Advertisement
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇನ್ನಿಂಗ್ಸ್ ನ 38ನೇ ಓವರ್ ನ ವೇಳೆ ಕಮಿನ್ಸ್ ಎಸೆದ ಬೌನ್ಸರ್ ಅನ್ನು ತಪ್ಪಿಸುವ ಪ್ರಯತ್ನ ಮಾಡಿದರೂ ಚೆಂಡು ಕರುಣರತ್ನೆ ತಲೆಗೆ ಬಡಿದಾಗಿತ್ತು. ತಕ್ಷಣ ಕುಸಿದು ಬಿದ್ದ ಅವರನ್ನು ಕೂಡಲೇ ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 524 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದನ್ನು ಬೆನ್ನಟ್ಟಿದ ಶ್ರೀಲಂಕಾಗೆ ಆರಂಭಿಕರು ಉತ್ತಮ ಅಡಿಪಾಯ ಹಾಕಿದ್ದರು. 46 ರನ್ ಗಳಿಸಿದ್ದ ಕರುಣರತ್ನೆ ಬೌನ್ಸರ್ ಪೆಟ್ಟು ತಿಂದು ಆಸ್ಪತ್ರೆ ಪಾಲಾದರೆ, ಲಹಿರು ತಿರುಮನ್ನೆ 41 ರನ್ ಗಳಿಸಿ ಔಟಾದರು. ದಿನದ ಅಂತ್ಯಕ್ಕೆ ಲಂಕಾ ಮೂರು ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.