Advertisement
ಕಾಸರಗೋಡು: ನೇಣು ಬಿಗಿದು ಆತ್ಮಹತ್ಯೆಕಾಸರಗೋಡು: ಉದುಮ ಬಸ್ ನಿಲ್ದಾಣದಲ್ಲಿ ನಾಲಾಂವಾದುಕಲ್ ತಟ್ಟುಮ್ಮಲ್ ನಿವಾಸಿ ನಾರಾಯಣನ್(62) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಈ ಹಿಂದೆ ಅವರು ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಕುಂಬಳೆ: ಸಂಚರಿಸುತ್ತಿದ್ದ ಬೈಕ್ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ನಾಯ್ಕಪುವಿನ ರವಿ ಅವರ ಬೈಕ್ ಬೆಂಕಿಗಾಹುತಿಯಾಗಿದೆ. ಫೆ. 13ರಂದು ರಾತ್ರಿ 11 ಗಂಟೆಗೆ ರವಿ ಹಾಗೂ ಪುತ್ರ ಕುಂಬಳೆಯಿಂದ ಮನೆಗೆ ಮರಳುತ್ತಿದ್ದಾಗ ಭಾಸ್ಕರ ನಗರಕ್ಕೆ ತಲುಪಿದಾಗ ಆಫ್ ಆಗಿದೆ. ಸ್ಟಾರ್ಟ್ ಮಾಡಲೆತ್ನಿಸಿದಾಗ ಬೆಂಕಿ ಹತ್ತಿಕೊಂಡಿತು. ಕೂಡಲೇ ಬೈಕ್‌ನಿಂದ ಇವರು ಇಳಿದುದರಿಂದ ಸಂಭವನೀಯ ಅಪಾಯ ತಪ್ಪಿತು.