ಕಾರವಾರ: ಇಲ್ಲಿನ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಯುದ್ದ ವಿಮಾನ ವಾಹಕ ನೌಕೆಯಾದ ಐಎನ್ ಎಸ್ ವಿಕ್ರಮಾದಿತ್ಯ ಹಾಗೂ ಐಎನ್ ಎಸ್ ವಿಕ್ರಾಂತ್ ನೌಕೆಯ ರನ್ ವೇ ಬಳಸಿ ಯುದ್ಧ ವಿಮಾನಗಳ ಹಾರಾಟ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು ನೆಲೆಯಾಗಿದ್ದು, ಕಾರವಾರ ಬಳಿಯ ನೌಕಾನೆಲೆ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಯುದ್ಧ ವಿಮಾನ ಹಾರಾಟ ಪರೀಕ್ಷೆ ಸದ್ದಿಲ್ಲದೆ ನಡೆಯಿತು. ಸಂಜೆ ಈ ಪ್ರದರ್ಶನವನ್ನು ನೌಕಾನೆಲೆ ಯುದ್ಧ ವಿಮಾನ ವಾಹಕ ಎರಡು ನೌಕೆಗಳಲ್ಲಿ ಏಕಕಾಲಕ್ಕೆ ನಡೆಸಲಾಯಿತು.
ಭಾರತೀಯ ನೌಕಾಪಡೆಯ ನೌಕೆ ವಿಕ್ರಮಾದಿತ್ಯ ಹಾಗೂ ನೌಕೆ ವಿಕ್ರಾಂತ್ ರನ್ ವೇ ನಿಂದ 35 ಕ್ಕೂ ಹೆಚ್ಚು ಯುದ್ಧ ವಿಮಾನಗಳು ಒಂದರ ಹಿಂದೆ ಒಂದರಂತೆ ಯಶಸ್ವಿಯಾಗಿ ಆಕಾಶಕ್ಕೆ ಹಾರಿದವು .ಹಾಗೂ ಮರಳಿ ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ನೌಕೆಗಳಿಗೆ ಮರು ಲ್ಯಾಂಡಿಂಗ್ ಆದವು. ಈ ಮೂಲಕ ತಡೆರಹಿತ ಯುದ್ದ ವಾಹಕದ ಪರೀಕ್ಷೆಯನ್ನು ನೌಕಾದಳ ಯಶಸ್ವಿಯಾಗಿ ಪರೀಕ್ಷೆ ಮಾಡಿತು.
ಇಂದು ಕಾರವಾರ ಅರಬ್ಬೀ ಸಮುದ್ರದಲ್ಲಿ ಯುದ್ದ ವಾಹಕ ಹಡಗಿನಲ್ಲಿ ಮಿಗ್ -29 ಕೆ ಫೈಟರ್ ಜೆಟ್‌ಗಳು, MH60R, ಕಮೋವ್ , ಸೀ ಕಿಂಗ್, ಚೇತಕ್ ಮತ್ತು ಎಚ್ ಎಎಲ್ ನಿರ್ಮಿತ ಹೆಲಿಕಾಪ್ಟರ್‌ಗಳು ಸೇರಿದಂತೆ, ವ್ಯಾಪಕ ಶ್ರೇಣಿಯ ಯುದ್ಧ ವಿಮಾನಗಳಿಗೆ ತೇಲುವ ಏರ್ ಫೀಲ್ಡ್ ಎಂದೇ ಹೆಸರಾದ ಐಎನ್ ಎಸ್ ವಿಕ್ರಮಾದಿತ್ಯ ಹಾಗೂ ಐಎನ್ ಎಸ್ ವಿಕ್ರಾಂತ್ ನೌಕೆಗಳು ಉಡಾವಣೆಗೆ ಏಕಾಕಾಲದಲ್ಲಿ ನೆಲೆಯಾದವು. ಈ ಮೂಲಕ ಎರಡು ಬೃಹತ್ ನೌಕೆಗಳ ಸಾಮರ್ಥ್ಯ ಸುತ್ತಲ ದೇಶಗಳಿಗೆ ಗೊತ್ತಾದಂತಾಗಿದೆ.
ಕದಂಬಾ ನೌಕಾನೆಲೆಯಲ್ಲಿ ನೆಲೆ ಪಡೆದಿರುವ ನೌಕೆ ವಿಕ್ರಮಾದಿತ್ಯ ಹಾಗೂ ನೌಕೆ ವಿಕ್ರಾಂತ್ ಮತ್ತೊಮ್ಮೆ ಯುದ್ಧ ಸನ್ನದ್ದತೆಗೆ ಸಿದ್ಧವಾಗಿವೆ . ಇಂದು ನಡೆದ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಗಾಗಿದೆ. ಈ ಮೂಲಕ ಸಮುದ್ರ ಭಾಗದ ಗಡಿಯನ್ನು ಕಾಯಲು ಹಾಗೂ ಶತ್ರು ರಾಷ್ಟ್ರದ ದಾಳಿಯನ್ನು ಎದುರಿಸಲು ಸಜ್ಜಾಗಿವೆ ಎಂಬ ಸಂದೇಶ ರವಾನಿಸಿವೆ. ಭಾರತದ ಪಶ್ಚಿಮ ಕರಾವಳಿಯ ಸುರಕ್ಷತೆಗೆ ವಿಮಾನವಾಹಕ ನೌಕೆಗಳು ಎದುರಿಸಲು ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲ ಎಂದು ಸಾಬೀತಾದಂತಾಗಿದೆ.