Advertisement

ಗಡಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಿಸಲು ಕಸಾಪ ಒತ್ತಾಯ

04:28 PM May 05, 2022 | Team Udayavani |

ಭಾಲ್ಕಿ: ತಾಲೂಕಿನ ಗಡಿಭಾಗದ ಗ್ರಾಮಗಳ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಕ್ಷಣ ಕನ್ನಡ ಶಿಕ್ಷಕರ ನೇಮಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು ಒತ್ತಾಯಿಸಿದರು.

Advertisement

ಈ ಕುರಿತು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಸಾಪ ಪದಾಧಿಕಾರಿಗಳು, ತಾಲೂಕಿನಲ್ಲಿ ಕನ್ನಡ ಭಾಷೆ ಶೈಕ್ಷಣಿಕವಾಗಿ ಕುಂಠಿತವಾಗುತ್ತಲಿದೆ. ಕಾರಣ ಇಲ್ಲಿಯ ಗಡಿ ಬಾಗದ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ಇಂದು ನಮ್ಮೊಂದಿಗೆ ಕೊರೂರು ಗ್ರಾಮಸ್ಥರು ಕನ್ನಡ ಶಿಕ್ಷಕರ ಬೇಡಿಕೆ ಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿರುವುದೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ.

ಕನ್ನಡ ಶಾಲೆಗಳ ಬಲವರ್ಧನೆಗಾಗಿ, ತಾಲೂಕಿನ ಗಡಿ ಗ್ರಾಮಗಳಲ್ಲಿ ಕನ್ನಡ ಶಿಕ್ಷಕರನ್ನು ತಕ್ಷಣವೇ ನೇಮಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವ ಶಾಲೆಗಳಲ್ಲಿಯೂ ಕನ್ನಡ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಕನ್ನಡ ಶಿಕ್ಷಕರಿಲ್ಲದಿದ್ದರೆ ಅಲ್ಲಿ ಅತಿಥಿ ಶಿಕ್ಷಕರ ಸಹಾಯ ಪಡೆದು, ಅಲ್ಲಿಯ ಮಕ್ಕಳಿಗೆ ಸರಿಯಾಗಿ ಕನ್ನಡ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.

ಕಸಾಪ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ಕಾರ್ಯದರ್ಶಿಗಳಾದ ರಮೇಶ ಚಿರ್ದೆ, ಹಣಮಂತ ಕಾರಾಮುಂಗೆ, ಕೋಶಾಧ್ಯಕ್ಷ ರಾಜಕುಮಾರ ಸಾಲಿ, ಉಪಾಧ್ಯಕ್ಷ ಕಾಶಿನಾಥ ಲದ್ದೆ, ಭಗವಾನ ವಲಾಂಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಅಶೋಕ ಕುಂಬಾರ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರಾವ್‌ ಬಿರಾದಾರ, ದಯಾನಂದ ಕಣಜೆ, ಬಾಲಾಜಿ ಬೈರಾಗಿ, ಮಲ್ಲಿಕಾರ್ಜುನ ಪಾಟೀಲ, ಬಸಪ್ಪಾ ನೇಳಗೆ, ಸಂತೋಷ ಸ್ವಾಮಿ, ಸುಭಾಷ ಹುಲಸೂರೆ, ಬಾಲಾಜಿ ಬಿರಾದಾರ, ನಾಮದೇವ ಇಂಗಳೆ ಸೇರಿದಂತೆ ಕೋರುರ ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next