆ ಅರಣ್ಯ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಸೋಮನ್‌ನನ್ನು ಕಳೆದ ಜುಲೈ 28ರಂದು ಕೇರಳ ನಕ್ಸಲ್‌ ನಿಗ್ರಹ ಪಡೆ ಶೋರ್ನೂರು ಬಳಿಯಿಂದ ಬಂಧಿಸಿತ್ತು. ಅನಂತರ ನ್ಯಾಯಾಂಗ ಬಂಧನದಲ್ಲಿದ್ದಾನೆ. ದಿನಗಳ ಹಿಂದೆ ಕಾಸರಗೋಡು ನ್ಯಾಯಾಲಯಕ್ಕೆ ಕರೆತಂದು ಮಾಜಿ ನಗರಸಭಾ ಅಧ್ಯಕ್ಷರನ್ನು ಕೊಲೆಗೈಯಲೆತ್ನಿಸಿದ ಪ್ರಕರಣದ ಚಾರ್ಜ್‌ ಶೀಟನ್ನು ನ್ಯಾಯಾಲಯದಲ್ಲಿ ಆತನಿಗೆ ಓದಿ ತಿಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next