Advertisement
ಸೋಮವಾರ ಮಧ್ಯಾಹ್ನದಿಂದ ಶಾಸಕ ಸತೀಶ್ ಸೈಲ್, ಎಂಎಲ್ ಸಿ ಗಣಪತಿ ಉಳ್ವೆಕರ್, ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್ ಪಿಕಳೆ, ಮಾಜಿ ಉಪಾಧ್ಯಕ್ಷ ಪಿ.ಪಿ.ನಾಯ್ಕ ಸತತ ಮೂರು ಗಂಟೆಗಳ ಕಾಲ ಈ ಬಗ್ಗೆ ಮಾತುಕತೆ ನಡೆಸಿದರು.
ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸುರಂಗಮಾರ್ಗ ಸಂಚಾರ ಮುಕ್ತಗೊಳಿಸುವಂತೆ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದರು. ಸಂಸದರ ಓಡಾಟಕ್ಕೆ ಮುಕ್ತವಾಗಿದ್ದ ಸುರಂಗ: ಕೇಂದ್ರ ಸಂಸದೀಯ ಸಮಿತಿ ನೌಕಾನೆಲೆಗೆ ಬಂದ ಕಾರಣ ಐಆರ್‌ಬಿ ಅಧಿಕಾರಿಗಳು ಟನಲ್ ನ್ನು ಓಪನ್ ಮಾಡಿಕೊಟ್ಟಿದ್ದರು. ಇದು ಮಾಧ್ಯಮದವರ ಗಮನಕ್ಕೆ ಬಂದಿತ್ತು. ಬಳಿಕ ಜಿಲ್ಲಾಧಿಕಾರಿ, ಶಾಸಕರು, ವಿಧಾನಪರಿಷತ್ ಸದಸ್ಯ ಉಳ್ವೆಕರ್ ಅವರಿಗೂ ಈ ಮಾಹಿತಿ ತಲುಪಿತು. ಆಗ ಜನಪ್ರತಿನಿಧಿಗಳಿಗೆ ಒಂದು ನೀತಿ, ಸಾರ್ವಜನಿಕರಿಗೆ ಒಂದು ನೀತಿಯೇ ಎಂಬ ಪ್ರಶ್ನೆ ಉದ್ಭವಿಸಿತು . ತಕ್ಷಣ ಶಾಸಕರು ಜಿಲ್ಲಾಧಿಕಾರಿ, ಮಾಧ್ಯಮಗಳ ಜೊತೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್ ಜೊತೆ ಮಾತುಕತೆ ನಡೆಸಿದರು. ಬಳಿಕ ಸುಂರಂಗದಲ್ಲಿ ಏನಾದರೂ
ಅನಾಹುತವಾದಲ್ಲಿ ಅದರ ಹೊಣೆಯನ್ನು ಎನ್‌ಎಚ್ ಎಐ ಮತ್ತು ಐಆರ್‌ಬಿ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಂದ ಪತ್ರ ಬರೆಯಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
Related Articles
Advertisement
ಅನಾಹುತದ ಹೊಣೆ ಹೊರಲು ಸೂಚನೆಅ.8 ರೊಳಗೆ ಟನಲ್ ಸುರಕ್ಷತೆ ಮತ್ತೂಮ್ಮೆ ಪರೀಕ್ಷಿಸಬೇಕು. ಏನಾದರೂ ಅನಾಹುತವಾದರೆ ಎನ್‌ಎಚ್ ಎಐ ಹೊನ್ನಾವರದಲ್ಲಿನ ಕಚೇರಿಯ ಪ್ರೊಜೆಕ್ಟ್ ಡೈರೆಕ್ಟರ್ ಅದರ ಹೊಣೆ ಹೊರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಆದೇಶವನ್ನು ಸಂಬಂಧಿಸಿದ ಗುತ್ತಿಗೆ ಕಂಪನಿ ಹಾಗೂ ಎನ್‌ಎಚ್‌ಎಐ ಹೊನ್ನಾವರ ಕಚೇರಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿರ್ದೇಶಕರಿಗೆ, ಜಿಲ್ಲೆಯ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕಮಿಷನರ್‌ಗಳಿಗೆ ಕಳುಹಿಸಲಾಗಿದೆ.