Advertisement

Kasaragod: 300 ಪವನ್‌ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ

07:20 PM Nov 27, 2024 | Team Udayavani |

ಕಾಸರಗೋಡು: ಕಣ್ಣೂರು ವಳಪಟ್ಟಣದ ಮನ್ನ ನಿವಾಸಿ ವ್ಯಾಪಾರಿಯಾಗಿರುವ ಅಶ್ರಫ್‌ ಅವರ ಮನೆಯಿಂದ 300 ಪವನ್‌ ಚಿನ್ನಾಭರಣ ಹಾಗೂ 1 ಕೋಟಿ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ವಿಸ್ತರಿಲಾಗಿದೆ. ಆರೋಪಿಗಳು ಕರ್ನಾಟಕ ಅಥವಾ ತಮಿಳುನಾಡಿಗೆ ಪರಾರಿಯಾಗಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ.

Advertisement

ಇದೇ ವೇಳೆ ಕಳವು ನಡೆದ ಮರುದಿನವೂ ಮನೆಗೆ ಕಳ್ಳ ನುಗ್ಗಿ ವಿವಿಧೆಡೆ ಜಾಲಾಡಿರುವುದು ಸಿಸಿ ಟಿವಿ ದೃಶ್ಯಗಳಿಂದ ಕಂಡು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳವು ಮಾಡಲಾಗಿತ್ತು. ಮನೆಯವರ ಬಗ್ಗೆ ಸಂಪೂರ್ಣ ಅರಿವುಳ್ಳ ವ್ಯಕ್ತಿಗಳೇ ಕಳವು ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ 16 ಬೆರಳ ಗುರುತುಗಳು ಪತ್ತೆಯಾಗಿವೆ. ಕಳವಿಗೆ ಬಳಸಿದ ಒಂದು ಉಳಿ ಪತ್ತೆಯಾಗಿದ್ದು, ವಶಪಡಿಸಿಕೊಂಡಿದ್ದಾರೆ.

ಮನೆಯವರು ತಮಿಳುನಾಡಿನ ಮಧುರೈಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಇದೇ ವೇಳೆ ಮಾನವ ಹಕ್ಕು ಆಯೋಗ ಸ್ವತಃ ಕೇಸು ದಾಖಲಿಸಿಕೊಂಡಿದೆ. ಕಳವು ಪ್ರಕರಣ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಆಯೋಗ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next