Advertisement

ಕೆಎಎಸ್‌ ಹುದ್ದೆಗಳ ನೇಮಕಾತಿ ಮರೆತ ಸರ್ಕಾರ

03:45 AM Feb 13, 2017 | Team Udayavani |

ಬೆಂಗಳೂರು: ಒಂದೂವರೆ ವರ್ಷದಿಂದ ಕೆಎಎಸ್‌ ಹುದ್ದೆಗಳ ನೇಮಕಾತಿ ಮರೆತಿರುವ ರಾಜ್ಯ ಸರ್ಕಾರ, 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌) ಎ ಮತ್ತು ಬಿ ಗ್ರೂಪ್‌ ನ 401 ಖಾಲಿ ಹುದ್ದೆಗಳ ಪಟ್ಟಿ ಸಿದ್ಧವಿದ್ದರೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಲು ಮನಸ್ಸು ಮಾಡಿಲ್ಲ. ಇತ್ತ ಸರ್ಕಾರ ಖಾಲಿ ಹುದ್ದೆಗಳ ಪಟ್ಟಿ ಕಳಿಸುತ್ತಿಲ್ಲ.

Advertisement

ಅತ್ತ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸುತ್ತಿಲ್ಲ. ಹೀಗಾಗಿ 2015ನೇ ಸಾಲಿನ 401 ಗೆಜೆಟೆಡ್‌
ಪ್ರೊಬೇಷನರಿಯ (ಕೆಎಎಸ್‌) ಎ ಮತ್ತು ಬಿ ಗ್ರೂಪ್‌ ಹುದ್ದೆಗಳ ನೇಮಕಾತಿ ಒಂದೂವರೆ ವರ್ಷದಿಂದ ನನೆಗುದಿಗೆ
ಬಿದ್ದಿದೆ.

ಕೆಎಎಸ್‌ ಸೇರಿ ಇತರ ಖಾಲಿ ಹುದ್ದೆಗಳ ಭರ್ತಿಗೆ ಪ್ರತಿವರ್ಷ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ
ನಡೆಸಬೇಕೆಂದು 2009ರಲ್ಲಿ ಪತ್ರಾಂಕಿತ ಹುದ್ದೆಗಳ ನೇಮಕಾತಿ ಕಾಯ್ದೆಯ ನಿಯಮ 40ಕ್ಕೆ ತಿದ್ದುಪಡಿ ತರಲಾಗಿದೆ. ಅದೇ ರೀತಿ ಲೋಕಾಸೇವಾ ಆಯೋಗಕ್ಕೆ ಕಾಯಕಲ್ಪ ಸಲ್ಲಿಸಲು ರಚಿಸಲಾಗಿದ್ದ ಹೂಟಾ ಸಮಿತಿಯು ಇದೇ ಶಿಫಾರಸು ಮಾಡಿದೆ. 2013ರಲ್ಲಿ ಹೂಟಾ ಸಮಿತಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಆದಾಗ್ಯೂ 2015ನೇ ಸಾಲಿನ ಕೆಎಎಸ್‌ ಹುದ್ದೆಗಳ ನೇಮಕಾತಿಗೆ ಈವರೆಗೂ ಅಧಿಸೂಚನೆ ಹೊರಬಿದ್ದಿಲ್ಲ.

2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಆಯಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳನ್ನು ವೃಂದ ಮತ್ತು ಮೀಸಲಾತಿಯ ಜತೆಗೆ ಸಂಬಂಧಪಟ್ಟ ಇಲಾಖೆಗಳು 2015ರ ಜೂನ್‌-ಜುಲೈನಲ್ಲೇ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಲ್ಲಿಸಿವೆ.

2015ರ ಡಿಸೆಂಬರ್‌ ವೇಳೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಟ್ಟದಲ್ಲಿ 401 ಹುದ್ದೆಗಳ ಕ್ರೋಢೀಕೃತ
ಪಟ್ಟಿ ಅಂತಿಮಗೊಂಡಿದೆ. ಆದರೆ, ನೇಮಕಾತಿಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇ.30 ರಿಂದ 33ಕ್ಕೆ ಹೆಚ್ಚಿಸುವ
ಹಾಗೂ ವ್ಯಕ್ತಿತ್ವ ಪರೀಕ್ಷೆ ಅನುಪಾತವನ್ನು 1:3 ರಿಂದ 1:5ಗೆ ಹೆಚ್ಚಿಸುವ ವಿಚಾರದಲ್ಲಿ ಉಂಟಾಗಿರುವ ಗೊಂದಲದ
ನೆಪವನ್ನು ಮುಂದಿಟ್ಟುಕೊಂಡು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಲೋಕಸೇವಾ ಆಯೋಗಕ್ಕೆ ಪಟ್ಟಿ ಕಳಿಸುತ್ತಿಲ್ಲ ಎಂದು
ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next