ಏನೇನು ಕೃಷಿ: ಅಡಿಕೆ, ಭತ್ತ, ಕಾಳುಮೆಣಸು, ತರಕಾರಿ ಬೆಳೆಗಳು, ಹೈನುಗಾರಿಕೆ,
ಎಷ್ಟು ವರ್ಷ ಕೃಷಿ: 30
ಪ್ರದೇಶ : 4 ಎಕರೆ
ಸಂಪರ್ಕ: 9902663120
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಕೃಷಿ ಚಟುವಟಿಕೆಗೆ ಮೂಲಾಧಾರವಾದ ಜಲಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸುತ್ತಮುತ್ತ ಆರು ಬಾವಿ ತೆರೆದರಾದರೂ ನಿರೀಕ್ಷೆಯಂತೆ ಅಂತರ್ಜಲ ಇಲ್ಲದಿರುವುದು ನಿರಾಶರನ್ನಾಗಿ ಮಾಡಿದರೂ ಧೃತಿ ಗೆಡದ ಕರುಣಾಕರ ಶೆಟ್ಟಿಯವರು ಏನಾದರೂ ಮಾಡಿ ಈ ನೆಲವನ್ನು ಹಸಿರಾಗಿಸಬೇಕು ಎನ್ನುವ ಛಲ ದೊಂದಿಗೆ ಇಂಗುಗುಂಡಿಗಳನ್ನು ತೋಡಿ ಅಂತರ್ಜಲ ಮಟ್ಟ ಹೆಚ್ಚುವಂತೆ ಮಾಡಿದರು. ಸ್ಥಳೀಯರ ಸಹಕಾರ ದೊಂದಿಗೆ ಕೆದೂರು ನಡುಬೆಟ್ಟಿನ ಪರಿಸರದಲ್ಲಿ ಗುಡ್ಡವನ್ನು ಕಡಿದು ಸಮತಟ್ಟುಗೈಯುವ ಕಾಯಕದಲ್ಲಿ ನಿರಂತರವಾಗಿ ತೊಡಗಿ ಯಶಸ್ಸು ಗಳಿಸಿದರು.
Related Articles
ಸುಮಾರು 1ಎಕರೆ ವಿಸ್ತೀರ್ಣದ ಸಮತಟ್ಟಾದ ಭೂ ಪ್ರದೇಶದಲ್ಲಿ ಎಂಒ4 ಭತ್ತದ ತಳಿಯ ಸಸಿಯನ್ನು ಯಾಂತ್ರಿಕ ಸಾಲು ನಾಟಿ ಮಾಡುವ ಮೂಲಕ ಸ್ಥಳೀಯ ರೈಸ್ ಮಿಲ್‌ಗಳಿಂದ ಹೊರಹಾಕುವ ಬೂದಿ ಹಾಗೂ ಗೊಬ್ಬರಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಬಳಕೆಯಾದ್ದರಿಂದ ಎಂಒ4 ಭತ್ತದ ತಳಿ ಸುಮಾರು 4.5 ಅಡಿ ಆಳೆತ್ತರದ ಸಸಿಯಲ್ಲಿ ಉತ್ತಮವಾದ ಭತ್ತದ ತೆನೆ ಮೈದಳೆದಿವೆ. ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ 1 ಎಕರೆ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಸರಿಸುಮಾರು 120 ಮುಡಿಗಳಿಗೂ ಅಧಿಕ ಭತ್ತದ ಫಸಲನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿ ಜಿಲ್ಲೆಗೆ ಮಾದರಿಯಾಗಿದ್ದಾರೆ.
Advertisement
ಪ್ರಶಸ್ತಿ – ಸಮ್ಮಾನಆದರ್ಶ ಕೃಷಿಕ ಕೆದೂರು ಕರುಣಾಕರ ಶೆಟ್ಟಿ ಅವರಿಗೆ 2016-17 ನೇ ಸಾಲಿನಲ್ಲಿ ಹೆಕ್ಟೇರಿಗೆ 88.87 ಕ್ವಿಂಟಾಲ್ ಇಳುವರಿ ಪಡೆದು ಜಿಲ್ಲಾ ಮಟ್ಟದ ಭತ್ತದ ಬೆಳೆಯಲ್ಲಿ ಪ್ರಥಮ ಸ್ಥಾನ ಹಾಗೂ 2017-18 ನೇ ಸಾಲಿನ ಉಡುಪಿ ಜಿಲ್ಲಾ ಸಮಗ್ರ ಕೃಷಿ ಪ್ರಶಸ್ತಿ ಸಂದಿದೆ. ಜತೆಗೆ ಅವರು ಹಾಲು ನೀಡುವ ಸೊಸೈಟಿಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಗಳಿಸುತ್ತಿದ್ದಾರೆ. ಯಂತ್ರೋಪಕರಣಗಳ ಬಳಕೆ
ಕೃಷಿ ಚಟುವಟಿಕೆಗೆ ಬೇಕಾಗುವ ಯಂತ್ರೋಪ ಕರಣಗಳಾದ ಟ್ರ್ಯಾಕ್ಟರ್, ಟಿಲ್ಲರ್, ಹುಲ್ಲು ಕತ್ತರಿಸುವ ಯಂತ್ರಗಳನ್ನು ಬಾಡಿಗೆಗೆ ತಾರದೆ ಸ್ವತಃ ಇವರೇ ಕೃಷಿ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಕೃಷಿ ಸಾಧನೆಯನ್ನು ಕಂಡು ವಿವಿಧ ಕೃಷಿ ಅಧಿಕಾರಿಗಳು ತೋಟಕ್ಕೆ ಆಗಮಿಸಿ ಅಧ್ಯಯನ ಕೂಡಾ ನಡೆಸಿದ್ದಾರೆ. ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ
ತಂದೆಯವರ ಮಾರ್ಗದರ್ಶನದಂತೆ 8ನೇ ವಯಸ್ಸಿಗೆ ಸಾಗುವಳಿ ಮಾಡುತ್ತಾ , ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಾ ಬಂದಿದ್ದೇನೆ. ಯಾಂತ್ರಿಕ ಕೃಷಿ ಪರಿಕರಗಳ ಬಳಕೆಯಿಂದಾಗಿ ಇಂತಹ ನಿರುಪ ಯುಕ್ತ ಭೂಮಿಯಲ್ಲಿ ಉತ್ತಮ ಭತ್ತದ ಫಸಲು ಕಂಡುಕೊಳ್ಳಲು ಸಹಕಾರಿಯಾಯಿತು. ಪತ್ನಿ ರಮಾ ಕೆ. ಶೆಟ್ಟಿ ಅವರ ಸಾಥ್ ಮರೆಯುವಂತಿಲ್ಲ, ಮುಂದಿನ ದಿನಗಳಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಿಂದ ಈಗಾಗಲೇ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಮತ್ತಷ್ಟು ಪಾರಂಪರಿಕ ತೆಂಗು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಬಯಕೆ ಇದೆ. ಇಲ್ಲಿ ಫಲವತ್ತಾದ ಭೂಮಿ ಇದ್ದರೂ ಕೂಡ ಕೃಷಿಕರ ಪಾಲಿಗೆ ವರವಾಗಬೇಕಾಗಿದ್ದ ವಾರಾಹಿ ಕಾಲುವೆ ನೀರು ಇದುವರೆಗೆ ಕೆದೂರು ಗ್ರಾಮಕ್ಕೆ ಹರಿದು ಬಾರದೆ ಇರುವುದು ಕೂಡ ಇಲ್ಲಿನ ಕೃಷಿ ಚಟುವಟಿಕೆ ಗೆ ಹಿನ್ನಡೆಯಾಗಿದೆ.
-ಕರುಣಾಕರ ಶೆಟ್ಟಿ ಕೆದೂರು , ಆದರ್ಶ ಕೃಷಿಕರು ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ