ಗಂಗಾವತಿ :ನಮ್ಮ ಕನಸುಗಳನ್ನು ನನಸು ಮಾಡುವ ಅಸ್ತ್ರವೇ ಶಿಕ್ಷಣವಾಗಿದೆ. ಸಾಧಕರ ಸಾಧನೆಯಿಂದ ಪ್ರೇರಣೆಗೊಂಡು ಗುರಿ ಸಾಧಿಸುವಂತೆ ಪ್ರಾಧ್ಯಾಪಕ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿ ವಿದ್ಯಾವಿಷಯಕ್ ಪರಿಷತ್ ಸದಸ್ಯ ಕರುಗೂಳಿ ಸಂಕೇಶ್ವರ ಹೇಳಿದರು .
ಅವರು ನಗರದ ಐಎಂಎ ಭವನದಲ್ಲಿ ಸಂಕಲ್ಪ ಮಹಾವಿದ್ಯಾಲಯದ ರ್ಯಾಂಕ್ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ಶಾಲಾ ಕಾಲೇಜಿನಲ್ಲಿ ಕಲಿಯಲು ಜತೆಗೆ ಎಲ್ಲೆಡೆಯೂ ಕಲಿಯಬೇಕಾಗಿದೆ.ಪಾಲಕರ ಕನಸು ನನಸಾಗುಸಬೇಕು. ಪ್ರೀತಿಸುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಪೂರಕವಾಗಿ ಕೆಲಸ ಮಾಡಬೇಕು.ನಿರಂತರ ಕಲಿಯುವ ಮೂಲಕ ವಿದ್ಯಾರ್ಥಿನಿಯರು ಸಾಮಾಜಿಕ ಸಮಾನತೆ ಸಾರುವ ಜತೆಗೆ ಸಾಧಕರ ಹಿತನುಡಿ ಪಾಲಿಸಿ ಉದ್ದಾರವಾಗಬೇಕು.ಕಾಯಕ ಮಾಡುವ ಮೂಲಕ ದೇಶವನ್ನು ಪ್ರೀತಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಹೇಮಂತರಾಜ ಕಲ್ಮಂಗಿ,ಬಸವರಾಜ ಕೇಸರಟ್ಟಿ,ಮಲ್ಲಿಕಾರ್ಜುನ ಸಿಂಗನಾಳ,ಶಂಕರಲಿಂಗಪ್ಪ ಕೊಪ್ಪದ್ ,ಮಂಜುನಾಥ ಸ್ವಾಮಿ ಇದ್ದರು.ಇದೇ ಸಂದರ್ಭದಲ್ಲಿ
ರ್ಯಾಂಕು ವಿಜೇತರಾದ ಮಹಾಲಕ್ಷ್ಮಿ ,ಮಂಜುಳಾ ಗಿಣಿವಾರ, ಸುಷ್ಮಾ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾ ಸಾಧಕಿ ಅನಿತಾ ಇವರನ್ನು ಸನ್ಮಾನಿಸಲಾಯಿತು .