Advertisement
ಕೆ.ಸಿ. ಕಾರ್ಯಪ್ಪ ಹಿಂದೆ ಕೆಕೆಆರ್ ತಂಡದಲ್ಲಿದ್ದರೂ ಈ ವರೆಗೆ ಐಪಿಎಲ್‌ನಲ್ಲಿ ಆಡಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ. ಇಲ್ಲಿ 10 ಪಂದ್ಯಗಳಿಂದ 8 ವಿಕೆಟ್ ಉರುಳಿಸಿದ್ದಾರೆ. ಕರ್ನಾಟಕಕ್ಕೆ ಮೊದಲ ಬಾರಿಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಕೊಡುವಲ್ಲಿ ಕಾರ್ಯಪ್ಪ ಪಾತ್ರವೂ ಮಹತ್ವದ್ದಾಗಿತ್ತು. ಕಾರ್ಯಪ್ಪ 20.60 ಸರಾಸರಿಯಲ್ಲಿ 10 ವಿಕೆಟ್ ಉರುಳಿಸಿದ್ದರು. ಕೆಪಿಎಲ್‌ನಲ್ಲಿ ಕಾರ್ಯಪ್ಪ ಬಿಜಾಪುರ ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.
ಕೇರಳದ ಸಂದೀಪ್ ವಾರಿಯರ್ ಕೂಡ ಮುಷ್ತಾಕ್ ಅಲಿ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ 8 ವಿಕೆಟ್ ಉರುಳಿಸಿದ್ದರು. ಆಂಧ್ರಪ್ರದೇಶ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ ಹೆಗ್ಗಳಿಕೆ ವಾರಿಯರ್ ಅವರದಾಗಿತ್ತು. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌ನಲ್ಲಿ ಕೇರಳ ಪರ ಸರ್ವಾಧಿಕ 12 ವಿಕೆಟ್ ಕಿತ್ತ 27ರ ಹರೆಯದ ವಾರಿಯರ್, ಐಪಿಎಲ್‌ನಲ್ಲಿ ಇದಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಕಮಲೇಶ್ ನಾಗರಕೋಟಿ ಕಳೆದ ಐಪಿಎಲ್ ಋತುವನ್ನು ಪಾದದ ನೋವಿನಿಂದಾಗಿ ಕಳೆದುಕೊಂಡಿದ್ದರು. ಈ ಬಾರಿ ಬೆನ್ನು ನೋವಿನ ಸಮಸ್ಯೆಗೆ ಸಿಲುಕಿದ್ದಾರೆ. ಭಾರತದ ಅಂಡರ್-19 ತಂಡದ ಪ್ರಮುಖ ಬೌಲರ್ ಶಿವಂ ಮಾವಿ ಕೂಡ ಬೆನ್ನು ನೋವಿಗೆ ಸಿಲಿಕಿದ್ದಾರೆ. ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಮಾ. 24ರಂದು ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ ಹೈದರಾಬಾದ್ ವಿರುದ್ಧ ಆಡಲಿದೆ.