Advertisement
ವೈದ್ಯರು ಹಾಗೂ ನಿರ್ದೇಶಕರ ನಡುವಿನ ವೈಮನಸ್ಸು ಸಹ ಸಚಿವರ ಎದುರು ಬಹಿರಂಗವಾಯಿತು. ಪ್ರೊಫೆಸ್ಸರ್ ಹಾಗೂ ಕೆಲ ವೈದ್ಯರು ನಿರ್ದೇಶಕ ಮತ್ತು ಆಡಳಿತಾಧಿಕಾರಿ ನಿರ್ಲಕ್ಷ್ಯವನ್ನು ಸಚಿವರ ಎದುರು ತೋಡಿಕೊಂಡರು. ಜಿಲ್ಲಾಧಿಕಾರಿ ಗಂಗೂಬಾಯಿ ವೈದ್ಯರ ಆರೋಪಗಳನ್ನು ಪಟ್ಟಿ ಮಾಡಿಕೊಂಡರು. ಕಿರುಕುಳಕ್ಕೆ ತುತ್ತಾದ ವೈದ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಿರ್ದೇಶಕರು ಮೌನ ತಾಳಿದಾಗ , ನೀವು ಈ ಹುದ್ದೆಗೆ ಹೇಗೆ ಬಂದಿದ್ದೀರಿ, ಯಾಕೆ ಬಂದಿರಿ ಎಂದು ಗೊತ್ತು. ನಿಮಗೆ ಬೇಕಾದ ಹಾಗೆ ಬೈಲಾ ಮಾಡಿಕೊಂಡು ಅಂದಾಧುಂದಿ ನಡೆಸಿದ್ದೀರಿ.ಇದು ಬಹಳ ಕಾಲ ನಡೆಯುವುದಿಲ್ಲ. ದೇವರ ಕೊಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು. ವೈದ್ಯರು, ಜನರು ಹಾಗೂ ವಿದ್ಯಾರ್ಥಿಗಳಿಂದ ದೂರು ಬರಬಾರದು. ಎಸ್ ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡಿದರೆ ಜೈಲಿಗೆ ಹೋಗುತ್ತೀರಿ ಎಂದು ಸಚಿವ ವೈದ್ಯ ಎಚ್ಚರಿಸಿದರು.
ವೈದ್ಯರಿಗೆ ಕುಳಿತು ಕೊಳ್ಳಲು ಸರಿಯಾದ ಚೇರ್ ಸಹ ಇಲ್ಲ. ವಿಶ್ರಾಂತಿ ಕೊಠಡಿ ಇಲ್ಲ, ಕೆಲ ದಾಖಲೆ ಪ್ರಿಂಟ್ ತೆಗೆಯಲು ಪ್ರಿಂಟರ್ ಸಹ ಕೊಡಿಸಿಲ್ಲ ಎಂದು ಕೆಲ ಹಿರಿಯ ಪ್ರೊಫೆಸರ್ ಹೇಳಿದರೆ, ಕೆಲ ವೈದ್ಯರು ತಿಂಗಳ ಕೊನೆಗೆ ಬಂದು ಸಹಿ ಮಾಡಿ ,ವೇತನ ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಮೆಡಿಕಲ್ ಕಾಲೇಜಿನ ಆಸ್ಪತ್ರೆ ಅಗತ್ಯತೆಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದ ಸಚಿವ ವೈದ್ಯ, ಎಂಆರ್‌ಐ ಸ್ಕ್ಯಾನರ್‌ಗೆ ಈಗಾಗಲೇ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಕ್ರಿಮ್ಸ್ ಗೆ ಎಂ ಆರ್‌ಐ ಸ್ಕ್ಯಾನರ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ಇಲ್ಲಿನ ವೈದ್ಯರು ನೂತನ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಒಂದೇ ಒಂದೇ ಪ್ರಸ್ತಾವ ಕಳುಸಹಿಲ್ಲ. ಆಸ್ಪತ್ರೆಯ ಕುರಿತು ನಿರ್ಲಕ್ಷ್ಯ ಸಲ್ಲ ಎಂದು ನಿರ್ದೇಶಕ ಗಜಾನನ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ವೈದ್ಯ, ಕ್ರಿಮ್ಸ್ ಆಡಳಿತ ವ್ಯವಸ್ಥೆಯನ್ನ ಸರಿಪಡಿಸುವ ಕಾರ್ಯ ಆಗಲಿದೆ ಎಂದರು.ಜಿಲ್ಲಾಧಿಕಾರಿ ಗಂಗೂಬಾಯಿ, ಡಿಯುಡಿಸಿ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು.