Advertisement

ರಸದೌತಣ ನೀಡಿದ ಕರುಂಬಿತ್ತಿಲ್‌ ಶಿಬಿರ 

09:26 PM Jun 22, 2018 | |

ಸಂಗೀತ ಕಲಾಭಿಮಾನಿಗಳ ಬಹು ನಿರೀಕ್ಷೆಯ ಕರುಂಬಿತ್ತಿಲ್‌ ಸಂಗೀತ ಶಿಬಿರ -2018 ಧರ್ಮಸ್ಥಳ ಸಮೀಪದ ನಿಡ್ಲೆಯ ಕರುಂಬಿತ್ತಿಲ್‌ ಮನೆಯಂಗಳದಲ್ಲಿ ಮೇ 23ರಿಂದ 5 ದಿನಗಳ ಪರ್ಯಂತ ಜರಗಿತು. ಹಿರಿಯ ಪಿಟೀಲು ವಿದ್ವಾಂಸ ವಿಠಲ ರಾಮಮೂರ್ತಿ ಚೆನ್ನೈ  ಹಾಗೂ ಅವರ ಸಹೋದರಿಯರು ಸೇರಿ ಪ್ರತಿ ವರ್ಷವೂ ಸಂಗೀತ ಶಿಬಿರ ನಡೆಸಿಕೊಂಡು ಬರು ತ್ತಿದ್ದು, ಈ ಬಾರಿಯ 19ನೇ ವರ್ಷದ ಶಿಬಿರದಲ್ಲಿ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗ ವಹಿಸಿದ್ದರು. ಕೃಷ್ಣಗಾನ ಸುಧಾ ಗ್ಲೋಬಲ್‌ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಶಿಬಿರವನ್ನು ಸಂಗೀತ ಕ್ಷೇತ್ರದ ದಿಗ್ಗಜ ವಿ| ವಿ.ವಿ. ಸುಬ್ರಹ್ಮಣ್ಯಂ ಅವರು ಉಜಿರೆ ವಿಜಯರಾಘವ ಪಡ್ವೆಟ್ನಾಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು.

Advertisement

ಸಂಪನ್ಮೂಲ ವ್ಯಕ್ತಿಗಳಾಗಿ ವಿ| ನೈವೇಲಿ ಸಂತಾನ ಗೋಪಾಲನ್‌, ವಿ| ಉಡುಪಿ ಗೋಪಾಲ ಕೃಷ್ಣನ್‌, ವಿ| ಶ್ರೀಮುಷ್ಟಂ ರಾಜಾರಾವ್‌, ನೈವೇಲಿ ಆರ್‌. ನಾರಾಯಣನ್‌, ವಿ.ವಿ.ಎಂ. ಮುರಾರಿ, ವಿಶಾಲ್‌ ಸಪೂರಮ್‌ ಭಾಗವಹಿಸಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಸಂಗೀತ ವಿದ್ವಾಂಸರಿಂದ ವಿಶೇಷ ಕಛೇರಿಗಳು, ಸಂಗೀತ ಪ್ರಾತ್ಯಕ್ಷಿಕೆ ಹಾಗೂ ಸಂಗೀತ ಪಾಠಗಳು ಸಂಗೀತಾಭ್ಯಾಸಕ್ಕೆ ಅಪೂರ್ವ ಅವಕಾಶ ಒದಗಿಸಿತ್ತು. ಕಲಾಭಿಮಾನಿಗಳಿಗೆ ಸಂಗೀತ ರಸದೌತಣ ನೀಡಿತ್ತು. ಭಾಗವಹಿಸಿದ ಎಲ್ಲ ಕಲಾವಿದರು ಸಂಗೀತ ಶಿಬಿರದ ಬಗೆಗೆ ಶ್ಲಾಘಿಸಿ ಅಭಿನಂದಿಸಿದ್ದಾರೆ.

ಮೇ 27ರಂದು ನಡೆದ ಸಮಾರೋಪ ಸಮಾರಂಭದಲ್ಲಿ ನೈವೇಲಿ ಸಂತಾನ ಗೋಪಾಲನ್‌ ಸಂಗೀತ ಕಛೇರಿಯನ್ನು ಭಾವ ಪೂರ್ಣವಾಗಿ ನಡೆಸಿ ಕೊಟ್ಟರು. ವಯಲಿನ್‌ನಲ್ಲಿ ವಿ.ವಿ.ಎಂ. ಮುರಾರಿ, ಮೃದಂಗದಲ್ಲಿ ಶ್ರೀಮುಷ್ಣಂ, ಖಂಜಿರದಲ್ಲಿ ಭಾರ್ಗವ ಹಾಲಂಬಿ ಮತ್ತು ಸಿದ್ಧಾರ್ಥ ಮತ್ತು ಕೃತಿ ಭಟ್‌ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ನಾದಯೋಗಿ ವಿ.ವಿ. ಸುಬ್ರಹ್ಮಣ್ಯಂ ದಂಪತಿಗಳನ್ನು ವಿಠಲ ರಾಮಮೂರ್ತಿ ದಂಪತಿಗಳು ಸಮ್ಮಾನಿಸಿ ಗೌರವಿಸಿದರು. 

ಶ್ರೀನಿವಾಸ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next