Advertisement

ಆಸ್ಸಾಂನಲ್ಲಿ ಕನ್ನಡ ಕಂಪು ಬೀರಿದ ಕರುನಾಡ ತಂಡ

03:15 PM May 31, 2017 | Team Udayavani |

ಧಾರವಾಡ: ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಅಧಿಧೀನ ಸಂಸ್ಥೆಯಾದ ಸಿ.ಸಿ.ಆರ್‌.ಟಿ ಸೆಂಟರ್‌ ಫಾರ್‌ ಕಲ್ಚರಲ್‌ ರಿಸೋರ್ಸಸ್‌ ಆ್ಯಂಡ್‌ ಟ್ರೇನಿಂಗ್‌ ಕೇಂದ್ರ ಆಸಾಂ ರಾಜ್ಯದ ಗುವಾಹತಿಯಲ್ಲಿ ನಡೆಸಿದ ಸಂಸ್ಕೃತಿ ವಿನಿಮಯ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಧಾರವಾಡ ಮತ್ತು ದಾವಣಗೆರೆ ಜಿಲ್ಲೆಗಳಿಂದ ಆಯ್ದ 10 ಜನ ಪ್ರೌಢಶಾಲಾ ಶಿಕ್ಷಕರು ಭಾಗವಹಿಸಿ ಗಮನ ಸೆಳೆದಿದ್ದಾರೆ. 

Advertisement

ಮೇ 17 ರಿಂದ ಜೂನ್‌ 6ರವರೆಗೆ ಈ ಸಾಂಸ್ಕೃತಿಕ ವಿನಿಮಯ ಹಾಗೂ ಅಧ್ಯಯನ ತರಬೇತಿ ನಡೆದಿದ್ದು, ಇಲ್ಲಿ ಭಾರತದ ಭವ್ಯ ಪರಂಪರೆ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸಗಳು ಮತ್ತು ಚರ್ಚೆ ಸಂವಾದ ನಡೆಯುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಶಿಕ್ಷಕರೊಂದಿಗೆ ವಿಶೇಷ ಸಂವಾದ ಮತ್ತು ಭಾಷಾ ಶಾಸ್ತ್ರಗಳ ಅಧ್ಯಯನ ಕೂಡ ನಡೆಯುತ್ತದೆ.

ಶಿಬಿರದಲ್ಲಿ ಪಾಲ್ಗೊಂಡಿರುವ  ಸಂಜೀವಕುಮಾರ ಭೂಶೆಟ್ಟಿ, ವಿಶ್ವನಾಥ ಎಸ್‌.ವಿ. ಅವರು  “ಕರ್ನಾಟಕದ ಇತಿಹಾಸ, ರಾಜ್ಯದ ಉಗಮ, ರಾಜ್ಯವನ್ನು ಏಕೀಕರಿಸುವಲ್ಲಿ ಶ್ರಮಿಸಿದ ಮಹನೀಯರು’ ವಿಷಯವಾಗಿ, ಬಸವರಾಜ ಕಡೆತೋಟದ, ಶಾಂತಕುಮಾರ ಅವರು “ವಾಸ್ತುಶಿಲ್ಪ ಹಾಗೂ ಸಂಗೀತ’, ಸತೀಷ ಮರಿಯಕ್ಕನವರ, ಸಿದ್ದರಾಜು ಅವರು

“ವಿಜ್ಞಾನ ತಂತ್ರಜ್ಞಾನ ಮತ್ತು ಆಹಾರ ಪದ್ಧತಿ’, ಬಸವರಾಜ ಲೋಬೋಗೋಳ, ಯೋಗಾನಂದ ಪತ್ತಾರ ಅವರು “ಕಲೆ, ಕ್ರೀಡೆ’, ದೇವಾನಂದ ಹಿರೇಮಠ ಮತ್ತು ವಿಶ್ವನಾಥ ಜಂಬಗಿ “ಕರ್ನಾಟಕದ ಭೌಗೋಳಿಕ ರಚನೆ ಹಾಗೂ ಜನಪದ ಸಂಸ್ಕೃತಿ’ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿ ಗಮನ ಸೆಳೆದಿದ್ದಾರೆ. ಆಸ್ಸಾಂನಲ್ಲಿ ಪಾಲ್ಗೊಂಡ 12 ರಾಜ್ಯಗಳ ಒಟ್ಟು 77 ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next