ಬಸವನಬಾಗೇವಾಡಿ: ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಇದು ನನ್ನ ಕೊನೆ ಚುನಾವಣೆ ಮುಂದೆ ಹೊಸಬರಿಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ರವಿವಾರ ಪಟ್ಟಣದ ವಿರಕ್ತ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಪ್ರಚಾರದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ನಾನು ಇದು ನನ್ನ ಕೊನೆ ಚುನಾವಣೆಯಂತ ಎಲ್ಲಿಯೂ ಹೇಳಿಲ್ಲ. ಆದರೆ ಇಂದು ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಇದು ನನ್ನ ಕೊನೆಯ ಚುನಾವಣೆ ಈ ಚುನಾವಣೆಯಲ್ಲಿ ಕಸಾಪ ಸದಸ್ಯರು, ಸಾಹಿತಿಗಳು ನನಗೆ ಆಶೀರ್ವಾದ ಮಾಡಬೇಕೆಂದು ಹೇಳಿದರು.
ನನ್ನ ಬಗ್ಗೆ ಈಗಾಗಲೇ ಕಸಾಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಇಬ್ಬರು ಅಭ್ಯರ್ಥಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಅದು ಸತ್ಯಕ್ಕೆ ದೂರವಾದ ಸಂಗತಿ. ನಾನು ಮೂರು ಬಾರಿ ಕಸಾಪ ಜಿಲ್ಲಾಧ್ಯಕ್ಷನಾದ ಬಳಿಕ ಅನೇಕ ಹೊಸ ಹೊಸ ಕಾರ್ಯಕಗಳನ್ನು ಮಾಡಿದ್ದೇನೆ. ಸ್ತ್ರೀ, ಪುರುಷ ಎಂಬ ಬೇಧವಿಲ್ಲದೆ ಅವಕಾಶ ವಂಚಿತ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಿದ್ದೇನೆ ಎಂದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಭೃಂಗಿಮಠ ಅವರನ್ನು ಬೆಳೆಸಿದ್ದೆ ನಾನು. 76ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಜಯಪುರಕ್ಕೆ ತರಲು ವೈಯಕ್ತಿಕವಾಗಿ ಶ್ರಮಿಸಿದಲ್ಲದೇ ಅದು ಇತಿಹಾಸ ನಿರ್ಮಿಸಿದ ಸಮ್ಮೇಳನ ಎಂದು ಹೇಳಿದರು.
ವಿರಕ್ತಮಠದ ಸಿದ್ದಲಿಂಗ ಶ್ರೀ, ಎಂ.ಜಿ. ಆದಿಗೊಂಡ, ಎ.ಎಲ್. ಗಂಗೂರ, ಎಸ್ .ಜಿ. ದೇಗಿನಾಳ ಸೇರಿದಂತೆ, ವಿವೇಕಾನಂದ ಕಲ್ಯಾಣಶೆಟ್ಟಿ, ಶಂಕರ ಬೈಚಬಾಳ, ಶರಣು ಸಬರದ, ರಾಜೇಂದ್ರ ಬಿರಾದಾರ, ಯುವರಾಜ ಮಾದನಶೆಟ್ಟಿ, ಬಸವರಾ ಕುಂಬಾರ, ರಾಜಶೇಕರ ಉಮರಾಣಿ, ಆರ್.ಜಿ. ಅಳ್ಳಗಿ, ಬಿ.ಸಿ. ಅವಟಿ, ವಿ.ಬಿ. ಮರ್ತೂರ ಇದ್ದರು.